ಎಡವಟ್ಟು ಮಾಡಿಕೊಂಡ ನಟಿ ದಿಶಾ ಪಟಾನಿ

ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಎಲ್ಲಾ ತಾರೆಯರು ತಮ್ಮ ಬಂಧು-ಬಳಗ, ಸ್ನೇಹಿತರ ಜೊತೆಗೆ ಸಿಹಿ ತಿಂದು, ಪಟಾಕಿ ಸಿಡಿಸಿ ಬೆಳಕಿನ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದರು.  ಆದರೆ, ತಮ್ಮ ಅಭಿಮಾನಿಗಳಿಗೆಲ್ಲಾ ದೀಪಾವಳಿ ಹಬ್ಬದ ಶುಭಾಶಯ ಕೋರಲು ಹೋಗಿ ಬಾಲಿವುಡ್ ನಟಿ ದಿಶಾ ಪಟಾನಿ ಮಾತ್ರ ಎಡವಟ್ಟು ಮಾಡಿಕೊಂಡಿದ್ದಾರೆ.   ಬಿಸ್ಕೆಟ್ ಬಣ್ಣದ ಲೆಹಂಗಾ ಧರಿಸಿದ್ದ ದಿಶಾ ಪಟಾನಿ, ಅದಕ್ಕೆ ಮ್ಯಾಚ್ ಆಗುವ ಮೇಲುಡುಪು ಧರಿಸಿದೇ ಸ್ಪೋಟ್ರ್ಸ ಬ್ರಾ ಧರಿಸಿ ಕೈಯಲ್ಲಿ ದೀಪ ಹಿಡಿದು ಫೋಟೋಗೆ ಪೋಸ್ ಕೊಟ್ಟಿದ್ದರು. ಸಾಲದಕ್ಕೆ ಇದೇ ಫೋಟೋನ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶೇರ್ ಮಾಡಿದ್ದರು. 

ದಿಶಾ ಪಟಾನಿಯ ಈ ವಿಚಿತ್ರ ಫ್ಯಾಶನ್ ಸೆನ್ಸ್ ಕಂಡು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. "ದೀಪಾವಳಿ ದಿನ ಸಾಂಪ್ರದಾಯಿಕ ಉಡುಗೆ ತೊಡಬೇಕು ಎಂದುಕೊಂಡಿದ್ದಾಗ, ಸರಿಯಾದ ಸಮಯಕ್ಕೆ ಟೇಲರ್ ಬ್ಲೌಸ್ ಕೊಡಲಿಲ್ಲ ಅಂದ್ರೆ ಹೀಗೇ ಆಗೋದು" ಎಂದು ನೆಟ್ಟಿಗರು ದಿಶಾ ಪಟಾನಿಯನ್ನ ಆಡಿಕೊಂಡು ನಕ್ಕಿದ್ದಾರೆ. 

ಇನ್ನೂ ಕೆಲವರು "ದಿಶಾ ಪಟಾನಿ ಬ್ಲೌಸ್ ಹಾಕೋದನ್ನೇ ಮರೆತು ಬಿಟ್ಟಿದ್ದಾರೆ" ಅಂತೆಲ್ಲಾ ಕಾಮೆಂಟ್ ಮಾಡಿದ್ದರು. ತಮ್ಮ ಪೋಸ್ಟ್ ಗೆ ನೆಗೆಟಿವ್ ಕಾಮೆಂಟ್ ಗಳೇ ಹೆಚ್ಚಾದ ಮೇಲೆ ಎಲ್ಲಾ ಕಾಮೆಂಟ್ ಗಳನ್ನು ಡಿಲೀಟ್ ಮಾಡಿ ಬ್ಲಾಕ್ ಮಾಡಿದ್ದಾರೆ ನಟಿ ದಿಶಾ ಪಟಾನಿ. ಅಷ್ಟಕ್ಕೂ, ದಿಶಾ ಪಟಾನಿ ಈ ತರಹ ಉಡುಗೆ ತೊಟ್ಟಿದ್ದು ಯಾಕೆ ಅನ್ನೋದು ನಮಗಂತೂ ಗೊತ್ತಿಲ್ಲ. ಸದ್ಯಕ್ಕೆ ಸಲ್ಮಾನ್ ಖಾನ್ ಜೊತೆಗೆ 'ಭಾರತ್ ಚಿತ್ರದಲ್ಲಿ ದಿಶಾ ಪಟಾನಿ ಅಭಿನಯಿಸುತ್ತಿದ್ದಾರೆ.