ಲೋಕದರ್ಶನ ವರದಿ
ರಾಯಬಾಗ 20: ವಿಶ್ವ ಮಾನವ ಬಸವಣ್ಣನವರ ಆಶಯಗಳನ್ನು ಇಂದು ಎಲ್ಲ ಜನರಿಗೆ ಮನವರಿಕೆ ಮಾಡಿ, ಮತ್ತೆ ಕಲ್ಯಾಣ ರಾಜ್ಯ ಕಟ್ಟೋಣವೆಂದು ರಾಯಬಾಗ ಬಸವಯೋಗ ಪೀಠಾಧಿಪತಿ ಶಿವಾನಂದ ಶ್ರೀಗಳು ಹೇಳಿದರು.
ರವಿವಾರ ಸಾಯಂಕಾಲ ಪಟ್ಟಣದ ಮಹಾದೇವ ಮಂಗಲ ಕಾಯರ್ಾಲಯದಲ್ಲಿ ಬಸವಯೋಗ ಮಂದಿರ ರಾಯಬಾಗ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಷತ್ತು ತಾಲೂಕಾ ಘಟಕ ರಾಯಬಾಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತ್ತೆ ಕಲ್ಯಾಣ ಎಂಬ ವಿನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತ, ಲಿಂಗ, ಮೇಲು, ಕೀಳು ಎಂಬ ಭೇದಭಾವವನ್ನ ತೊಡದು ಹಾಕಿ ಎಲ್ಲರನ್ನುಒಂದೆ ಸಾಲಿನಲ್ಲಿತರಲು ಪ್ರಯತ್ನಿಸಿದರು ಎಂದರು.
ಭೇಂಡವಾಡದ ರೇವಣಸಿದ್ದ ಶ್ರೀಗಳು ಮಾತನಾಡಿ, ತರಳಬಾಳು ಜಗದ್ಗುರು ಹಾಗೂ ಸಾನೆಹಳ್ಳಿಯ ಶ್ರೀಗಳು ಈಗ ಮತ್ತೆರಾಜ್ಯಾದ್ಯಂತ ಮತ್ತೆ ಕಲ್ಯಾಣ ರಾಜ್ಯಕಟ್ಟಲು ಸಂಕಲ್ಪ ಮಾಡಿದ್ದಾರೆ. ಇದಕೆ ಎಲ್ಲರೂ ಕೈಜೋಡಿಸೋಣವೆಂದು ಕರೆ ನೀಡಿದರು.
ಶಿಕ್ಷಕ ವಿರೇಶ ಪಾಟೀಲ,ಬಿ.ಆರ್.ಅಜುರೆ, ಸಾತಗೌಡ ಪಾಟೀಲ, ಅಪ್ಪಾಸಾಬ ಕುಲಗುಡೆ ಸೇರಿದಂತೆ ಶರಣಚಿಂತಕರು ಹಾಗೂ ಬಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.