ಲೋಕದರ್ಶನ ವರದಿ
ಮೂಡಲಗಿ 3: ಹಿಂದಿನ ಕಾಲದಲ್ಲಿ ಶಾಲೆಗಳು ಗುಡಿ-ಗುಂಡಾರಗಳಲ್ಲಿ, ಮರದ ಕೆಳಗೆ ನಡೆಯುತ್ತಿದ್ದವು ಅನಾನುಕೂಲತೆಯ ಮಧ್ಯೆ ಮಕ್ಕಳು ಓದಿ, ಶಿಕ್ಷಣ ಪಡೆಯುತ್ತಿದ್ದರು. ಇಂದು ಸೌಲಭ್ಯಗಳು ಅಧಿಕವಾಗಿವೆ ಆದರೆ ತಂತ್ರಜ್ಞಾನದ ಬಳಕೆ ಅವಶ್ಯಕತೆಗಿಂತ ಹೆಚ್ಚಾಗಿದ್ದು, ಮಕ್ಕಳ ಮಾನಸಿಕ, ದೈಹಿಕ ಭೌಧಿಕ ಬೆಳವಣಿಗೆ ಕುಂಠಿತವಾಗಲು ಕಾರಣವಾಗುತ್ತಿದೆ, ಈ ಬಗ್ಗೆ ಪಾಲಕರು ಹಾಗೂ ಶಿಕ್ಷಕರು ನಿಗಾ, ಕಾಳಜಿ ವಹಿಸಬೇಕಾಗಿದೆ ಎಂದು ಲೂಯಿ ಪಾಶ್ಚರ ಪ್ರಸಸ್ತಿ ವಿಜೇತ, ರೇಷ್ಮೆ ವಿಜ್ಞಾನಿ ಬೆಂಗಳೂರ ರೇಷ್ಮೆ ಮಂಡಳಿ ನಿದರ್ೆಶಕ ಡಾ. ಟಿ.ಎನ್.ಸೋನವಾಲ್ಕರ ಹೇಳಿದರು.
ಅವರು ಇಲ್ಲಿಯ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ಶ್ರೀಮತಿ ಎನ್.ಎನ್.ಸೊನವಾಲ್ಕರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಪಾಲಕರು ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಶಿಕ್ಷಣವನ್ನು ನೀಡಿ ವಿದ್ಯಾವಂತರನ್ನಾಗಿ ಮಾಡುವುದರ ಮೂಲಕ ಸಮಾಜದ ಮತ್ತು ದೇಶದ ಏಳಿಗೆಯಲ್ಲಿ ಸಕ್ರೀಯವಾಗ ಬೇಕೆಂದರು.
ಅತಿಥಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಸೋನವಾಲ್ಕರ ಅವರು ಕುಂಟುಂಬ ಹಿರಿಯರ ಮೇಲೆ ಎಷ್ಟು ಪ್ರೀತಿ ಎಂಬೂದಕ್ಕೆ ತಮ್ಮ ಅಜ್ಜ-ಅಜ್ಜಿ ಹೆಸರಿನಲ್ಲಿ ಶಾಲೆ ತೇರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ, ವಿದ್ಯಾಥರ್ಿಯು ಸಮಾಜದಲ್ಲಿ ಎತ್ತರಕ್ಕೆ ಬೆಳೆದಂತೆ ತಾವು ಕಲಿತ ಶಾಲೆಯನ್ನು ಮರೆಯದೇ ಕೃತಜ್ಞತಾ ಭಾವದಿಂದ ನಡೆಯಬೇಕು. ವಿದ್ಯಾಥರ್ಿಗಳ ಸಾಧನೆಗೆ ಪಾಲಕರು ಮತ್ತು ಶಾಲೆಗಳು ಎಮ್ಮೆ ಪಡೆಯಬೇಕು, ತಂದೆ-ತಾಯಿ ಮಗುವಿನ ಕೀತರ್ಿಯನ್ನು ಮಾತ್ರ ಬಯಸುವರು ಆ ನಿಟ್ಟಿನಲ್ಲಿ ವಿದ್ಯಾಥರ್ಿಗಳು ಸಂಸ್ಕಾರವಂತ ವ್ಯಕ್ತಿಗಳಾಗಿ ಉನ್ನತ ಸ್ಥಾನ ಅಲಂಕರಿಸಬೇಕೆಂದ ಅವರು ಕಡಿಮೇ ಅವಧಿಯಲ್ಲಿ ಸಾಕಷ್ಟು ವಿದ್ಯಾಥರ್ಿಗಳನ್ನು ಹೊಂದಿದ ಸೋನವಾಲ್ಕರ ಶಾಲೆ ಭವಿಷ್ಯದಲ್ಲಿ ಒಳ್ಳೆಯ ವಿದ್ಯಾಕೇಂದ್ರವಾಗಲಿದೆ ಎಂದರು.
ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರೊ.ಸಂಗಮೇಶ ಗುಜಗೊಂಡ ಮಾತನಾಡಿ, ಮಹಾತ್ಮಾ ಗಾಂಧಿಜಿ ಅವರು ಹೇಳಿದಂತೆ ಮಕ್ಕಳಿಗೆ ಮೊದಲ್ಲು ಶಿಸ್ತು ಬಹಳ ಮುಖ್ಯವಾದದು ನಂತರ ಅಕ್ಷರಾ ಭಾಷಾ ಆಟೋಪಕರ, ಪೀಟೋಪಕರ ಪ್ರಾರಂಭವಾಗುತ್ತದೆ, ಮಕ್ಕಳ ಮೇಲೆ ಪಾಲಕರು ಅಂಕಗಳಿಸಲು ಒತ್ತಡ ಹಾಕುವುದಕ್ಕಿಂತ ಪ್ರೇರಣೆ ಕೋಡುವುದು ಮುಖ್ಯವಾಗಿದೆ. ಪ್ರೀತಿ, ವಾತ್ಸಲ್ಯದಿಂದ ನೋಡಿಕೊಳ್ಳಲು ತಾಯಿ ಜವಾಬ್ದಾರಿ ಪ್ರಮುಖವಾಗಿದೆ, ಪ್ರೇರಣೆಯಿಂದ ಎಂತಹ ಅಸಾಧ್ಯ ಕಾರ್ಯಗಳನ್ನು ಮಾಡಬಹುದು ಎನ್ನುವುದಕ್ಕೆ ತೇನ ಸಿಂಗ ತನ್ನ ತಾಯಿ ಪ್ರೇರಣೆಯಿಂದ ದೇಶದ ಅತ್ತೀ ಎತ್ತರದ ಎವರೆಸ್ಟ್ ಶಿಖರವನ್ನು ಎರಿ ಸಾಧಿಸಿದ ಎಂದರು. ಸೋನವಾಲ್ಕರ ಶಾಲೆಯಲ್ಲಿ ಮಕ್ಕಳ ಸೂಕ್ತ ಪ್ರತಿಭೆಗಳನ್ನು ಗುರುತಿಸುವಂತ ಕಾರ್ಯಗಳು ನಡೆಯುತ್ತಿರುವದು ಶಾಲೆಯ ಆಡಳಿತ ಮಂಡಳಿ ಮಕ್ಕಳಿಗೆ ಕಲಿಕೆಯೊಂದಿಗೆ ಆಟ, ಪಾಠ ಸಂಸ್ಕೃತಿಕ ಕಾರ್ಯಗಳಿಗೆ ಪ್ರೋತ್ಸಹ ನೀಡುತ್ತಿರುವುದು ಶ್ಲಾಘನಿವಾದದ್ದು ಎಂದರು.
ಶಾಲೆಯ ಪ್ರಾಂಶುಪಾಲ ಜಗದೀಶ ಮರಳಿ ಮಾತನಾಡಿ, ವಿದ್ಯಾಥರ್ಿಗಳಿಗೆ ಗುಣಮಟ್ಟ ಶಿಕ್ಷಣದೊಂದಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ಅಧ್ಯಕ್ಷತೆ ವಹಿಸಿದರು, ಸಮಾರಂಭದಲ್ಲಿ ಡಾ: ಬಿ.ಸಿ.ಪಾಟೀಲ, ಪ್ರೊ.ಜಿ.ಸಿದ್ರಾಮರಡ್ಡಿ, ಪ್ರೊ.ಶಿವುಕುಮಾರ ಶಾಸ್ತ್ರೀಮಠ,ಪ್ರೊ.ಪಿ.ಕೆ.ರಡ್ಡೇರ, ವೆಂಕಟೇಶ ಸೋನವಾಲ್ಕರ, ಸಂತೋಷ ಸೋನವಾಲ್ಕರ, ಸಚೀನ ಸೋನವಾಲ್ಕರ, ಸಂದೀಪ ಸೋನವಾಲ್ಕರ ಮತ್ತಿತರು ಇದ್ದರು.