ಭೂಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಮನವಿ

Appeal to issue title deeds to landowners

ಧಾರವಾಡ 17: ತಾಲೂಕಿನ ಮುಮ್ಮಿಗಟ್ಟಿ  ಗ್ರಾಮದ ರೈತನ ಬಂಧನ ಮಾಡಿರುವುದನ್ನು ಮತ್ತು  ಸಾಗುವಳಿದಾರರಿಗೆ  ಕಿರುಕುಳ ತಪ್ಪಿಸಿ, ಅವರ ಮೇಲಿನ ಕೇಸ್‌ನ್ನು ರದ್ದು ಮಾಡುವಂತೆ ಹಾಗೂ  ಹಕ್ಕು ಪತ್ರ ನೀಡಲು ರಾಜ್ಯ ಸರ್ಕಾರದ ರೈತ ವಿರೋದಿ ನೀತಿಯನ್ನು ಖಂಡಿಸಿ  ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಎ ಐ ಕೆ ಕೆ ಎಂ ಎಸ್ ಧಾರವಾಡ ಜಿಲ್ಲಾ ಸಮಿತಿ ತಹಶೀಲ್ದಾರ ಕಛೇರಿ ಎದರು ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗಳಿಗೆ ಮತ್ತು  ಕಂದಾಯ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲ್ಲಾಯಿತು.  

ಕಂದಾಯ ಸಚಿವರು ನೀಡಿರುವ ಹೇಳಿಕೆಯಂತೆ  ಎಲ್ಲಾ ಸಾಗುವಳಿದಾರರಿಗೆ ಹಕ್ಕು ಪತ್ರ  ನೀಡಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಅದರಂತೆ ಜಿಲ್ಲಾ ಮಟ್ಟದಲ್ಲೂ ಕೂಡ ಭೂ ಮಂಜುರಾತಿ ಸಮಿತಿಯಿಂದ ಕೂಡಲೇ ಸಭೆಯನ್ನು ಕರೆದು, ಸರ್ವೇ ಮಾಡಿ ಅರ್ಹ ರೈತರಿಗೆ ಭೂಮಿಯನ್ನು ಹಂಚಿಕೆ ಮಾಡಿ ಹಕ್ಕು ಪತ್ರವನ್ನು ನೀಡಲು ಕ್ರಮ ಕೈಗೊಳ್ಳಬೇಕು, ಮುಮ್ಮಿಗಟ್ಟಿ ಗ್ರಾಮದ ರ‌್ಯತರ ಹೆಸರುಗಳು ಹೆಸರುಗಳು ಉತಾರದಲ್ಲಿ ದಾಖಾಲಾಗಿವೆ, ಈ ಕೋಡಲೇ ಪೋರ್ಡ ಮಾಡಿ ಹಕ್ಕು ಪತ್ರ ನೀಡಬೇಕೆಂದು  ಒತ್ತಾಯಿಸುತ್ತೇವೆ.  

ಪ್ರತಿಭಟನೆ ಸಭೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ ಮಾತನಾಡಿದ್ದರು. ಪ್ರತಿಭಟನೆಯ  ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ವಹಿಸಿದ್ದರು, ಈ ಸಂದರ್ಭದಲ್ಲಿ ರೈತರಾದ ಬಸಪ್ಪ ನೇಕಾರ, ಕಲ್ಲಪ್ಪ,  ಬಸಪ್ಪ ಬಡಾರಿ, ನಾಗರಾಜ ಕೋಟೂರು, ಪಾರವ್ವ, ಗೌರಮ್ಮ, ಮಹಾದೇವಮ್ಮ ಕಿತ್ತೂರು ಮುಂತಾದವರು ವಹಿಸಿದ್ದರು.