ಏಸರ್ೆಲ್-ಮ್ಯಾಕ್ಸಿಸ್ ಪ್ರಕರಣ ಪಿ. ಚಿದಂಬರಂ, ಮಗ ಕಾತರ್ಿ ವಿರುದ್ಧ ಸಿಬಿಐ ಚಾಜರ್್ಶೀಟ್

ನವದೆಹಲಿ 19: ಏಸರ್ೆಲ್ ಮಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ರಚಿಸಿರುವ ಚಾಜರ್್ಶೀಟ್ನಲ್ಲಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ  ಮತ್ತು ಅವರ ಪುತ್ರ ಕಾತರ್ಿ ಚಿದಂಬರಂ ಅವರ ಹೆಸರನ್ನು ಸೇರಿಸಲಾಗಿದೆ. 

ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಅವರ ಮುಂದೆ ಸಿಬಿಐ ತನ್ನ ಪೂರಕ ಚಾಜರ್್ಶೀಟ್ ಸಲ್ಲಿಕೆ ಮಾಡಿದ್ದು ನ್ಯಾಯಾಲಯ ಇದನ್ನು  ಜುಲೈ 31 ರಂದು ಪರಿಗಣಿಸಲು ತೀಮರ್ಾನಿಸಿದೆ. 

2006ರಲ್ಲಿ  ಹಣಕಾಸು ಸಚಿವರಾಗಿದ್ದ ಚಿದಂಬರಂ ವಿದೇಶಿ ಹೂಡಿಕೆ ಪ್ರೋತ್ಸಾಹ ಮಂಡಳಿ (ಎಫ್ಐಪಿಬಿ) ಅನುಮೋದನೆ ಮೂಲಕ ಹೇಗೆ ಆಥರ್ಿಕ ಅವ್ಯವಹಾರ ನಡೆಸಲು ಬಳಸಿಕೊಂಡಿದ್ದಾರೆ ಎನ್ನುವ ಕುರಿತಂತೆ ಸಿಬಿಐ ತನಿಖೆ ನಡೆಸುತ್ತಿದೆ. 

ಹಿರಿಯ ಕಾಂಗ್ರೆಸ್ ಮುಖಂಡ ಚಿದಂಬರಂ ಏಸರ್ೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ 3,500 ಕೋಟಿ ರೂ.ಮತ್ತು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ 305 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ನನ್ನ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐಅ) ಮೇಲೆ ಒತ್ತಡವಿದೆ. ಹೀಗಾಗಿ ಅಧಿಕಾರಿಗಳು ಇದನ್ನೇ ಮಾಡಿದ್ದಾರೆ.. ಈ ಪ್ರಕರಣವು ಈಗ ಗೌರವಯುತ ನ್ಯಾಯಾಲಯದಲ್ಲಿದೆ.ನಾನು ಇದರ ಕುರಿತಂತೆ ಹೋರಾಟ ನಡೆಸಲಿದ್ದೇನೆ. ಇಷ್ಟಲ್ಲದೆ ನಾನೀಗ ಈ ಕುರಿತಂತೆ ಯಾವ ಸಾರ್ವಜನಿಕ ಹೇಳಿಕೆಗಳನ್ನು ನೀಡಬಯಸುವುದಿಲ್ಲ ಎಂದು ಮಾಜಿ ಸಚಿವರು ಟ್ವೀಟ್ ಮಾಡಿದ್ದಾರೆ.