ಜಿಲ್ಲಾ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಶಾಸಕ ನಾಡಗೌಡ ಅವರಿಗೆ ಮನವಿ

Appeal to MLA Nad Gowda demanding payment of outstanding bills of district contractors

ಮುದ್ದೇಬಿಹಾಳ 02: ಈಗಾಗಲೆ ಲೋಕೋಪಯೋಗಿ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ, ಹಾಗೂ ಪಂಚಾಯತ್ ರಾಜ್ ಇಲಾಖೆ, ಮಹಾನಗರ ಪಾಲಿಕೆ, ನಗರ ಪಾಲಿಕೆ, ಪಟ್ಟಣ ಪಂಚಾಯಿತಿಗಳು ಹಾಗೂ ವಿವಿಧ ನಿಗಮ ಮಂಡಳಿಗಳಲ್ಲಿ ಕೆಲಸ ಪೂರ್ಣಗೊಳಿಸಿ ಎರಡು ಮೂರು ವರ್ಷಗಳ ಗತಿಸಿದರು ಬಿಲ್ ಪಾವತಿ ಆಗಿರುವುದಿಲ್ಲ ಸದರಿ ವಿಷಯ ಕುರಿತು ಬೆಂಗಳೂರಿನಲ್ಲಿ ಜರುಗಿದ ಹಾಗೂ ಬೆಳಗಾವಿಯಲ್ಲಿ ಜರುಗಿದ ವಿಧಾನಸಭೆಯ ಕಲಾಪಗಳಲ್ಲಿಯೂ ಕೂಡ ಪ್ರಸ್ತಾಪವಾಗಿರುತ್ತದೆ.  

ಈ ವಿಷಯವೂ ತಮ್ಮ ಗಮನಕ್ಕೆ ಕೂಡ ಬಂದಿರಬಹುದು ಅಲ್ಲದೆ ಟಿವಿ ಮಾಧ್ಯಮ, ಪತ್ರಿಕಾ ಮಾಧ್ಯಮ, ಸಂಘದ ಪರವಾಗಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿಯನ್ನು ಸಲ್ಲಿಸಲಾಗಿರುತ್ತದೆ ಅದಾಗ್ಯೂ ಸರಕಾರವು ಯಾವುದೇ ಕ್ರಮ ಜರುಗಿಸಿರುವುದಿಲ್ಲ ಇದರಿಂದ ಗುತ್ತಿಗೆದಾರರು ಹಾಗೂ ಅವರನ್ನು ಅವಲಂಬಿಸಿದ ಕುಟುಂಬಗಳು ಕೂಡ ಬೀದಿಪಾಲಾಗಿರುವ ಪರಿಸ್ಥಿತಿ ಉದ್ಭವಿಸಿರುತ್ತದೆ ಈ ಎಲ್ಲ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ದಿನಾಂಕ 14 ರಂದು ಜಿಲ್ಲೆಯ ಐದು ರಿಂದ ಆರು ಸಾವಿರ ಗುತ್ತಿಗೆದಾರರು ಹಾಗೂ ಕಾರ್ಮಿಕ ಸಿಬ್ಬಂಧಿ ವರ್ಗ, ಪೂರೈಕೆದಾರರು, ವ್ಯಾಪಾರಸ್ಥರು ಸೇರಿ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕೆ ಫೆಬ್ರುವರಿ 2025ರ ಒಳಗಾಗಿ ಬಿಲ್ಲುಗಳು ಪಾವತಿಸಲು ವಿನಂತಿಸಲಾಗಿತ್ತು ಆದರೆ ಇದುವರೆಗೂ ಕ್ರಮ ಜರುಗಿರುವುದಿಲ್ಲ. 

ಕಾರಣ ಮಾರ್ಚ 15 2025ರ ಒಳಗಾಗಿ ಬಿಲುಗಳು ಪಾವತಿಸಲು ಸರಕಾರದ ಮೇಲೆ ಒತ್ತಡ ಹೇರಿ ಬಿಲ್ಲುಗಳು ಬಟವಡೆ ಮಾಡುವಂತೆ ಕ್ರಮ ಜರುಗಿಸಬೇಕಾಗಿ ವಿನಂತಿಸಿದರು   ಜಿಲ್ಲಾಧ್ಯಕ್ಷ  ಸಿ. ಆರ್‌. ರೂಡಗಿ,  ತಾಲೂಕಾ ಅಧ್ಯಕ್ಷ ಸುರೇಶಗೌಡ ಪಾಟೀಲ,  ಅರುಣ ಎಸ್‌. ಮಠ,ಆರ್‌.ಆಯ್‌. ಡೋಣೂರಮಠಸುನೀಲ್ ಉಳ್ಳಾಗಡ್ಡಿ ಆಯ್‌. ಎಮ್‌. ಪಟ್ಟಣಶೆಟ್ಟಿ, ಎ. ಡಿ. ಮಡಗೊಂಡ  ಗುರು ಕಮಲಗಿ ಅಧ್ಯಕ್ಷರು ಇಂಡಿ ಘಟಕ  ರಮೇಗೌಡ ಎಸ್‌. ಪಾಟೀಲ (ಧೈರುಣಗಿ) ಅಧ್ಯಕ್ಷ ಬಸವನ ಬಾಗೇವಾಡಿ ಘಟಕ  ಅರುಣಕುಮಾರ ಬಿ. ನರಸಿರಡ್ಡಿ, ಅಧ್ಯಕ್ಷ ಸಿಂದಗಿ ಘಟಕ  ಮುತ್ತು ಎಮ್‌. ಮುಂಡೆವಾಡಗಿ, ಎಮ್‌. ಆರ್‌. ತಾಂಬೋಳಿ, ಆರ್‌. ಬಿ. ಅಸ್ತಿ,  ಸಿದ್ದು ಬಿ. ಬಿರಾದಾರ, ಸುಜಿತ್ ಎಸ್‌. ಬಿಂಜಲಭಾವಿ, ಶಾಮ ಪಾತ್ರದ,  ಜೆ. ಜಿ. ಕಲ್ಲೂರ,  ಆರ್‌. ಎಮ್‌. ಮಾವಿನಗಿಡದ,  ಎ. ಎಸ್‌. ಬಿರಾದಾರ