ನೌಕಾ ಪಡೆಗೆ 21,000 ಕೋಟಿ ವೆಚ್ಚದ 111 ಕಾಪ್ಟರ್ ಖರೀದಿಗೆ ಒಪ್ಪಿಗೆ

ಹೊಸದಿಲ್ಲಿ 25: ಅತ್ಯಂತ ಮಹತ್ವದ ನಿಧರ್ಾರಮೊಂದರಲ್ಲಿ ರಕ್ಷಣಾ ಸಚಿವಾಲಯವು ಭಾರತೀಯ ನೌಕಾ ಪಡೆಗೆ 21,000 ಕೋಟಿ ರೂ. ವೆಚ್ಚದಲ್ಲಿ 111 ಸೇವಾ-ಬಳಕೆಯ ಹೆಲಿಕಾಪ್ಟರ್ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ 111 ಹೆಲಿಕಾಪ್ಟರ್ ಖರೀದಿ ಸೇರಿದಂತೆ ಸುಮಾರು 46,000 ಕೋಟಿ ರೂ.ವೆಚ್ಚದ ಪರಿಕರ ಖರೀದಿ ಪ್ರಸ್ತಾವಗಳಿಗೂ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು . 

ರಕ್ಷಣಾ ಪರಿಕರಗಳ ಖರೀದಿಗೆ ಸಂಬಂಧಿಸಿದಂತೆ ಅತ್ಯುನ್ನತ ನಿಧರ್ಾರದ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ (ಡಿಎಸಿ) ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ.  

ಡಿಎಸಿ ಅನುಮೋದಿಸಿರುವ ರಕ್ಷಣಾ ಪರಿಕರ ಖರೀದಿ ಪ್ರಸ್ತಾವಗಳಲ್ಲಿ 24,879 ಕೋಟಿ ರೂ. ವೆಚ್ಚದ ಇತರೇ ಪರಿಕರಗಳು ಮತ್ತು ದೇಶೀಯವಾಗಿ ವಿನ್ಯಾಸಗೊಂಡು ಅಭಿವೃದ್ಧಿಪಡಿಸಲಾದ 155 ಎಂಎಂ ಸಾಮಥ್ರ್ಯದ, 3,364 ಕೋಟಿ ರೂ ವೆಚ್ಚದ, ಅತ್ಯಾದುನಿಕ 150 ಆಟರ್ಿಲರಿ ಗನ್ ಸಿಸ್ಟಮ್ಗಳ ಖರೀದಿಯೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.    ಪೋಟೊ ಹೆಲಿಕಾಪ್ಟ್ರ್