ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಜಯಂತ್ಯೋತ್ಸವ
ಧಾರವಾಡ 30: ಇಲ್ಲಿನ ರವಿವಾರ ಪೇಟೆಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಜಯಂತ್ಯೋತ್ಸವ. ಶ್ರೀ 108 ಶ್ರೀ ವಿಷ್ಣು ತೀರ್ಥ ಶ್ರೀಪಾದಂಗಳವರ ಶ್ರೀ ಕ್ಷೇತ್ರ ಮಾದಿನೂರ ಇವರಿಂದ ಪ್ರತಿಷ್ಠಾಪಿಸಲ್ಪಟ್ಟ, ಧಾರವಾಡದ ರವಿವಾರ ಪೇಟೆಯ ಶ್ರೀ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನ ಜಯಂತ್ಯೋತ್ಸವ ಮೇ. 04 ಹಾಗೂ ರಥೋತ್ಸವ ಮೇ. 05 ರಂದು ಜರುಗಲಿದೆ ಎಂದು ಪ್ರಧಾನ ಅರ್ಚಕರಾದ ವೆಮೂ ಪ್ರಕಾಶ ನಳರಾಜ ಆಚಾರ್ಯ ಟೊಣಪಿ ತಿಳಿಸಿದರು.
ಪತ್ರೀಕಾಗೊಷ್ಟಿಯಲ್ಲಿ ಮಾತನಾಡಿದ ಅವರುಪ್ರತಿ ಸಲದಂತೆ ಇದೇ ವೈಶಾಖ ಶುಽಽ ದಶಮಿ ಏ. 30ರಂದು ರವಿವಾರ ಶ್ರೀ ಲಕ್ಷ್ಮೀ ನರಸಿಂಹ ಜಯಂತಿ ಪ್ರಯುಕ್ತ ಕಲ್ಯಾಣ್ಯೋತ್ಸವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಪಂಚಾಮೃತ ಅಭಿಷೇಕಾದಿಗಳು ನಡೆಯುತ್ತವೆ. ಶ್ರೀ ಲಕ್ಷ್ಮೀ ನರಸಿಂಹ ಜಯಂತ್ಯೋತ್ಸವ ಮೇ. 04 ರಂದು ಗುರುವಾರ ಸಹಸ್ರಶಂಖ ಕ್ಷೀರಾಭಿಷೇಕ ಹಾಗೂ ರಥೋತ್ಸವ ಮೇ. 05 ಶುಕ್ರವಾರರಂದು ಬೆಳಿಗ್ಗೆ 9 ಘಂಟೆಗೆ ಜರುಗಲಿದೆ ಎಂದರು.
ಭಕ್ತಾಭಿಮಾನಿಗಳು ಈ ದೇವತಾಕಾರ್ಯದಲ್ಲಿ ಭಾಗವಹಿಸಿ ಶ್ರೀ ಹರಿ ಕೃಪೆಗೆ ಅನುಗ್ರಹಿತಾರಬೇಕೆಂದು ಹುಣ್ಣಿಮೆ ದಿನದಂದು ಮಹಾಪ್ರಸಾದ ವಿತರಣೆ ಶ್ರೀ ವಿಠಲ ಮಂದಿರ ದೇಸಾಯಿ ಗಲ್ಲಿ ಧಾರವಾಡದಲ್ಲಿ ಮಧ್ಯಾಹ್ನ 12.30 ರಿಂದ 3 ಘಂಟೆಯವರೆಗೆ ಇರುವದು, ಶ್ರೀ ಹರಿ ಕೃಪೆಗೆ ಪಾತ್ರರಾಗಿ ಸೇವೆ ಸಲ್ಲಿಸುವವರು 9902486694, 9972664793 ಮೊಬೈಲ್ ವಾಟ್ಸ್ ಆಪ್ ಮುಖಾಂತರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ಮೂಲಕ ಪ್ರಸಾದವನ್ನು ಸ್ವೀಕರಿಸಬೇಕೆಂದು ಕೋರಿದರು. ಪತ್ರಿಕಾ ಗೋಷ್ಠಿಯಲ್ಲಿ ರಾಜೇಂದ್ರ ಟೊಣಪಿ, ಸುಧೀರ್ ಕಾಂತನವರ, ಗೋಪಾಲ ಕಿತ್ತೂರ, ಮಾಲತೇಶ ಕುಲಕರ್ಣಿ, ಸಂತೋಷ ಮಹಾಲೆ ಉಪಸ್ಥಿತರಿದ್ದರು