ಅನ್ನಪ್ರಸಾದ ನಿಲಯವು ಪುಣ್ಯದ ಕಾರ್ಯ ಮಾಡುತ್ತಿದೆ: ಪಿ. ಗಂಗಾಧರ

ಲೋಕದರ್ಶನ ವರದಿ

ಗದಗ 23: ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ ಅಂತಹ ಪುಣ್ಯದ ಕಾರ್ಯವನ್ನು ನಗರದ ಅನ್ನಪೂಣರ್ೆಶ್ವರಿ ಪ್ರಸಾದ ನಿಲಯವು ನಿರಂತರ ಮೂರು ವರ್ಷ ಪೂರೈಸಿ 4 ನೇ ವರ್ಷಕ್ಕೆ ಕಾಲಿಟ್ಟಿರುವುದು ಪ್ರಶಂಸನೀಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಾದೇಶಿಕ ನಿದರ್ೇಶಕ ಪಿ.ಗಂಗಾಧರ ರೈ ಅವರು ಹೇಳಿದರು.

ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಅನ್ನಪೂಣರ್ೆಶ್ವರಿ ಪ್ರಸಾದ ನಿಲಯದ 3 ನೇ ವಾಷರ್ಿಕೋತ್ಸವದ 1098 ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಭೂಲೋಕದಲ್ಲಿ ಸ್ವರ್ಗವನ್ನು ಸೃಷ್ಟಿಸಿದ ಸಿದ್ದಗಂಗಾಮಠದ ಲಿಂ.ಡಾ. ಶಿವಕುಮಾರ ಸ್ವಾಮೀಜಿ ಅವರ ಅಂತ್ಯಕ್ರಿಯ ಸಂದರ್ಭದಲ್ಲಿ ಸುಮಾರು 12 ಲಕ್ಷ ಜನರು ಪಾಲ್ಗೊಂಡು ಪ್ರಸಾದ ಸ್ವೀಕಾರ ಮಾಡಿರುವುದು ಒಂದು ಇತಿಹಾಸವಾಗಿದೆ.ಅಂತಹ ಸೇವೆಯನ್ನು ನಾವುಗಳು ಇಲ್ಲಿ ಕಾಣುತ್ತಿದ್ದೆವೆ. ಅಲ್ಲದೇ 1098 ನೇ ದಿನದ ಅಂಗವಾಗಿ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ ತಂಡದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು.  

ಜಿ.ಪಂ ಅಧ್ಯಕ್ಷ ಎಸ್.ಪಿ.ಬಳಿಗಾರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಮಕ್ಕಳ ರಕ್ಷಣೆ ಬಗ್ಗೆ ಹೆಚ್ಚು ಜಾಗೃತರಾಗಬೇಕಿದೆ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ 0-18 ವರ್ಷದ ಮಕ್ಕಳಿಗೆ ತೊಂದರೆ ಕಾಣಿಸಿಕೊಂಡಲ್ಲಿ 1098 ಮಕ್ಕಳ ಸಹಾಯವಾಣಿಗೆ ಪೋನ್ ಮಾಡುವ ಮೂಲಕ ಅವರಿಗೆ ಹೆಚ್ಚಿನ ರಕ್ಷಣೆ ಒದಗಿಸಬೇಕಾಗಿದೆ ಎಂದು ಹೇಳಿದರು. 

ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ರವಿ ಗುಂಜಿಕರ್ ಅವರು ಮಾತನಾಡಿ, ಹಸಿದವರಿಗೆ ಅನ್ನ ನೀಡುತ್ತಿರುವುದು ಮಹಾಸೇವೆಯಾಗಿದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ಸಾಕಷ್ಟು ಅನುಕೂಲವಾಗಿದೆ ಇಂತಹ ಸೇವಾ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು ಅಂದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು. 

ಮಕ್ಕಳ ಸಹಾಯವಾಣಿ ಸಿಬ್ಬಂದಿಗಳಾದ ಸುರೇಶ ಮಳೇಕರ, ಕೆ.ಕೆ.ಮಾಳೋದೆ,ವಿನಾಯಕ ಗುಗ್ಗರಿ, ಮಧುಕೇಶ್ವರ ಕೋರ್ಪಡೆ,ಅಶ್ವಿನಿ ಹಿರೇಮಠ, ಪ್ರಭಾವತಿ ಬೆಟಗೇರಿ, ಉಮಾ ಬಾಕರ್ಿ, ಗೀತಾ ಪತ್ತಾರ ಅವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಜಿಲ್ಲಾ ನಿದರ್ೇಶಕ ಶಿವಾನಂದ ಆಚಾರ್ಯ, ತಾಲ್ಲೂಕು ಯೋಜನಾಧಿಕಾರಿ ಸುಕೇಶ ಎ.ಎಸ್, ನಿಲಯದ ಮಹಾದಾನಿ ಜೆ.ಐ. ಬೆಳಮಕರ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷೆ ಕೆ.ಆರ್. ನಾಯ್ಕರ, ಸದಸ್ಯೆ ಅನ್ನಪೂರ್ಣ ಗಾಣಗೇರ,ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಕಾಶ ವಾಲಿ,  ನಿಲಯದ ಪದಾಧಿಕಾರಿಗಳಾದ ಎಸ್.ಎಸ್.ಕಳಸಾಪೂರ ಶೆಟ್ಟರ, ವಿಜಯಮಹಾಂತೇಶ ಭಗವತಿ, ಶೈಲಜಾ ಕೋಡಿಹಳ್ಳಿ, ಸುಭದ್ರಾ ನೀಲಪ್ಪನವರ, ಸೇವಾಕರ್ತ ಮುತ್ತು ಜಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಂಜುನಾಥ ಬಮ್ಮನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಇಮರಾಪೂರ ವಂದಿಸಿದರು.