ಮೂಡಲಗಿ 06: ವಕೀಲರೆಂದರೆ ಮಾತಿನ ಚಾತುರ್ಯತೆಯ ಜೊತೆಗೆ ಸತ್ಯ ಶೋಧನೆ ಮಾಡುವ ಬುದ್ಧಿವಂತಿಕೆ ಹೊಂದಿ, ತಮ್ಮ ಜ್ಞಾನವನ್ನು ಪ್ರಾಮಾಣಿಕತೆಯಿಂದ ಬಳಸಿಕೊಂಡು ನ್ಯಾಯ ಒದಗಿಸಿಕೊಡುವ ಕೆಲಸ ಮಾಡಬೇಕು ಎಂದು ನ್ಯಾಯಾಧೀಶ ಸಂತೋಷಕುಮಾರ ಪಿ.ಎಸ್ ಹೇಳಿದರು.
ಸ್ಥಳೀಯ ದಿವಾನಿ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರಣದಲ್ಲಿ ನಡೆದ ವಕೀಲರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು ವಕೀಲರನ್ನು ಕಾನೂನು ಪಂಡಿತರೆಂದು ಕರೆಯುತ್ತಾರೆ. ಅವರ ಕಾನೂನು ಜ್ಞಾನವು ಬಡಜನರಿಗೆ ದೀನ ದಲಿತರಿಗೆ ನ್ಯಾಯ ಒದಗಿಸಿ, ಸಂವಿಧಾನದ ಆಶಯವನ್ನು ಎತ್ತಿಹಿಡಿಯವಂತಿರಬೇಕು. ನ್ಯಾಯ ಕೊಡಿಸುವುದು ಎಂದರೆ ಒಬ್ಬ ವ್ಯಕ್ತಿಗೆ ಜೀವನ ಕೊಡುವುದಾಗಿದೆ. ವಕೀಲನೂ ಜನಸಾಮಾನ್ಯರನ್ನು ಅಜ್ಞಾನವೆಂಬ ಕತ್ತಲೆಯಿಂದ ನ್ಯಾಯವೆಂಬ ಬೆಳಕಿನೆಡೆಗೆ ತರುವ ಸುಜ್ಞಾನಿಯಾಗಿದ್ದಾನೆ ಎಂದರು.
ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಮಾತನಾಡಿ ತಾವು ಪಡೆದ ಕೇಸನ್ನು ಅರ್ಧಕ್ಕೆ ಬಿಡದೆ ಅದರ ಗೆಲುವಿಗೆ ಎಲ್ಲ ರೀತಿಯಲ್ಲೂ ಶ್ರಮಿಸುವುದು ವಕೀಲ ವೃತ್ತಿಯ ಪಾವಿತ್ರ್ಯತೆ ಆಗಿದೆ. ಸೋಲುಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ವಕೀಲರು ಹೊಂದಿರಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಎಲ್.ಹುಣಶ್ಯಾಳ ಮಾತನಾಡಿ ವಕೀಲರು ಮತ್ತು ಪೋಲೀಸರು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದರು. ನ್ಯಾಯವಾದಿಗಳ ಸಂಘದ ಕಾರ್ಯದಶರ್ಿ ಬಿ.ಎನ್.ಸಣ್ಣಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿರಿಯ ನ್ಯಾಯವಾದಿ ಎ.ಕೆ.ಮದಗಣ್ಣವರ ಅವರನ್ನು ಸತ್ಕರಿಸಲಾಯಿತು.
ಪಿ.ಎಸ್.ಐ. ಶರಣೇಶ ಜಾಲಿಹಾಳ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಆಯ್.ಎಂ.ಹಿರೇಮಠ, ಸಹಕಾರ್ಯದಶರ್ಿ ಬಿ.ವಾಯ್.ಹೆಬ್ಬಾಳ, ಆರ್.ಎಂ. ಐಹೊಳಿ, ಖಜಾಂಚಿ ಎ.ಎಸ್.ಕೌಜಲಗಿ, ನ್ಯಾಯಾಲಯದ ಶಿರಸ್ತೇದಾರ ಎಸ್.ಡಿ.ಪಾಟೀಲ ಯು.ಆರ್.ಜೋಕಿ, ವಿ.ವಿ.ನಾಯಕ್, ಎ.ಎಸ್.ಮಡಿವಾಳರ ಮೊದಲಾದವರು ಉಪಸ್ಥಿತರಿದ್ದರು. ಎಸ್.ಎಲ್.ಪಾಟೀಲ ಪ್ರಾಥರ್ಿಸಿ, ಎ.ಬಿ.ಬಾಗೋಜಿ ಸ್ವಾಗತಿಸಿ, ವಿ.ಕೆ.ಪಾಟೀಲ ಸ್ಪಧರ್ಾ ವಿಜೇತರಿಗೆ ಬಹುಮಾನ ವಿತರಿಸಿದರು. ಲಕ್ಷ್ಮಣ ಅಡಿಹುಡಿ ಕಾರ್ಯಕ್ರಮ ನಿರೂಪಿಸಿದರು.