ಹೊಸಪೇಟೆಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಆಗ್ರಹಿ ಮನವಿ


ಹೊಸಪೇಟೆ04: ಗಣಿಭಾದಿತ ಪ್ರದೇಶ ಅಭಿವೃದ್ದಿ ಯೋಜನೆ (ಆರ್&ಆರ್)  ಅಡಿ ಹೊಸಪೇಟೆಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹಿಂದುಳಿದ ವರ್ಗಗಳ ಒಕ್ಕೂಟ, ಕನರ್ಾಟಕ ರಾಜ್ಯ ರೈತ ಸಂಘ, ದೇವರಾಜ್ ಅರಸ್ ಸಾಮಾಜಿಕ ಶೈಕ್ಷಣಿಕ ಸೇವಾ ಟ್ರಸ್ಟ್ ಸಂಘಟನೆಗಳ ಪದಾಧಿಕಾರಿಗಳು, ತಹಶೀಲ್ದಾರ್ ಕಛೇರಿಯ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸಕರ್ಾರಕ್ಕೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವೈ.ಯಮುನೇಶ್ ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪನೆ ಅಗತ್ಯವಿದ್ದು ಈ ನಿಟ್ಟಿನಲ್ಲಿ ಅವಲೋಕಿಸಿದಾಗ ಪ್ರಸ್ತಾವಿತ ಕಾಲೇಜು ಸ್ಥಾಪನೆಗೆ ಹೊಸಪೇಟೆ ಸುತ್ತಮುತ್ತಲಿನ ಪ್ರದೇಶವೆ ಅತ್ಯಂತ ಸೂಕ್ತ ಎಂಬುದು ನಿವರ್ಿವಾದ. ಈ ನಗರವು ತುಂಗಭದ್ರ ಜಲಾಶಯದ ಪಕ್ಕದಲ್ಲೇ ಇದ್ದು ಭೌಗೋಳಿಕವಾಗಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಂದ ಸಮಾನಾಂತರದಲ್ಲಿದೆ. 

ಈ ಪ್ರದೇಶದ ಮಣ್ಣು, ನೀರು ಹಾಗೂ ಹವಾಮಾನ ಎಲ್ಲಾ ಪ್ರಕಾರದ ವಾಣಿಜ್ಯ, ತೋಟಗಾರಿಕೆ ಹಾಗೂ ಈ ಆಥರ್ಿಕ ಬೆಳೆಗಳಿಗೆ ಸೂಕ್ತವಾಗಿದ್ದು ಕಾಲೇಜು ಸ್ಥಾಪನೆಗೆ ವರ್ಷವಿಡಿ ಯಥೇಚ್ಛವಾಗಿ ನೀರಿನ ಸೌಲಭ್ಯವಿದೆ. ಡಾ|| ನಂಜುಂಡಪ್ಪ ಪ್ರಾದೇಶಿಕ ಅಸಮಾನತೆ ನಿವಾರಣೆ ವರದಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ದಿ ಪೀಠದ ಸಮೀಕ್ಷೆಯ ಪ್ರಕಾರ ಹೊಸಪೆಟೆಯನ್ನೊಳಗೊಂಡ ಜಿಲ್ಲೆಯ ಪಶ್ಚಿಮ ಭಾಗದ ತಾಲೂಕುಗಳು ಶೈಕ್ಷಣಿಕವಾಗಿ ಹಿಂದುಳಿದಿದ್ದು ಈ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯಾದರೆ ಹಿಂದುಳಿದ ತಾಲೂಕುಗಳ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈಗಾಗಲೇ ಪಕ್ಕದ ಮುನಿರಾಬಾದ್ನಲ್ಲಿ ತೋಟಗಾರಿಕೆ ಕಾಲೇಜು, ಕಂಪ್ಲಿಯಲ್ಲಿ ಕೃಷಿ ತರಬೇತಿ ಶಾಲೆ ಇದ್ದು, ಹೊಸಪೇಟೆಯಲ್ಲಿ ಪೂರ್ಣ ಪ್ರಮಾಣದ ಕೃಷಿ ಕಾಲೇಜು  ಸ್ಥಾಪನೆಯಾಗಬೇಕಿದೆ. ಹೊಸಪೇಟೆ ತಾಲೂಕಿನ ಗ್ರಾಮಗಳ ಭೂಮಿಗೆ ವಿಜಯನಗರ ಅರಸರ ಕಾಲದಿಂದ ಕಾಲುವೆಗಳ ಮೂಲಕ ನೀರಾವರಿ ವ್ಯವಸ್ಥೆಗೆ 500 ವರ್ಷಗಳ ಹಿತಿಹಾಸವಿದೆ. ಹೀಗೆ ಚಾರಿತ್ರಿಕ ಹಿನ್ನೆಲೆ ಪ್ರಕೃತಿದತ್ತ ಸೌಕರ್ಯ ಇರುವ ಈ ಪ್ರದೇಶದಲ್ಲಿ ಕೃಷಿ ಕಾಲೇಜು ಸ್ಥಾಪನೆ ಅತ್ಯಂತ ಪ್ರಶಸ್ಥ್ಯ ಸ್ಥಳವಾಗಿದೆ ಎಂದರು. 

ನಂತರ ಒಕ್ಕೂಟದ ಜಿಲ್ಲಾ ಕಾರ್ಯದಶರ್ಿ ರವಿಶಂಕರ ದೇವರಮನೆ ಮಾತನಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳ ಮೂಲಕ ಜಿಲ್ಲೆಯಾಧ್ಯಂತ ರೈತರಿಗೆ ಬೆಳೆ ಸಾಲ ವಿತರಿಸುವ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಪ್ರಧಾನ ಕಛೇರಿಯು ಹೊಸಪೇಟೆಯಲ್ಲಿಯೇ ಇದೆ. 

  ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳಾದ ಡಾ|| ಬಿಸಲಯ್ಯ ಸಮಿತಿಯು ಸಹ ಬಳ್ಳಾರಿ ಜಿಲ್ಲೆಯಲ್ಲಿ ಕೃಷಿ ಕಾಲೇಜು ಸ್ಥಾಪನೆಯ ಅಗತ್ಯವನ್ನು ತಿಳಿಸಿದೆ. ಆದುದರಿಂದ ವೈಜ್ಞಾನಿಕ ಹಾಗೂ ಸುಸ್ತಿರ ಕೃಷಿ ಪದ್ದತಿ, ಮಿತನೀರಿನ ಬಳಕೆಯಿಂದ ಅಧಿಕ ಇಳುವರಿ ಕೃಷಿ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒಣಭೂಮಿಯಲ್ಲಿ ಬೆಳೆ ನಿರ್ವಹಣೆ ಹೀಗೆ ಮಾರ್ಗದರ್ಶನೆ ನೀಡಿ ರೈತರನ್ನು ಆಥರ್ಿಕವಾಗಿ ಸಬಲೀಕರಣ ಸ್ವಾವಲಂಭನೆ ಮಾಡುವ ನಿಟ್ಟಿನಲ್ಲಿ ಗಣಿಭಾದಿತ ಪ್ರದೇಶ ಅಭಿವೃದ್ದಿ ಯೋಜನೆ ಅಡಿಯಲ್ಲಿ ಹೊಸಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 

ರೈತ ಮುಖಂಡರಾದ ಖಾಜಾಹುಸೇನ್ ನಿಯಾಜಿ, ಚಿನ್ನದೊರೆ, ಶ್ಯಾಮಪ್ಪ ಅಗೋಲಿ, ಕುಮಾರ ಸ್ವಾಮಿ, ಕೆ.ರಾಘವೇಂದ್ರ, ದುಗರ್ಾ ಪ್ರಸಾದ್, ಭೋಜರಾಜ, ಗೌಳಿ ರುದ್ರಪ್ಪ, ಜಿ.ಯಲ್ಲಪ್ಪ, ಕಂಪ್ಲಿ ನಾಗರಾಜ, ಸಣ್ಣೆಪ್ಪ, ಸುಂಕದ ಹನುಮಂತಪ್ಪ, ಬಂಧಿ ಭರ್ಮಪ್ಪ, ಕಬ್ಬೇರ್ ಅಂಜಿನಪ್ಪ,  ಚಿಂತಾಮಣಿ, ಚಂದ್ರಶೇಖರ್ ಗಾಣಿಗ, ವೀರಣ್ಣ ಬಲಿಜ, ಗೌಳಿ ಈಶ್ವರ್, ಗುರುನಾಥ, ರವಿಕಿರಣ್, ಟಿ.ಶ್ರೀನಿವಾಸ್, ಬಾಲಾಂಜಿನೆಯಲು, ರವಿಕುಮಾರ್, ಕಬ್ಬೇರ್ ಶ್ರೀನಿವಾಸ್, ವಿನಾಯಕ, ಮುಂತಾದವರು ಉಪಸ್ಥಿತರಿದ್ದರು