ಲೋಕದರ್ಶನ ವರದಿ
ಯರಗಟ್ಟಿ 11: ಸಮಾಜದಲ್ಲಿ ವಾಹನ ಚಾಲಕರು ಪ್ರಯಾಣಿಕರನ್ನು ವಾಹನದಲ್ಲಿ ಹೊತ್ತೋಯುತ್ತಿರುವ ಸಂಧರ್ಭದಲ್ಲಿ ಪ್ರಯಾಣಿಕರ ಜೀವದ ಮೌಲ್ಯವನ್ನು ಅರೆತು ಮದ್ಯ ವ್ಯಸನಿಗಳಾಗದೇ ವಾಹನ ಚಲಾಯಿಸಬೇಕು ಎಂದು ಮಾಜಿ ಸೈನಿಕ ಕುಮಾರ ಹಿರೇಮಠ ಹೇಳಿದರು.
ಅವರು ಇಲ್ಲಿನ ಟ್ಯಾಕ್ಸಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಕಛೇರಿ ಉದ್ಗಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಟ್ಯಾಕ್ಸಿ ಚಾಲಕರು ಮನೆಯಿಂದ ಬರುವ ಸಂಧರ್ಭದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಗರ್ಬಿಣಿ ಮಹಿಳೆಯರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಉಚಿತವಾಗಿ ಬಸ್ ನಿಲ್ದಾಣಕ್ಕೆ ತಲುಪಿಸುವಂತ ಕಾರ್ಯ ಮಾಡಬೇಕು ಎಂದರು.
ಜಿ.ಪಂ.ಸದಸ್ಯ ಅಜೀತಕುಮಾರ ದೇಸಾಯಿ ಕಾರ್ಯಕ್ರಮ ಉದ್ಗಾಟಿಸಿದರು, ಕೊರಕೊಪ್ಪ ರೇವಣ ಸಿದ್ದೇಶ್ವರ ಶ್ರೀ ಸಾನಿದ್ಯ ವಹಿಸಿದ್ದರು, ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ ಕಡೆಮನಿ, ತಾ.ಪಂ.ಮಾಜಿ ಸದಸ್ಯ ವಿಠ್ಠಲಗೌಡ ದೇವರಡ್ಡಿ, ರಮೇಶಗೌಡ ದೇವರಡ್ಡಿ, ರಮೇಶ ಮುದ್ದನ್ನವರ, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಶಿವಪ್ಪ ಗಡಾದ, ಉಪಾಧ್ಯಕ್ಷ ಶ್ರೀಶೈಲ ಯರಗಣವಿ, ಶಿವಾನಂದ ಕರಿಗೊಣ್ಣವರ, ಮಹಾಂತೇಶ ವಿರಕ್ತಮಠ, ಹನಮಂತ ಅಂಕಲಗಿ, ಶಂಕರ ದಂಡೆನ್ನವರ, ಬಸಪ್ಪ ನಾಯಕ, ಸೋಮಶೇಖರ ಹೊಸಳ್ಳಿ, ಅನಿಲ ವಂಟಮೂರಿ, ವೆಂಕನಗೌಡ ಕರಿಗೌಡರ, ಉಮೇಶ ಹಿರೇಮಠ, ಉಮೇಶ ಹಳೆಮನಿ, ಅಣ್ಣಪ್ಪ ಆಚಮಟ್ಟಿ ಮುಂತಾದವರಿದ್ದರು.