ಲೋಕದರ್ಶನ ವರದಿ
ಗಂಗಾವತಿ: ಅನ್ನಭಾಗ್ಯ ಯೋಜನೆಯಡಿ ಬಡವರರಿಗಾಗಿ ನೀಡಲಾಗುತ್ತಿರುವ ಅಕ್ಕಿಯನ್ನು ಗಂಗಾವತಿ ತಾಲೂಕಿನಾಧ್ಯಂತ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ, ಕೂಡಲೇ ಈ ಅಕ್ರಮವನ್ನು ತಡೆಗಟ್ಟಲು ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾಜಿ ಸೇನೆ ಜಿಲ್ಲಾ ಅಧ್ಯಕ್ಷ ಸೈಯದ್ ಅಸ್ಲಾಂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮಾತನಾಡಿದ ಅವರು ಅನ್ನಭಾಗ್ಯ ಯೋಜನೆಯು ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸಕರ್ಾರ ಜಾರಿಗೆ ತಂದ ಮಹತ್ತರ ಯೋಜನೆಯಾಗಿರುತ್ತದೆ. ಈ ಯೋಜನೆಯಿಂದ ಕಡುಬಡವರು ಹಾಗೂ ಆಥರ್ಿಕವಾಗಿ ಹಿಂದುಳಿದ ವರ್ಗಗಳಿಗೆ ಪಡಿತರ ವಿತರಣೆ ಮೂಲಕ ಲಾಭ ಪಡೆದುಕೊಳ್ಳುವಂತಾಗಿದ್ದು, ಆದರೆ ಇತ್ತೀಚೆಗೆ ಗಂಗಾವತಿ ತಾಲೂಕಿನಾಧ್ಯಂತ ನ್ಯಾಯಬೆಲೆ ಅಂಗಡಿ ಮಾಲಿಕರು ಹಾಗೂ ಪ್ರಭಾವಿ ವ್ಯಕ್ತಿಗಳು ಮತ್ತು ಇಲಾಖೆಯ ಅಧಿಕಾರಿಗಳು ಸೇರಿಕೊಂಡು ದಿನನಿತ್ಯ ಕ್ವಿಂಟಲ್ಗಟ್ಟಲೆ ಅಕ್ಕಿಯನ್ನು ಲಾರಿಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಿ, ಭ್ರಷ್ಟಾಚಾರವೆಸಗುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈ ಅಕ್ರಮವನ್ನು ಕೂಡಲೇ ತಡೆಗಟ್ಟುವಂತೆ ಅವರು ಒತ್ತಾಯಿಸದರು. ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕಾ ಅಧ್ಯಕ್ಷರಾದ ಇಮಾಮ ಹುಸೇನ್, ತಾಲೂಕ ಉಪಾಧ್ಯಕ್ಷರಾದ ಮಹಾಂತೇಶ, ಪದಾಧಿಕಾರಿಗಳಾದ ಸೈಯ್ಯದ ಸಲ್ಮಾನ್, ಇರ್ಷಾದ್, ಶಫಿ, ಜಮೀರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.