ಲೋಕದರ್ಶನ ವರದಿ
ಚಿಕ್ಕೋಡಿ ಜುಲೈ 3: ಕಾಮರ್ಿಕರ ಬೇಡಿಕೆಗಳ ಕುರಿತು ಹಾಗೂ ನೊಂದ ಕುಟುಂಬಗಳಿಗೆ ಪರಿಹಾರ ಹಾಗೂ ಮಧ್ಯಾಹ್ನ ಬಿಸಿಯೂಟ ತಯಾರಿಸುವ ಕಾಮರ್ಿಕರಿಗೆ ವೇತನ ನೀಡುವದು ಏಪ್ರಿಲ್ ತಿಂಗಳಿನಿಂದ ವೇತನ ಹಾಗೂ ಅವರಿಗೆ ಇನ್ನಿತರ ಸೌಲಭ್ಯ ನೀಡುವಂತೆ ಒತ್ತಾಯಿಸಿ ತಹಶೀಲ್ದಾರ ಮೂಲಕ ಪ್ರಧಾನ ಮಂತ್ರಿಗಳಿಗೆ ಸಿಐಟಿಯು(ಸೆಂಟರ್ ಆಫ್ ಇಂಡಿಯಾ ಟ್ರೇಡ್ ಯೂನಿಯನ್) ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.
ಕೊರೊನಾ ವೈರಸ್ ಹಬ್ಬಿದರಿಂದ ಇಡೀ ದೇಶವೆ ತಲ್ಲಣಗೊಂಡಿದೆ. ಕೊರೋನಾ ದಾಳಿಯನ್ನು ತಡೆಯುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ವೈರಸ್ ಹರಡರುವ ಮೊದಲೇ ಕೇಂದ್ರ ಸರಕಾರ ಈ ಕುರಿತು ವಿಚಾರ ಮಾಡಿದ್ದರೆ ಭಾರತ ದೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಸೊಂಕಿತರ ಸಂಖ್ಯೆ ಏರುತ್ತಿರಲಿಲ್ಲ. 17 ಸಾವಿರದಷ್ಟು ಸಾವಿನ ಸಂಖ್ಯೆ ಆಗುತ್ತಿರಲಿಲ್ಲ. ಕೊವೀಡ್-19 ಸಾಂಕ್ರಾಮಿಕ ರೋಗವು ದೇಶದ ಜನತೆಯನ್ನು ಬಾದಿಸುತ್ತಿದೆ. ರಾಜ್ಯದಲ್ಲಿ, ಬೆಂಗಳೂರಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚುತ್ತಲಿವೆ. ದೇಶದಲ್ಲಿ ಆಥರ್ಿಕತೆ ಕುಸಿಯುತ್ತಾ ಹೊರಟಿದೆ. ಇದರಿಂದ ಜನಸಾಮಾನ್ಯ-ದುಡಿಯುವ ಜನರ ಬದುಕು ದುಸ್ಥರವಾಗಿದೆ.
ಆದಾಯ ತೆರಿಗೆ ಪಾವತಿ ಮಾಡುವವರನ್ನು ಬಿಟ್ಟು ಉಳಿದ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ರೂ.7500ರಂತೆ 6 ತಿಂಗಳ ವರೆಗೆ ನಗದು ವಗರ್ಾವಣೆ ಮಾಡಬೇಕು. ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ. ಯಂತೆ 6 ತಿಂಗಳ ಪಡಿತರ ನೀಡಬೇಕು. ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಕೂಲಿಯನ್ನು 600 ರೂಪಾಯಿಗೆ ಏರಿಕೆ ಮಾಡಿ, ಕನಿಷ್ಠ ವರ್ಷದಲ್ಲಿ 200 ದಿನಗಳ ಉದ್ಯೋಗ ನೀಡಬೇಕು. ನಗರದ ನಿರುದ್ಯೋಗಿಗಳಿಗೆ ತಕ್ಷಣವೇ ನಿರುದ್ಯೋಗ ಭತ್ಯೆಯನ್ನು ಪ್ರಕಟಿಸಬೇಕು. ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು, ಸಾರ್ವಜನಿಕ ವಲಯದ ಖಾಸಗೀಕರಣವನ್ನು, ಕಾಮರ್ಿಕ ಕಾನೂನುಗಳ ರದ್ದತಿಯನ್ನು ನಿಲ್ಲಿಸಬೇಕು. ಕನರ್ಾಟಕದಲ್ಲಿ ಆರೋಗ್ಯ ಪರಿಕರಗಳು, ವೆಂಟಿಲೇಟರ್ಸ್, ಅಗತ್ಯ ಔಷದಿಗಳ ತೀವ್ರ ಕೊರತೆ ಇದ್ದು,
ಅವುಗಳನ್ನು ಗರಿಷ್ಟ ಪ್ರಮಾಣದಲ್ಲಿ ರಾಜ್ಯಕ್ಕೆ ಪೂರೈಸಬೇಕು. ಡಿಸೇಜ್-ಪೆಟ್ರೋಲ್ ಬೆಲೆ ಇಳಿಸಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿ ಆದೇಶ ವಾಪಾಸ್ಸ್ ಆಗಬೇಕು. ಸ್ಕೀಂ ನೌಕರರಿಗೆ ಗೌರವ ಧನ ನೀಡಬೇಕು ಕೊರೋನಾ ಪ್ರಂಟಲೈನ್ ವಾರಿಯರ್ಸ್ರನ್ನು ಕಾಯಂಗೊಳಿಸಬೇಕು. ಕಾಮರ್ಿಕ ಕಾನೂನುಗಳನ್ನು ತಿದ್ದುಪಡಿ ಮಾಡಿದ ಆದೇಶ ವಾಪಸ್ಸಾಗಬೇಕು. ಲಾಕ್ಡೌನ್ ಕಾಲಾವಧಿಯ ಪೂರ್ಣ ವೇತನ ನೀಡಬೇಕು ಹಾಗೂ ಕೆಲಸ ನೀಡಬೇಕೆಂದು ಒತ್ತಾಯಿಸಿದರು.ಬಿಸಿಯೂಟ ನೌಕರರಿಗೆ ಏಪ್ರಿಲ್ ತಿಂಗಲಿನಿಂದ ಶಾಲೆ ಪ್ರಾರಂಭವಾಗುವರಿಗೆ ವೇತನ ನೀಡಬೇಕು. ಬಿಸಿಯೂಟ ನೌಕರರು ಕಾಯಂ ನೌಕರನ್ನಾಗಿ ಮಾಡಬೇಕು. ಬಿಸಿಯೂಟ ನೌಕರರಿಗೆ ಎಲ್ ಐಸಿ ಆಧಾರಿತ ಸರಕಾರ ಪಿಂಚಣಿ ಜಾರಿಗೆ ತರಬೇಕು ಎಂದು ಒತ್ತಆಯಿಸಿದರು. ಅಧ್ಯಕ್ಷ ಡಿ.ಕೆ.ಭಜನಾಯಕ, ಖಜಾಂಚಿ ಎಸ್.ಆರ್, ಉರಣೆ, ಕಾರ್ಯದಶರ್ಿ ಎಸ್.ಎಸ್.ಮಾಳಿ ಪಂಚಾಯತ ನೌಕರರ ಸಂಘ ಎಸ್.ಐ.ಸಯ್ಯದ, ಸುಧಾಕರ ಮಗದುಮ್ ಅಂಗನವಾಡಿ ನೌಕರರ ಸಂಘ ಗುರವ್ವಾ ಮಡಿವಾಳ, ಭಾರತಿ ಸನದಿ ಅಕ್ಷರ ದಾಸೋಹ ನೌಕರರ ಸಂಘ ಶಿವಲೀಲಾ ಪಾಟೀಲ, ಪಾರ್ವತಿ ದೇಶನೂರ ಇತರರು ಇದ್ದರು.