ಧಾರವಾಡ 18: ವಿದ್ಯಾಥರ್ಿಗಳ ಸಂತಸದ ಕಲಿಕೆಗೆ ಪೂರಕವಾಗಿ ಶಿಕ್ಷಕರಲ್ಲಿ ಕ್ರಿಯಾಪ್ರೇರಕ ಬೋಧನಾ ಅವಲೋಕನ ಇರಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕನರ್ಾಟಕ ಶೈಕ್ಷಣಿಕ ವಲಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ನಿದರ್ೇಶಕ ಎನ್.ಎಸ್. ಕುಮಾರ ಪ್ರತಿಪಾದಿಸಿದರು.
ಅವರು ಕನರ್ಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪ ಬುಧವಾರ ಹಮ್ಮಿಕೊಂಡಿದ್ದ 10 ನೇ ತರಗತಿಯ ಗಣಿತ ಶಿಕ್ಷಕ-ಶಿಕ್ಷಕಿಯರ ಕಾಯರ್ಾಗಾರವನ್ನು ಹಾಗೂ ಪಸಕ್ತ ಅವಧಿಯ ವಿಜ್ಞಾನ ಮಂಟಪದ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿದ್ಯಾಥರ್ಿಗಳ ಮನಸ್ಥಿತಿಯಲ್ಲಿರುವ ಗಣಿತದ ಕಲಿಕಾ ಭಯವನ್ನು ನಿವಾರಿಸುವಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಜೊತೆಗೆ ವಿಷಯಾಧಾರಿತ ವಿಷಯ ಜ್ಞಾನವನ್ನು ಹೊಂದುವಲ್ಲಿ ಶಿಕ್ಷಕರು ಆಸಕ್ತಿಯಿಂದ ಶ್ರಮಿಸಬೇಕು. ಗಣಿತ ಮೂಲಕ್ರಿಯೆಗಳ ಪರಿಕಲ್ಪನೆಗಳನ್ನು ವಿದ್ಯಾಥರ್ಿಗಳು ಅರಿಯುವಲ್ಲಿ ಶಿಕ್ಷಕರು ಸೃಜನಶೀಲ ಬೋಧನಾ ಕೌಶಲಗಳನ್ನು ಅರಿತು ಕಲಿಸಲು ಮುಂದಾಗಬೇಕು ಎಂದರು.
ವಿದ್ಯಾಥರ್ಿಗಳಲ್ಲಿರಬಹುದಾದ ಕಲಿಕಾ ದೋಷಗಳನ್ನು ಹಾಗೂ ಕಲಿಕಾ ಕಂದಕಗಳ ನಿವಾರಣೆಗೆ ತಮ್ಮದೇ ಅದ ಸಾಮಾನ್ಯ ಜ್ಞಾನವನ್ನು ಶಿಕ್ಷಕರು ತಮ್ಮ ಬೋಧನೆಯಲ್ಲಿ ಸೇರಿಸಿದಾಗ ತರಗತಿಗಳಲ್ಲಿ ಸಂತಸದ ಕಲಿಕೆ ಸಾಧ್ಯವಾಗುತ್ತದೆ. ಎಸ್.ಎಸ್.ಎಲ್.ಸಿ.ಯ ಬದಲಾದ ಗಣಿತದ ಪಠ್ಯ ಬೋಧನೆಯನ್ನು ಸರಳೀಕರಣಗೊಳಿಸುವಲ್ಲಿ ವಿದ್ಯಾಥರ್ಿಗಳ ಕಲಿಕಾ ಕೊರತೆಗಳನ್ನು ನೀಗಿಸಲು ಇಂದಿನ ಗಣಿತದ ಕಾಯರ್ಾಗಾರ ಎಲ್ಲ ಶಿಕ್ಷಕ-ಶಿಕ್ಷಕಿಯರಿಗೆ ನೆರವಾಗಲಿ ಎಂದೂ ಕುಮಾರ ಶುಭ ಹಾರೈಸಿದರು.
ಧಾರವಾಡ ಗ್ರಾಮೀಣ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಮಾತನಾಡಿ, ಶಿಕ್ಷಕರು ನಿತ್ಯವೂ ಪಠ್ಯಕ್ರಮದ ಅಧ್ಯಯನವನ್ನು ಮೈಗೂಡಿಸಿಕೊಳ್ಳಬೇಕು. ಪಠ್ಯದ ಆಚೆಗೂ ಇರುವ ವಿಷಯಾಧಾರಿತ ಬೋಧನಾ ಸಂಗತಿಗಳನ್ನು ಅರಿತಾಗ ಶಿಕ್ಷಕರ ತರಗತಿ ಬೋಧನೆ ಕ್ರಿಯಾಶೀಲಗೊಂಡು ವಿದ್ಯಾಥರ್ಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಹಿರಿಯ ಪತ್ರಕರ್ತ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ಸಂಸದರು, ಶಾಸಕರು ಹಾಗೂ ರಾಜಕೀಯ ನಾಯಕರು ತಮ್ಮದೇ ಆದ ಖಾಸಗಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಬಾರದು. ಜನಸಾಮಾನ್ಯರ ಮಕ್ಕಳು ವಿದ್ಯಾರ್ಜನೆ ಬಯಸಲು ಸೇರುವ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಎಲ್ಲರೂ ಆಸಕ್ತಿಯಿಂದ ಶ್ರಮಿಸಬೇಕು. ಸರಕಾರಿ ಶಾಲಾ ಶಿಕ್ಷಕರು ವಗರ್ಾವಣೆ ಭೀತಿಯಿಂದ ಮುಕ್ತಗೊಳ್ಳಬೇಕು. ರಶಿಯಾದಲ್ಲಿ ಶಿಕ್ಷಕರಿಗೆ ಎಂದೂ ವಗರ್ಾವಣೆಯೇ ಇಲ್ಲ ಎಂದರು.
ಅಧ್ಯಾಪಕ ಡಾ. ಲಿಂಗರಾಜ ರಾಮಾಪೂರ, ನಿವೃತ್ತ ಉಪನ್ಯಾಸಕ ಕೆ.ಜಿ.ದೇವರಮನಿ, ಗಣಿತ ಶಿಕ್ಷಕ ರಾಮದಾಸ ಪೈ ಹಾಗೂ ವಿದ್ಯಾಥರ್ಿನಿ ಸ್ವಾತಿ ಭಾವಿಕಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾಯರ್ಾಗಾರದಲ್ಲಿ ಪಾಲ್ಗೊಂಡು ವಿಚಾರ ಹಂಚಿಕೊಂಡರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವಿಜ್ಞಾನ ಮಂಟಪದ ಸಂಚಾಲಕ, ಹಿರಿಯ ಪತ್ರಕರ್ತ ಮನೋಜ ಪಾಟೀಲ ವಿಜ್ಞಾನ ಮಂಟಪದ ಕಾರ್ಯಚಟುವಟಿಕೆಗಳ ಕುರಿತು ಆಶಯ ನುಡಿ ಹಂಚಿಕೊಂಡರು. ಕನರ್ಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಜೀವನ ಶಿಕ್ಷಣ ಮಾಸ ಪತ್ರಿಕೆಯ ಸಹಸಂಪಾದಕ ಗುರುಮೂತರ್ಿ ಯರಗಂಬಳಿಮಠ ನಿರೂಪಿಸಿದರು. ಹುಬ್ಬಳ್ಳಿ-ಧಾರವಾಡ ನಾಗರಿಕ ಆರೋಗ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ವಸಂತ ಅಕರ್ಾಚಾರ ವಂದಿಸಿದರು.
ಹಿರಿಯ ಶಿಕ್ಷಣ ತಜ್ಞ ಶಿವಶಂಕರ ಹಿರೇಮಠ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶಾಂತೇಶ ಗಾಮನಗಟ್ಟಿ, ವಿಜ್ಞಾನ ಮಂಟಪದ ಸಲಹಾ ಸಮಿತಿ ಸದಸ್ಯ ಟಿ.ಎಫ್. ನಾಗಲಾವಿ ಮುಂತಾದವರು ಇದ್ದರು.