ಹೊಸ್ತಿಲ ಹುಣ್ಣಿಮೆಯ ನಿಮಿತ್ಯ ಅನ್ನ ದಾಸೋಹ

ಲೋಕದರ್ಶನ ವರದಿ

ಘಟಪ್ರಭಾ 22: 17ನೇ ವರ್ಷದ ಸವದತ್ತಿ ರೇಣುಕಾ-ಎಲ್ಲಮ್ಮಾದೇವಿಯ ದರ್ಶನಕ್ಕೆ ಹೊಸ್ತಿಲ ಹುಣ್ಣಿಮೆಯ ಯಾತ್ರಾ ನಿಮಿತ್ಯ ಕೊಲ್ಹಾಪೂರದಿಂದ ಸವದತ್ತಿಗೆ ತೆರಳುವ ಭಕ್ತಾಧಿಗಳಿಗೆ ಸ್ಥಳೀಯ ಕೆ.ಎಚ್.ಐ. ಆಸ್ಪತ್ರೆಯ ಹೊರ ಭಾಗದಲ್ಲಿ ಕೊಲ್ಲಾಪೂರ ಛತ್ರಪತಿ ಶಾಹು ಮಹಾರಾಜರ ವಂಶಸ್ಥರಿಂದ ಯಾತ್ರೆಯಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 7000ಕ್ಕೂ ಹೆಚ್ಚು ಭಕ್ತಾಧಿಗಳಿಗೆ ಅನ್ನ ಪ್ರಸಾದವನ್ನು ನೆರವೆರಿಸಿದರು.

ಈ ಸಂದರ್ಭದಲ್ಲಿ ಶಾಹು ಮಹಾರಾಜರ ವಂಶಸ್ಥರಾದ ಮಾಲೊಜಿರಾಜೆ ಛತ್ರಪತಿ, ಧರ್ಮಪತ್ನಿ ಮಧುರೀಮಾರಾಜೆ ಛತ್ರಪತಿ, ಕೆ.ಎಚ್.ಐ. ಆಸ್ಪತ್ರೆಯ ಮುಖ್ಯಾಧಿಕಾರಿಗಳಾದ ಘಣಶ್ಯಾಮ ವೈದ್ಯ, ಸ್ವಾತಿ ವೈದ್ಯ ಹಾಗೂ ಬಿ.ಎನ್. ಶಿಂಧೆ ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.