ವಿಶೇಷ ಅನುದಾನದಲ್ಲಿ ಮೂತರ್ಿ ಪ್ರತಿಷ್ಠಾಪನೆಗೆ ಕ್ರಮ ಕೈಕೊಳ್ಳಲಾಗುವುದು: ಶಾಸಕ ವಿರೂಪಾಕ್ಷಪ್ಪ

ಲೋಕದರ್ಶನವರದಿ

ಬ್ಯಾಡಗಿ: ಜಿಲ್ಲಾಡಳಿತದಿಂದ ಪಟ್ಟಣದಲ್ಲಿ ಮಹಷರ್ಿ ವಾಲ್ಮೀಕಿ ಮೂತರ್ಿ ಪ್ರತಿಷ್ಠಾಪನೆಗೆ ಅನುಮತಿ ದೊರಕಿದ ಮೇಲೆ ವಿಶೇಷ ಅನುದಾನದಲ್ಲಿ ಮೂತರ್ಿ ಪ್ರತಿಷ್ಠಾಪನೆಗೆ ಕ್ರಮ ಕೈಕೊಳ್ಳಲಾಗುವುದೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ಸ್ಥಳೀಯ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕಾ ಆಡಳಿತ, ತಾಲೂಕಾ ಪಂಚಾಯತ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯಕ್ತಾಶ್ರಯದಲ್ಲಿ ಜರುಗಿದ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾಲ್ಮೀಕಿ ಸಮುದಾಯದ ದಾರ್ಶನಿಕರಾದ ಮಹಷರ್ಿ ವಾಲ್ಮೀಕಿಯವರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತಾಗಬೇಕು. ವಾಲ್ಮೀಕಿ ಸಮುದಾಯದ ಜನರು ಶೈಕ್ಷಣಿಕವಾಗಿ ಹಾಗೂ ಆಥರ್ಿಕವಾಗಿ ಬಹಳಷ್ಟು ಹಿಂದೆ ಉಳಿದಿದ್ದು, ಅವರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಮುಂದೆ ಬರುವಂತೆ ತಿಳಿಸಿದರು.

      ವಾಲ್ಮೀಕಿ ಸಮುದಾಯದ ಬೇಡಿಕೆಯಂತೆ ವಾಲ್ಮೀಕಿ ಭವನಕ್ಕೆ ರಸ್ತೆ ಹಾಗೂ ಕಂಪೌಂಡ ಮತ್ತು ಭೋಜನ ಮಂದಿರ ನಿಮರ್ಾಣಕ್ಕೆ ಶೀಘ್ರದಲ್ಲಿಯೇ ರಾಜ್ಯ ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಪಟ್ಟಣದ ವ್ಯಾಪ್ತಿಯಲ್ಲಿ ಪುರಸಭೆಯ ವತಿಯಿಂದ ಎಲ್ಲ ವಾಡರ್ುಗಳಲ್ಲಿ ಸಮಗ್ರ ಅಭಿವೃದ್ಧಿ ಕಲ್ಪಿಸುವ ನಿಟ್ಟಿನಲ್ಲಿ ಒಟ್ಟಾರೆ 5 ಕೋಟಿ ರೂ.ಗಳ ವಿಶೇಷ ಅನುದಾನವನ್ನು ತಮ್ಮ ಅಧಿಕಾರವಧಿಯಲ್ಲಿ ಮಂಜೂರಿ ಮಾಡಿಸಿದ್ದು, ಆದಷ್ಟು ಬೇಗನೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಪಟ್ಟಣದ ಸಮಗ್ರ ಅಭಿವೃದ್ದಿಗೆ ಮುನ್ನುಡಿ ಬರೆಯುವುದಾಗಿ ತಿಳಿಸಿದರು.

    ನಿವೇಶನರಹಿತ ಫಲಾನುಭವಿಗಳಿಗೆ ಪುರಸಭೆಯ ವತಿಯಿಂದ ನಿವೇಶನ ಸಹಿತ ಮನೆಗಳ ನಿಮರ್ಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅನುದಾನ ಒದಗಿಸಲಾಗುತ್ತಿದೆ. ಪಟ್ಟಣದಲ್ಲಿ ಸುಸಜ್ಜಿತ ಬಡಾವಣೆ ನಿಮರ್ಾಣಕ್ಕೆ ಆಧ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ತಯಾರಿಸಿ ಸುಂದರ ಬಡಾವಣೆ ನಿಮರ್ಾಣಕ್ಕೆ ಕ್ರಮ ಕೈಕೊಳ್ಳಲಾಗುವುದು. ತಮ್ಮ ಅಧಿಕಾರದ ಅವಧಿಯಲ್ಲಿ ಮನೆ ಇಲ್ಲದ ಪ್ರತಿಯೊಬ್ಬರಿಗೂ ಸೂರನ್ನು ಕಲ್ಪಿಸಲು ತಾವು ಕಂಕಣ ಬದ್ದರಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು. 

  ಉಪನ್ಯಾಸಕ ರಾಜಕುಮಾರ ತಳವಾರ ಮಾತನಾಡಿ ಮಹಷರ್ಿ ವಾಲ್ಮೀಕಿಯವರು ಅಕ್ಷರ ಜ್ಞಾನವಿಲ್ಲದ ಓರ್ವ ಬೇಟೆಗಾರನಾಗಿ ಕಾಡಿನಲ್ಲಿ ಜೀವಿಸುತ್ತಿದ್ದ ಸಂದರ್ಭದಲ್ಲಿ ನಾರದರ ಅನುಗ್ರಹದಿಂದ ತಮ್ಮ ಜೀವನದಲ್ಲಿ ಬದಲಾವಣೆ ಹೊಂದಿ 24 ಸಾವಿರ ಶ್ಲೋಕದ ರಾಮಾಯಣ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿ ಜಗತ್ಪ್ರಸಿದ್ದರಾಗಿದ್ದಾರೆ. ರಾಮನ 16 ಗುಣಗಳೇ ರಾಮಾಯಣ ಗ್ರಂಥ ರಚನೆಗೆ ಮೂಲ ಕಾರಣವೆಂದರು.

       ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾ.ಪಂ.ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ರಾಜ್ಯ ಪಿಎಲ್ಡಿ ಬ್ಯಾಂಕ್ ನಿದರ್ೇಶಕ ಸುರೇಶ ಯತ್ನಳ್ಳಿ, ಧುರೀಣ ಮುರಿಗೆಪ್ಪ ಶೆಟ್ಟರ, ಪುರಸಭಾ ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಶಿವರಾಜ ಅಂಗಡಿ, ಫಕ್ಕೀರಮ್ಮ ಛಲವಾದಿ, ಹನುಮಂತಪ್ಪ ಮ್ಯಾಗೇರಿ, ವಿನಾಯಕ ಹಿರೇಮಠ, ಕಲಾವತಿ ಬಡಿಗೇರ, ಕವಿತಾ ಸೊಪ್ಪಿನಮಠ, ಗಾಯಿತ್ರಮ್ಮ ರಾಯಕರ, ಮಂಗಳ ಗೆಜ್ಜಿಹಳ್ಳಿ, ಧುರೀಣರಾದ ದುಗ್ಗಪ್ಪ ಭಂಡ್ರಾಳ, ವಂಡ್ರಪ್ಪ ಕಾಡಸಾಲಿ, ಹೊನ್ನೂರಪ್ಪ ಕಾಡಸಾಲಿ, ಶಿವಪ್ಪ ಅಂಬಲಿ, ತಹಶೀಲದಾರ ಕೆ.ಗುರುಬಸವರಾಜ, ತಾ.ಪಂ.ಕಾರ್ಯನಿವರ್ಾಹಕ ಅಧಿಕಾರಿ ಆಬಿದ್ ಗದ್ಯಾಳ, ಸಮಾಜ ಕಲ್ಯಾಣಾಧಿಕಾರಿ ಪುಂಡಲಿಕ ಮಾನವರೆ. ಬಿಸಿಎಂ ವಿಸ್ತರಣಾಧಿಕಾರಿ ಗೀತಾ ಕುಂದಾಪುರ, ತೋಟಗಾರಿಕೆ ಅಧಿಕಾರಿ ಟಿ.ವಿಜಯಲಕ್ಷ್ಮಿ, ಬಿಇಓ ರುದ್ರಮುನಿ, ಸಿಡಿಪಿಓ ರಾಮಲಿಂಗಪ್ಪ ಅರಳಿಗುಪ್ಪಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಗೂ ವಾಲ್ಮೀಕಿ ಸಮುದಾಯದ ಭಾಂದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ನಿವೃತ ಪ್ರಾಚಾರ್ಯ ಎಸ್.ಎನ್.ಯಮನಕ್ಕನವರ ಸ್ವಾಗತಿಸಿದರು. ಪಿ.ಎಫ್.ಕರಿಯಣ್ಣನವರ ನಿರೂಪಿಸಿ ವಂದಿಸಿದರು.