ಬೆಳಗಾವಿ, 4: ನಗರದ ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾಷರ್ಿ ಕೋತ್ಸವ-ಬ್ಲಿಸ್-2019ರ ಕಾರ್ಯಕ್ರಮ ಜರುಗಿತು.
ಪರಮ ಪೂಜ್ಯ ಜಗದ್ಗುರು ಡಾ|| ತೋಂಟದ ಸಿದ್ಧರಾಮ ಮಹಾಸ್ವಾಮಿಜಿಯವರು ಸಾನಿಧ್ಯವಹಿಸಿ ಮಾತನಾಡುತ್ತ, ವಿದ್ಯಾರ್ಥಿ ಗಳು ತಾವು ಕಲಿತ ವಿದ್ಯೆ ಮತ್ತು ಜ್ಞಾನದಿಂದ ಸಮಾಜದಲ್ಲಿನ ಸಮಸ್ಯಗಳಿಗೆ ಪರಿಹಾರಗಳನ್ನು ದೊರಕಿಸಿಕೊಡಬೇಕಾಗಿದೆ, ಕೆಲವು ನಿರ್ಧಿ ಷ್ಟ ಪರಿಹಾರಗಳನ್ನು ತಾಂತ್ರಿಕತೆಯೊಡನೆ ಪರಿಹರಿಸಿದಾಗ ಎಲ್ಲರ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ. ಇಂದು ವಿದ್ಯೆಯೊಂದಿಗೆ ನೈತಿಕತೆ ಮತ್ತು ಮಾನವೀಯತೆಯನ್ನು ಮೈಗೂಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಮನುಕುಲದ ಒಳಿತಿಗಾಗಿ ಬಳಸುವುದು ಇಂದು ಅತ್ಯಂತ ಆತ್ಯಂತ ಆದ್ಯತೆಯ ವಿಷಯವಾಗಿದೆ ಎಂದು ತಿಳಿಸಿದರು.
ವಾಷರ್ಿಕೋತ್ಸವ ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾಥರ್ಿ-ವಿದ್ಯಾರ್ಥಿ ನಿಯರನ್ನು, ವಿವಿಧ ಸ್ಥರಗಳಲ್ಲಿ ತಾಂತ್ರಿಕ ಪ್ರಬಂಧ ಮಂಡಿಸಿದ ವಿದ್ಯಾಥರ್ಿ ಮತ್ತು ಶಿಕ್ಷಕರನ್ನು, ಆಟೋಟಗಳಲ್ಲಿ ಭಾಗವಹಿಸಿದ ಆಟಗಾರರನ್ನು, ಪ್ರತಿಷ್ಟಿತ ಕಂಪನಿಗಳ ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾಥರ್ಿಗಳನ್ನು ಈ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಪದಕ ಹಾಗೂ ನಗದು ಬಹುಮಾನ ಸಹಿತ 4ನೇ ರ್ಯಾಂಕ್ ಎಂ.ಟೆಕ್ ಸಿವಿಲ್ ಇಂಜಿನೀಯರಿಂಗನ ಸ್ಟ್ರಕ್ಚರಲ್ ಇಂಜನೀಯರಿಂಗನ ವಿದ್ಯಾಥರ್ಿನಿ ಕು.ಕಿರಣ ಸಿಂದಿಗರ್ ಅವರನ್ನು, ಎರಡನೇ ವರ್ಷದ ಸಿವಿಲ್ ಇಂಜನೀಯರಿಂಗನ ವಿದ್ಯಾರ್ಥಿ ನಿ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕು> ಸಂಗೀತಾ ತಿವರಿಯವರಿಗೆ 5001-00 ರೂನ ನಗದು ಬಹುಮಾನವನ್ನು ದಿವಂಗತ ಶ್ರೀಮತಿ ಮಹಾದೇವಿ ಬೂಧಿಹಾಳ( ಪ್ರಾಂಶುಪಾಲ ಡಾ|| ಸಿದ್ದರಾಮಪ್ಪ ವಿ. ಇಟ್ಟಿಯವರ ಸಹೋದರಿ)ರ ಹೆಸರಿನಲ್ಲಿ ಕೊಡಮಾಡಿತು. ಕುಮಾರ ವರ್ಧಮಾನ್ ಬಿ ಮತ್ತು ಕುಮಾರಿ ನೌಷೀನ್ ಪಠಾಣರನ್ನು ವರ್ಷದ ಅತ್ಯುತಮ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿ ನಿ ಎಂಬ ಬಹುಮಾನಗಳನ್ನು ಘೋಷಿಸಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನ ಹೊಸ ವೆಬ್ಸೈಟನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ|| ಸಿದ್ಧರಾಮಪ್ಪ ಇಟ್ಟಿ ಸ್ವಾಗತಿಸಿದರು, ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ರಾದ ಶ್ರೀ ಎಸ್.ಜಿ.ಸಂಬರಗಿಮಠ ಉಪಸ್ಥಿತರಿದ್ದರು, ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ|| ವೀರಣ್ಣ ಡಿ.ಕೆ ವಂದಿಸಿದರು, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಅರ್ಪಿ ತಾ ಹಾಗೂ ಕುಮಾರಿ ಕಿರಣ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೋ.ಅಶ್ವಿನಿ ಕಾಕಡೆ, ಪ್ರೋ. ಮಾನಸ್ವೀಣಾ, ಕುಮಾರಿ ಮಾಲತಿ, ಕುಮಾರಿ ಅಪೂರ್ವ ನೆರವೇರಿಸಿದರು. ಎಲ್ಲ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಸ್ವಾಗತಿಸಲಾಯಿತು ಹಾಗೂ ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಯಾಯಿತು.