ಲೋಕದರ್ಶನ ವರದಿ
ಘಟಪ್ರಭಾ: ಕಳೆದು ತಿಂಗಳ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿ ಮತ್ತು ಭೀಕರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.
ಪ್ರವಾಹದ ನೀರಿನಲ್ಲಿ ಸಿಲುಕಿ ಬಿದ್ದ ಮನೆಗಳನ್ನು ಕಳೆದುಕೊಂಡು ಸಾವಿರಾರು ಜನರು ನಿರಾಶ್ರಿತ ಕೇಂದ್ರಗಳಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಸಕರ್ಾರ 10 ಸಾವಿರ ರೂಪಾಯಿ ನೀಡಿದ್ದರೂ ಸಹ ಬಿದ್ದ ಮನೆಗಳಗೆ ಹಣ ಬಿಡುಗಡೆ ಮಾಡಿಲ್ಲ. ಅದರಲ್ಲಿ ಸಂತ್ರಸತರು ಸಾಲ ಸೂಲ ಮಾಡಿ ಮನೆ ಕಟ್ಟಿಕೊಳ್ಳಲು ಮುಂದ್ದಾರೆ ಆದರೆ ಸ್ವಂತ ಖಚರ್ಿನಲ್ಲಿ ಮನೆ ಕಟ್ಟಿಕೊಂಡರೆ ಸಕರ್ಾರದ ಪರಿಹಾರ ಸಿಗುವುದಿಲ್ಲ ಅಂತ ಸುದ್ಧಿ ಹಬ್ಬಿದ್ದು ಮತ್ತೊಮ್ಮೆ ನಿರಾಶ್ರಿತರಿಗೆ ಸಂಕಷ್ಟ ತಂದಿದೆ.
ಸಕರ್ಾರದ ನಿಯಮದಂತೆ ಅಧಿಕಾರಿಗಳು ಮನೆಗಳ ಹಾನಿಗೆ ಅನುಗುಣವಾಗಿ ಎ.ಬಿ.ಸಿ.ಡಿ ಎಂದು ಮನೆಗಳನ್ನು ವಿಂಗಡನೆ ಮಾಡಿದ್ದಾರೆ. ಎ ದಜರ್ೆದಲ್ಲಿ ಇದ್ದ ಮನೆಗೆ 5 ಲಕ್ಷ, ಬಿ,ಗೆ 1 ಲಕ್ಷ ಸಿ,ಗೆ 75 ಸಾವಿರ ಹಾಗೂ ಡಿ,ಗೆ 25 ಸಾವಿರ ಹಣ ನೀಡುವುದಾಗಿ ಭರವಸೆ ನೀಡಲಾಗಿದೆ.
ಮಲ್ಲಾಪೂರ ಪಿ.ಜಿ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 50 ಮನೆಗಳು ಬಿದ್ದಿದ್ದು, ಅದರಲ್ಲಿ 4ಎ, 11 ಬಿ ಹಾಗೂ 35 ಸಿ ಹಂತದಲ್ಲಿ ಮನೆಗಳು ಹಾನಿಯಾಗಿದೆ. ಧುಪದಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಒಟ್ಟು 48 ಮನೆಗಳು ಬಿದ್ದಿದ್ದು, ಅದರಲ್ಲಿ 2ಎ, 6ಬಿ ಹಾಗೂ 40ಸಿ ಹಂತದಲ್ಲಿ ಮನೆಗಳು ಹಾನಿಯಾಗಿವೆ.
ಈಗಾಗಲೆ ಅಧಿಕಾರಿಗಳು ತಮ್ಮ ಸಮೀಕ್ಷೆಯನ್ನು ಪೂರ್ಣಗೊಳಿಸಿ ಆನಲೈನ ಮೂಲಕ ವರದಿ ಸಲ್ಲಿಸಿದ್ದರೂ ಸಹ ಸಕರ್ಾರದಿಂದ ಬರಬೇಕಾದ ಪರಿಹಾರ ಸಂತ್ರಸ್ತರಿಗೆ ಬಂದು ತಲುಪಿಲ್ಲ.
ಸ್ವಂತ ಖಚರ್ಿನಿಂದ ಮನೆ ಕಟ್ಟಿಕೊಂಡರೆ ಸಕರ್ಾರದಿಂದ ಬರುವ ಅನುದಾನ ಬರುವುದಿಲ್ಲ ಅಂತ ಹೇಳಲಾಗುತ್ತಿದೆ. ಆನಲೈನಲ್ಲಿ ಜಿಪಿಎಸ್ ಮಾಡಿದ ನಂತರವೇ ನೀವು ಮನೆ ಕಟ್ಟಬೇಕು. ಆನಲೈನಲ್ಲಿ ಜಿಪಿಎಸ್ ಮಾಡುವ ಮುಂಚೆ ಮನೆ ಕಟ್ಟಿದರೆ ಸಕರ್ಾರದ ಹಣ ಸಂದಾಯ ಮಾಡಲು ಅವಕಾಶವಿಲ್ಲ ಅಂತ ಹೇಳುತ್ತಿದೆ.
ಇದರಿಂದ ಇತ್ತ ಮನೆಯನ್ನೂ ಕಟ್ಟಲು ಆಗದೇ. ಇತ್ತ ತಮ್ಮ ಹೆಂಡತಿ ಮಕ್ಕಳನ್ನು ಕಟ್ಟಿಕೊಂಡು ನಿರಾಶ್ರಿತ ಕೇಂದ್ರದಲ್ಲಿ ಜೀವನ ಸಾಗಿಸಲು ಆಗದೆ ಸಂತ್ರಸ್ತರು ಪರದಾಡುತ್ತಿದ್ದಾರೆ. ಕೂಡಲೇ ರಾಜ್ಯ ಸಕರ್ಾರ ಹಾಗೂ ಜಿಲ್ಲಾಡಳಿತ ಬಿದ್ದ ಮನೆಗಳನ್ನು ನಿಮರ್ಿಸಕೊಳ್ಳಲು ಸಂತ್ರಸ್ತರಿಗೆ ಆಗುತ್ತಿರುವ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ಅನುಕೂಲ ಮಾಡಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ.