ಶೇಡಬಾಳ 22: ವಿಕಲಚೇತನ ಮಕ್ಕಳ ಶರೀರ ವಿಕಲವಾಗಿದ್ದರೂ ಅವರ ಮನಸ್ಸು ಸಬಲವಾಗಿರುತ್ತದೆ. ಅವರಿಗೆ ಅನುಕಂಪ ತೋರಿಸುವ ಬದಲಿಗೆ ಅವಕಾಶ ನೀಡಿ ಎಂದು ಕಾಗವಾಡ ಕ್ಷೇತ್ರ ಸಮನ್ವಯಾಧಿಕಾರಿ ರವೀಂದ್ರ ಖಡಾಖಡಿ ಹೇಳಿದರು.
ಅವರು ಗುರುವಾರ ದಿ. 22 ರಂದು ಕಾಗವಾಡ ಸಕರ್ಾರಿ ಮರಾಠಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯರ್ಾಲಯ, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾಯರ್ಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಕಲಚೇತನ ಮಕ್ಕಳ (ಸಿಡಬ್ಲೂಎಸ್ಎನ್) ವೈದ್ಯಕೀಯ ಮೌಲ್ಯಾಂಕನ ಶಿಬಿರವನ್ನುದ್ದೇಶಿಸಿ ಮಾತನಾಡುತ್ತಿದ್ದರು. ವಿಕಲಚೇತನ ಮಕ್ಕಳು ದೇವರ ಸಮಾನರಾಗಿದ್ದು ಅವರನ್ನು ತಾತ್ಸಾರದಿಂದ ಕಾಣದೇ ಪ್ರೀತಿ ತೋರಿಸಿದಾಗ ಅವರು ಎಲ್ಲರಂತೆ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿರಲು ಸಾಧ್ಯವೆಂದು ಹೇಳಿದರು.
ಅಥಣಿ ತಾಲೂಕಾ ಅಂಗವಿಕಲ ಸಂಘದ ಅಧ್ಯಕ್ಷ ಬಾಬುರಾವ ಮಾನಗಾಂವೆ ಮಾತನಾಡಿ ಮಹಿಳೆಯರು ಪ್ರಸವ ಪೂರ್ವದಲ್ಲಿ ಮುಂಜಾಗ್ರತೆ ವಹಿಸದೇ ಇರುವದರಿಂದ ವಿಕಲಚೇತನ ಮಕ್ಕಳು ಜನ್ಮ ತಾಳುತ್ತಾರೆ. ಕಾರಣ ಪ್ರಸವ ಹಾಗೂ ಪ್ರಸವ ಪೂರ್ವದಲ್ಲಿ ಗಭರ್ಿಣಿ ಮಹಿಳೆಯರು ಪೌಷ್ಠಿಕಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವಂತೆ ಕರೆ ನೀಡಿದರು. ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ವಿಕಲಚೇತನ ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾಗವಾಡ ಗ್ರಾ.ಪಂ ಅಧ್ಯಕ್ಷ ಶ್ರೀದೇವಿ ಚೌಗಲಾ, ಅಥಣಿ ತಾಲೂಕಾ ಅಂಗವಿಕಲ ಸಂಘದ ಅಧ್ಯಕ್ಷ ಬಾಬಾರಾವ ಮಾನಗಾಂವೆ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಆರ್.ಡಿ.ಸೊಲಂದಕರ, ಪ್ರಾಥಮಿಕ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಬಿ.ಎ.ಕಾಂಬಳೆ, ಸಾರ್ವಜನಿಕ ಆಸ್ಪತ್ರೆ ವೈಧ್ಯಾಧಿಕಾರಿಗಳು, ಬಿಆರ್ಪಿ ಜಿ.ಜಿ.ಹಡಪದ, ಪ್ರಧಾನ ಗುರುಗಳಾದ ಭೋಸಲೆ, ಬಿಆರ್ಸಿ ಸಿಬ್ಬಂದಿ ವರ್ಗ, ವಿಕಲಚೇತನ ಮಕ್ಕಳು, ಪಾಲಕರು ಹಾಜರಿದ್ದರು. ಜಿ.ಜಿ. ಹಡಪದ ಸ್ವಾಗತಿಸಿದರು. ಆರ್.ಟಿ.ಕುರುಬರ ವಂದಿಸಿದರು.