ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ: ಕುಮಾರ

ಲೋಕದರ್ಶನವರದಿ

ಬ್ಯಾಡಗಿ೦೫: ಬದುಕಿಗೆ ಹತ್ತಿರವಾದ ಆಸಕ್ತಿದಾಯಕ ಒತ್ತಡ ಮುಕ್ತ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಸಕರ್ಾರಿ ಶಾಲೆಗಳಿಗೆ ಸೇರಿಸುವಂತೆ ಎಸ್ಡಿಎಂಸಿ ಅಧ್ಯಕ್ಷ ಕುಮಾರ ವರೂರ ಅಭಿಪ್ರಾಯ ವ್ಯಕ್ತಪಡಿಸಿದರು.

 ತಾಲೂಕಿನ ಗುಂಡೇನಹಳ್ಳಿ ಗ್ರಾಮದ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಠ್ಯಪುಸ್ತಕ ಹಾಗೂ ಹೆಸರು ಹೇಳಲಿಚ್ಚಿಸದ ವ್ಯಕ್ತಿಯೊಬ್ಬರೂ ನೀಡಿದ ಸುಮಾರು 6 ಸಾವಿರ ಮೌಲ್ಯದ ನೋಟ್ಬುಕ್ ವಿತರಿಸಿ ಅವರು ಮಾತನಾಡಿದರು. 

 ಒತ್ತಡದ ಶಿಕ್ಷಣದಿಂದ ಯಾವುದೇ ಪ್ರಗತಿ ಕಾಣಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಹಾಗೂ ಪಾಲಕರು ತಮ್ಮ ಮಕ್ಕಳ ಸಾಮಥ್ರ್ಯವನ್ನು ಅರಿತುಕೊಳ್ಳುವ ಮೂಲಕ ಮುಂದಿನ ಶೈಕ್ಷಣಿಕ ನಿಧರ್ಾರವನ್ನು ಕೈಗೊಂಡಾಗ ಮಾತ್ರ ಸಮಗ್ರವಾದ ಬೌದ್ಧಿಕ ಮಟ್ಟವನ್ನು ಅವರಲ್ಲಿ ಕಾಣಲು ಸಾಧ್ಯವೆಂದರು.

    ಮುಖ್ಯ ಶಿಕ್ಷಕ ಆರ್.ಟಿ.ಪಿಸೆ ಮಾತನಾಡಿ, ಶಾಲೆಯ ಮೇಲೆ ಅಭಿಮಾನವಿಟ್ಟು ಶಾಲೆಗಳು ಆರಂಭಕ್ಕೂ ಮುನ್ನವೇ ಗುಪ್ತ ದಾನಿಯೊಬ್ಬರು ನೋಟ್ ಪುಸ್ತಕಗಳನ್ನು ನೀಡಿದ್ದಾರೆ, ಹೀಗಾಗಿ ಶಾಲೆಗಳು ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕರ ಸಹಕಾರವಿದ್ದರೇ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವೆಂಬುದನ್ನು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದ್ದಾರೆ, ಉಚಿತ ಸೌಲಭ್ಯಗಳನ್ನು ತಿರಸ್ಕ ರಿಸುತ್ತಿರುವ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಲು ಹಿಂದೇಟು ಹಾಕುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಪಾಲಕರಲ್ಲಿರುವ ಹುದುಗಿರುವ ಖಾಸಗಿ ಶಾಲಾ ವ್ಯಾಮೋಹಕ್ಕೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ಸಹ ಕ್ರಮೇಣವಾಗಿ ಇಳಿಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

 ಶಿಕ್ಷಕ ಮಲ್ಲಪ್ಪ ಕರೇಣ್ಣನವರ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಹೊರತರುವಲ್ಲಿ ಸಕರ್ಾರಿ ಶಾಲೆಗಳು ಪ್ರಮುಖ ಪಾತ್ರ ವಹಿಸಿವೆ, ಓದಿನ ಜೊತೆಯಲ್ಲಿ ಸಂಗೀತ, ಜಾನಪದ, ಕರಕುಶಲ ಕಅಲೆ, ಗಾಯನ, ನೃತ್ಯ ಸೇರಿದಂತೆ ಮಕ್ಕಳ ಮನಸ್ಸನ್ನು ಸೆಳೆಯುವ ಹಲವಾರು ಆಸಕ್ತಿದಾಯಕ ವಿಷಯಗಳನ್ನು ಸಕರ್ಾರಿ ಶಾಲೆಗಳಲ್ಲಿ ಭೋಧಿಸಲಾ ಗುತ್ತದೆ, ಅಲ್ಲಿನ ಶಿಕ್ಷಕರ ಮೇಲೆ ವಿಶ್ವಾಸವಿಟ್ಟು ಸಕರ್ಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಮನವಿ ಮಾಡಿದರು. 

 ಶಿಕ್ಷಕ ವಿ.ಡಿಅಕ್ಕೂರ, ಎಲ್.ಎಸ್.ಚಿಕ್ಕನಗೌಡ್ರ, ಕೆ.ರಾ.ವಿಭೂತಿ, ಎನ್.ಬಿ.ಅಬಲೂರ, ಟಿ.ಸನಿತಾ, ಚೈತ್ರಾ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಉಪಸ್ಥಿತರಿದ್ದರು.