ರಾಣೇಬೆನ್ನೂರು 17 : ಮಾಸೂರಿನ ಯುವತಿ ಸ್ವಾತಿ ಬ್ಯಾಡಗಿ ಅವರ ಹತ್ಯೆಯನ್ನು ಖಂಡಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ನಗರದಲ್ಲಿ ಬಾರಿ ಪ್ರತಿಭಟನೆ ನಡೆಸಿ, ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ, ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸಿದರು. ಸೋಮವಾರ ಇಲ್ಲಿನ ಖನ್ನೂರ ನರ್ಸಿಂಗ್ ಕಾಲೇಜು ಆವರಣದಲ್ಲಿ ಚುನಾವಣೆಗೊಂಡ, ವಿದ್ಯಾರ್ಥಿ ಪರಿಷತ್ ಮುಖಂಡರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಸ್ಟ್ಯಾಂಡ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ, ಅಭಾವಿಪ ಧಾರವಾಡ ವಿಭಾಗ ಸಂಘಟನಾ ಕಾರ್ಯದರ್ಶಿ ಮಣಿಕಂಠ ಕಳಸ ಅವರು, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಯುವತಿ ಸ್ವಾತಿ ಬ್ಯಾಡಗಿ, ರಾಣೇಬೆನ್ನೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಳು ಅಲ್ಲದೆ ಅದೇ ಆಸ್ಪತ್ರೆಯಲ್ಲಿ ಶುಸ್ರೋಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಳು. ಮಾರ್ಚ್ 3 ರಂದು ತಾರೀಕಿನ ರಾಣೆಬೆನ್ನೂರಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದ ಯುವತಿ ಏಳು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾಳೆ. ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಬಾಳಿ ಬದುಕಬೇಕಾದ ಹೆಣ್ಣು ಜೀವವಿಂದು ಪ್ರಾಣ ತೆತ್ತಿದೆ, ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಜೀವನ ನಡೆಸುತ್ತಿದ್ದ ಯುವತಿ ಸ್ವಾತಿ ಬ್ಯಾಡಗಿ ಗೆ ಅದೇ ಊರಿನ ಮುಸ್ಲಿಂ ಯುವಕ ನಯಾಜ್ ಪ್ರೀತಿಸಿ ಮದುವೆಯಾಗಿ ನಂಬಿಸಿ, ಇತ್ತೀಚಿಗಷ್ಟೇ ಬೇರೊಂದು ಹುಡುಗಿಯೊಂದಿಗೆ ಮದುವೆ ನಿಶ್ಚಯವನ್ನು ಮಾಡಿಕೊಂಡಿದ್ದ. ಇದರ ನಡುವೆ ಯುವತಿಯು ಕಾಣೆಯಾಗಿ, 7 ದಿನಗಳ ನಂತರ ಶವ ಪತ್ತೆ ಆಗಿದ್ದು, ಪೊಲೀಸ್ ಇಲಾಖೆಯವರು ಪೋಷಕರಿಗೆ ತಿಳಿಸದೇ ಅಂತ್ಯ ಕ್ರಿಯೆ ನಡೆಸಿರುತ್ತಾರೆ. ಇದರಿಂದ ಆರೋಪಿ ನಯಾಜ್ನ ನ್ನು ಕೊಲೆ ಮಾಡಿರುವ ಶಂಕೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಕೊಲೆಯ ಸುತ್ತ ಲವ್ ಜಿಹಾದ್ ನ ಪ್ರಯತ್ನ ಎದ್ದು ತೋರುತ್ತಿದ್ದೂ ತನಿಖೆಯಲ್ಲಿಯೂ ಪೊಲೀಸರು ಹಲವಾರು ರೀತಿಯ ಲೋಪವನ್ನು ಎಸಗುತ್ತಿರುವುದು, ತಾರಾತುರಿಯಲ್ಲಿ ಯಾರ ದೇಹವೆಂದು ಸರಿಯಾಗಿ ಗುರುತಿಸುವ ಮುನ್ನವೇ ಅಂತ್ಯಕ್ರಿಯೆ ನಡೆದಿರುವುದು ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ. ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ, ನೇಹಾ ಹಿರೇಮರ್ ಎಂಬುವ ಯುವತಿಯ ಲವ್ ಜಿಹಾದ್ ನ ಹತ್ಯೆ ಮಾಸುವ ಮುನ್ನವೇ ಮತ್ತೊಂದು ಯುವತಿಯು ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ. ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಸೂಕ್ತ ತನಿಖೆಯನ್ನು ನಡೆಸಬೇಕು, ರಾಜಕೀಯ ಹಸ್ತಕ್ಷೇಪವನ್ನು ಸರ್ಕಾರ ಮಾಡಕೂಡದು ಸ್ವಾತಿ ಬ್ಯಾಡಗಿ ಹತ್ಯೆಗೆ ನ್ಯಾಯವನ್ನು ದೊರಕಿಸಿ ಕೊಡಬೇಕೆಂದು ಹಾಗೂ ಕೊಲೆಗೈದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು. ಮುಂಚೂಣಿಯಲ್ಲಿ ಅಭಾವಿಪ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಅಭಿಲಾಷ ಬಾದಾಮಿ, ನಗರ ಕಾರ್ಯದರ್ಶಿ ಪವನ ಇಟಗಿ, ನಗರ ಸಹ ಕಾರ್ಯದರ್ಶಿ ಯಲ್ಲಮ್ಮ ಆರ್ ಎಂ, ಕಾರ್ಯಕರ್ತರಾದ ನಂದೀಶ್ ಪೂಜಾರ, ದರ್ಶನ್ ತೆಗ್ಗಿನ, ಹರ್ಷಿತ, ಶೃತಿ ಸೇರಿದಂತೆ ಮತ್ತಿತರ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಯಕರ್ತರ, ಪಾಲ್ಗೊಂಡಿದ್ದರು.