ಲೋಕದರ್ಶನ ವರದಿ
ರಾಮದುರ್ಗ 14: ನವರಸಗಳನ್ನು ತುಂಬಿದ ನಾಟಕಗಳಿಂದ ಉತ್ತಮ ಸಾಮಾಜಿಕ ಸಂದೇಶರವಾನೆ ಸಾಧ್ಯವಿದೆ.ಪ್ರಾಚೀನ ಕಲೆಗಳಲ್ಲಿ ಒಂದಾದ ನಾಟಕ ಮನರಂಜನಾ ಕಲೆಗಳಲ್ಲಿ ಪ್ರಮುಖವಾಗಿದೆ.ವಿಡಂಬನೆಯ ಮೂಲಕ ಸಮಾಜದಅಂಕು ಡೊಂಕುಗಳನ್ನು ತಿದ್ದಲು ನಾಟಕಗಳು ಸಹಾಯಕಾರಿಎಂದುಜಿಲ್ಲಾಧಿಕಾರಿಡಾ. ಎಸ್.ಬಿ. ಬೊಮ್ಮನಹಳ್ಳಿ ಅವರು ಹೇಳಿದರು.
ಶುಕ್ರವಾರ ಸಂಜೆಸ್ಥಳೀಯಡಿ.ಎಸ್. ಕಕರ್ಿರಂಗಮಂದಿರದಲ್ಲಿರಾಮದುರ್ಗಕಲ್ಚರಲ್ಟ್ರಸ್ಟ್ ಮತ್ತು ಶಿವ ಪ್ರತಿಷ್ಠಾಪನಾ ಸೇವಾ ಸಮಿತಿಆಶ್ರಯದಲ್ಲಿ ಏರ್ಪಡಿಸಿದ್ದ ನಾಟಕೋತ್ಸವ ಕಾರ್ಯಕ್ರಮವನ್ನು ಡೋಲಕ್ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದಿನ ಕಳೆದಂತೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ನಾಟಕಎಂದರೆ ಏನು? ಎಂದು ಕೇಳುವ ಪ್ರಸಂಗ ಬರುತ್ತದೆ.
ಅದಕ್ಕಾಗಿ ನಮ್ಮದೇಶದ ಸಂಸ್ಕೃತಿಯ ಪ್ರತಿಬಿಂಬವಾದ ನಾಟಕಕಲೆಯನ್ನು ನಾವೆಲ್ಲರು ಪ್ರೋತ್ಸಾಹಿಸಬೇಕಾಗಿದೆ ಎಂದು ಅವರು ಹೇಳಿದರು.
ಧಾರವಾಡದಡಾ.ದ.ರಾ.ಬೇಂದ್ರೆರಾಷ್ಟ್ರೀಯ ಸ್ಮಾರಕಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠಅವರು ಮಾತನಾಡುತ್ತ ರಾಮದುರ್ಗ ಪಟ್ಟಣವು ಕಲೆ, ಸಾಹಿತ್ಯ ಸಂಗೀತ ಸಂಸ್ಕೃತಿಯನ್ನು ಬೆಳೆಸತಕ್ಕಂತ ಕೇಂದ್ರವಾಗಿದೆ ಎಂಬುದಕ್ಕೆ ಇಲ್ಲಿ ನೆರೆದಿರುವ ಪ್ರೇಕ್ಷಕರೇ ಸಾಕ್ಷಿಯಾಗಿದ್ದಾರೆ ಎಂದರು.
ಸಿ.ಎಸ್. ಬೆಂಬಳಗಿ ಕಾಲೇಜು ಪ್ರಾಂಶುಪಾಲ ಪ್ರೊಎಸ್.ಎಸ್. ಕೊಡತೆ ಮಾತನಾಡಿದರು. ಶಿವ ಪ್ರತಿಷ್ಠಾಪನಾ ಸೇವಾ ಸಮಿತಿ ಉಪಾಧ್ಯಕ್ಷ ಪ್ರದೀಪ್ ಪಟ್ಟಣ ಸಮಾರಂಭ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಗಿರೀಶ್ ಸ್ವಾದಿ, ಕಲ್ಚರಲ್ಟ್ರಸ್ಟ್ ಅಧ್ಯಕ್ಷ ವಿಶ್ವನಾಥಕುಂಬಾರ, ಉಪಾಧ್ಯಕ್ಷ ಈಶ್ವರ ಹಾಲಭಾವಿ, ನಂದಕುಮಾರ್ ಸುರೇಬಾನ, ಮುತ್ತುಕಮ್ಮಾರ, ಲಕ್ಷ್ಮಣ ಮುಗಳಿ, ಶಂಕ್ರಮ್ಮ ಮುಗಳಿ ಸೇರಿದಂತೆ ಇತರರಿದ್ದರು.
ರಂ. ಶಾ. ಲೋಕಾಪುರರಚನೆಯ ಮಹಾದೇವ ಹಡಪದ ನಿದರ್ೆಶನದಲ್ಲಿ ಸಂಕಾನಟ್ಟಿಚಂದ್ರಿ ನಾಟಕವನ್ನು ಹೂವಿನ ಹಡಗಲಿಯರಂಗ ಭಾರತಿರೆಪರ್ಟರಿತಂಡದ ಸದಸ್ಯರು ಪ್ರಸ್ತುತ ಪಡಿಸಿದರು. ರಾಜರಾಜೇಶ್ವರಿ ಭಜನಾತಂಡದ ಸದಸ್ಯರು ಪ್ರಾಥರ್ಿಸಿದರು. ಟ್ರಸ್ಟ್ ಕಾರ್ಯದಶರ್ಿ ಪ್ರಕಾಶ್ ಬಾಳಿಕಾಯಿ ಸ್ವಾಗತಿಸಿದರು. ರಾಮಚಂದ್ರ ಯಾದವಾಡ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು.