ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತೀಯ ಸಕ್ಕರೆ ಕಾರಖಾನೆಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆ
ಅಥಣಿ. 21 : ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತೀಯ ಸಕ್ಕರೆ ಕಾರಖಾನೆಗಳ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಕರ್ನಾಟಕದ ಅಧ್ಯಕ್ಷರಾಗಿ ಎರಡು ವರ್ಷಗಳ ಅವಧಿಗೆ ಕೆಂಪವಾಡದ ಅಥಣಿ ಶುಗರ್ಸ ಸಕ್ಕರೆ ಕಾರಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿ ಯೋಗೇಶ್ ಶ್ರೀಮಂತ ಪಾಟೀಲ ಸರ್ವಾನುಮತದಿಂದ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು. ಯೋಗೇಶ್ ಪಾಟೀಲ ಕಳೆದ ಅನೇಕ ವರ್ಷಗಳಿಂದ ಭಾರತೀಯ ಸಕ್ಕರೆ ಕಾರಖಾನೆಗಳ ಸಂಘದ ನಿರ್ದೇಶಕರಾಗಿ ಮತ್ತು ವೆಸ್ಟ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸದ್ಯ ದಕ್ಷಿಣ ಭಾರತದ ಸಕ್ಕರೆ ಕಾರಖಾನೆಗಳ ಅಧ್ಯಕ್ಷರಾಗಿ ಅಥಣಿ ಭಾಗದಿಂದ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅವಿರೋಧ ಆಯ್ಕೆ ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ವಿಜೇಂದ್ರ ಸಿಂಗ್, ಕಾರ್ಯದರ್ಶಿ ಡಾ. ಎಸ್ ಎಸ್ ಸಾಲಿಮಠ, ಚಾಮುಂಡಿ ಶುಗರ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಎಂ. ಶ್ರೀನಿವಾಸನ್, ಮೈಲಾರಿ ಶುಗರ್ ಕೋ ಲಿಮಿಟೆಡ್ ಚೇರ್ಮನ್ ಟಿ ರಾಮಕೃಷ್ಣಾ, ವ್ಯವಸ್ಥಾಪಕ ನಿರ್ದೇಶಕ ಉದಯ್ ಕುಮಾರ್ ಪುರಾಣಿಕಮಠ, ಕೋರ ಮಂಡೆಲ್ ಶುಗರ್ಸ್ ಉಪಾಧ್ಯಕ್ಷ ವಿ.ಜ ರವಿ ಸೇರಿದಂತೆ ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ನಿರ್ದೇಶಕರು, ಹಲವು ಕಾರ್ಖಾನೆಗಳ ಅಧಿಕಾರಿ ವರ್ಗದವರು, ಪದಾಧಿಕಾರಿಗಳು ಉಪಸ್ಥಿತರಿದ್ದರು.