ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ನಟ ಎಸ್.ಶಿವರಾಂ ಭೇಟಿ

ಲೋಕದರ್ಶನ ವರದಿ

ಉಗರಗೋಳ, 24: ಐತಿಹಾಸಿಕ ಪ್ರೇಕ್ಷಣೀಯ ಸ್ಥಳ, ಕಣ್ಕುಕ್ಕುವಂತಿರುವ ಗ್ರಾಮೀಣ ಸೊಗಡು ಹಾಗೂ ಪ್ರಾಚೀನತೆ ಹೊಂದಿರುವ ನಾಡು ಉತ್ತರ ಕನರ್ಾಟಕ. ದಕ್ಷಿಣ ಕನರ್ಾಟಕ ರಾಗದಂತಿದ್ದರೆ, ಉತ್ತರ ಕನರ್ಾಟಕವು ಲಯವಿದ್ದ ಹಾಗೇ ಎಂದು ಚಲನಚಿತ್ರ ಹಿರಿಯ ನಟ ಎಸ್.ಶಿವರಾಂ ಹೇಳಿದರು.ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಸೋಮವಾರ ಭೇಟಿ ನೀಡಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಾಶೀವರ್ಾದ ಪಡೆದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

50 ವರ್ಷಗಳ ಹಿಂದಿನಿಂದಲೂ ಉತ್ತರ ಕನರ್ಾಟಕ ಭಾಗದಲ್ಲಿ ಚಿತ್ರೀಕರಣಗೊಂಡ ಹತ್ತಾರು ಚಲನಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಯಲ್ಲಮ್ಮ ದೇವಿಯ ಅನುಗ್ರಹದಿಂದ ಆರೋಗ್ಯ ಸದೃಢವಾಗಿದೆ. ಮುಂಬರುವ ದಿನಗಳಲ್ಲೂ ಈ ಭಾಗದ ಚಲನಚಿತ್ರಗಳಲ್ಲಿ ನಟನೆಗೆ ಸಿದ್ಧವೆಂದರು.

  ಈ ಹಿಂದೆ ಮಹದಾಯಿ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಇನ್ಮುಂದೆ ಉತ್ತರ ಕನರ್ಾಟಕದ ಅಭಿವೃದ್ಧಿ ದಿಸೆಯಿಂದ ಯಾವುದೇ ಹೋರಾಟ ನಡೆದರೂ ಪಾಲ್ಗೊಳ್ಳಲು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

ಯಲ್ಲಮ್ಮ ದೇವಸ್ಥಾನದ ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ, ಬೆಂಗಳೂರಿನ ಧ್ರುವರಾಜ್, ಹಿರೇನಲ್ಲೂರಿನ ಶ್ರೀನಿವಾಸ, ಎಚ್.ಸಿ.ಸಿದ್ಧಸಮುದ್ರ, ವಿ.ಪಿ.ಸೊನ್ನದ, ಸಿದ್ದರಾಮಯ್ಯ ಅರಗಂಜಿ ಮತ್ತಿತರರು ಉಪಸ್ಥಿತರಿದ್ದರು.