ಲೋಕದರ್ಶನ ವರದಿ
ಯಲಬುಗರ್ಾ: ನಮ್ಮ ತಾಲೂಕಿನಲ್ಲಿರುವ ವಿವಿಧ ರೀತಿಯ ಕೆರೆಗಳನ್ನ ಅಭಿವೃದ್ಧಿ ಪಡಿಸಿ ಅಂತರ್ಜಲ ವೃದ್ಧಿ ಹಾಗೂ ಕೆರೆ ಸುತ್ತ ಮುತ್ತಲಿನ ಗ್ರಾಮದ ರೈತರ ಜಮೀನುಗಳಿಗೆ ನೀರು ಕೊಡುವ ಕೆಲಸವನ್ನು ಮಾಡಲಾಗುವದು ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು.ತಾಲೂಕಿನ ಮಲ್ಲಸಮುದ್ರ ಹಾಗೂ ಲಕಮನಗುಳೆ ಕೆರೆಗಳನ್ನ ವೀಕ್ಷಿಸಿ ಅವರು ಮಾತನಾಡಿದರು.
ಮಲ್ಲಸಮುದ್ರ ಕೆರೆ ಅತ್ಯಂತ ವಿಶಾಲವಾಗಿದ್ದು ಈ ಕೆರೆಯು ಸಂಪೂರ್ಣವಾಗಿ ತುಂಬಿದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೆ ಹೃಷಿ ಚಟುವಟಿಕೆ ಮಾಡಲು ಅನುಕೂಲವಾಗುವದು ಹಿಂದಿನ ಆಡಳಿತದಲ್ಲಿ ಕೆರೆಗಳ ಹೆಸರಿನಲ್ಲಿ ಕೊಟಿ ಕೋಟಿ ಅನುದಾನ ಬಿಡುಗಡೆಯಾಗಿದ್ದು ಹಣ ಗುತ್ತಿಗೆದಾರರ ಪಾಲಾಗಿದೆ ವಿನಹ ಕೆರೆಗಳ ಅಬಿವೃದ್ಧಿ ಮಾತ್ರ ಆಗಲೆ ಇಲ್ಲಾ ಆದ್ದರಿಂದ ಸಣ್ಣ ನೀರಾವರಿ ಇಲಾಖೆಯವರೊಂದಿಗೆ ಚಚರ್ಿಸಿ ಈ ಕೆರೆಗಳ ಕಾಯಕಲ್ಪಕ್ಕಾಗಿ ಉತ್ತಮ ಯೋಜನೆಯನ್ನ ಜಾರಿಗೆ ತಂದು ನಮ್ಮಲ್ಲಿ ಲಭ್ಯವಿರುವ ನೀರನ್ನು ಉಪಯೋಗಿಸಿಕೋಳ್ಳುವಂತೆ ಮಾಡಲಾಗುವದು. ಈ ಕೆರೆಯ ನೀರು ನಿಲ್ಲದೆ ಹರಿದು ಹೊಗುತ್ತಿದ್ದು ಅದನ್ನು ಶೀಘ್ರದಲ್ಲಿ ನೀರನ್ನು ನಿಲ್ಲಿಸಲಾಗುವದು ಹಾಗೂ ಹಂತ ಹಂತವಾಗಿ ಕೆರೆಗಳ ಅಭಿವೃದ್ಧಿ ಹಮ್ಮಿಕೊಳ್ಳಲಾಗುವದು ಎಂದರು.
ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಕೃಷ್ಣಮೂತರ್ಿ, ತಹಶೀಲ್ಧಾರ ರಮೇಶ ಅಳವಂಡಿಕರ್, ಮುಖಂಡರಾದ, ಬಸವಲಿಂಗಪ್ಪ ಭೂತೆ, ಸಿ ಎಚ್ ಪೋಲಿಸ್ಪಾಟೀಲ್, ರತನ್ ದೇಸಾಯಿ, ಈರಪ್ಪ ಕುಡಗುಂಟಿ, ಶಿವಕುಮಾರ ನಾಗಲಾಪೂರ, ಪ್ರಭುರಾಜ ಕಲಬುಗರ್ಿ, ಸಿದ್ದರಾಮೇಶ ಬೇಲೆರಿ, ವೀರಣ್ನ ಹುಬ್ಬಳ್ಳಿ, ಸುಧಾಕರ್ ದೇಸಾಯಿ ಸೇರಿದಂತೆ ಗ್ರಾಮಸ್ಥರು ರೈತರು ಹಾಜರಿದ್ದರು.