ಅಮೀರ್ ಖಾನ್ ನಂಬಿ 'ಮಹಾಭಾರತ' ಚಿತ್ರಕ್ಕೆ ಅಂಬಾನಿಯಿಂದ 1000 ಕೋಟಿ ಹೂಡಿಕೆ?


ಟಾಲಿವುಡ್ ನ ಖ್ಯಾತ ನಿದರ್ೆಶಕ ಎಸ್ಎಸ್ ರಾಜಮೌಳಿ ನಿದರ್ೆಶನದ ಬಾಹುಬಲಿ ಸರಣಿ ಚಿತ್ರಗಳು ಭಾರತೀಯ ಚಿತ್ರರಂಗದ ದಾಖಲೆಗಳನ್ನು ಧೂಳಿಪಟ ಮಾಡಿದ ನಂತರ ಐತಿಹಾಸಿಕ ಚಿತ್ರಗಳ ನಿಮರ್ಾಣಕ್ಕೆ ಹಲವು ನಿಮರ್ಾಪಕರು ಸಾವಿರಾರೂ ಕೋಟಿ ವೆಚ್ಚ ಮಾಡಲು ಮುಂದಾಗಿದ್ದಾರೆ.  

ಅಂತೆ ಬಾಲಿವುಡ್ ನಟ ಮಿ. ಪಫರ್ೆಕ್ಟ್ ಅಮೀರ್ ಖಾನ್ ನಿಮರ್ಿಸಲು ಉದ್ದೇಶಿಸಿರುವ ಮಹಾಭಾರತ ಚಿತ್ರಕ್ಕೆ ಉದ್ಯಮಿ ಮುಕೇಶ್ ಅಂಬಾನಿ ಹೂಡಿಕೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  

ಮಹಾಭಾರತ ಸೃಷ್ಟಿಗಾಗಿ ಅಮೀರ್ ಖಾನ್ ಕೈಗೆ 1000 ಕೋಟಿ ರುಪಾಯಿಯನ್ನು ಕೊಡಲು ಮುಖೇಶ್ ಅಂಬಾನಿ ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.  

ಸದ್ಯ ಅಮೀರ್ ಖಾನ್ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ನಟಿಸುತ್ತಿದ್ದು ಇದರ ಜೊತೆಗೆ ಮಹಾಭಾರತ ಚಿತ್ರದ ಕುರಿತಂತೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.  

ಅಮೀರ್ ಖಾನ್ ನಟನೆಯ ದಂಗಲ್ ಚಿತ್ರ ಭಾರತದಲ್ಲಿ 900 ಕೋಟಿಯಷ್ಟು ಬಿಸಿನೆಸ್ ಮಾಡಿತ್ತು. ಇನ್ನು ಚೀನಾದಲ್ಲಿ ಬಿಡುಗಡೆಯಾದ ದಂಗಲ್ ಚಿತ್ರ 1200 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು ಸದ್ಯ ಅತೀ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರಗಳ ಪೈಕಿ ದಂಗಲ್ ಮೊದಲ ಸ್ಥಾನದಲ್ಲಿದೆ.  

ಇನ್ನು ಅತ್ಯುತ್ತಮ ಕಲೆಕ್ಷನ್ ಟ್ರಾಕ್ ರೆಕಾಡರ್್ ಹೊಂದಿರುವ ಅಮೀರ್ ಖಾನ್ ಮಹಾಭಾರತ ಚಿತ್ರವನ್ನು ನಿಮರ್ಿಸಿದ್ದೆ ಆದರೆ ಅದು ಭಾರತೀಯ ಚಿತ್ರರಂಗದ ಪ್ರಸ್ತುತ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡುವ ಸಾಧ್ಯತೆ ಇದೆ. ಇದರಿಂದಾಗಿಯೇ ಮುಕೇಶ್ ಅಂಬಾನಿ 1000 ಕೋಟಿ ರುಪಾಯಿಯನ್ನು ಅಮೀರ್ ಖಾನ್ ಕೈಗಿಡಲು ತೀಮರ್ಾನಿಸಿದ್ದಾರೆ. 

ಸದ್ಯದ ಮಾಹಿತಿ ಪ್ರಕಾರ ಮಹಾಭಾರತ ಚಿತ್ರದಲ್ಲಿ ಅಮಿರ್ ಖಾನ್, ಮೋಹನ್ ಹಾಲ್ ಮತ್ತು ರಜನಿಕಾಂತ್ ರಂತಾ ದಿಗ್ಗಜ ನಟರು ನಟಿಸುವ ಸಾಧ್ಯತೆ ಇದೆ. 

ಒಂದು ವೇಳೆ ಚಿತ್ರ ತಯಾರಾದರೇ 1000 ಕೋಟಿ ವೆಚ್ಚದಲ್ಲಿ ರೆಡಿಯಾದ ಭಾರತದ ಮೊದಲ ಚಿತ್ರ ಎಂಬ ಖ್ಯಾತಿಗೆ ಮಹಾಭಾರತ ಚಿತ್ರ ಭಾಜನವಾಗಲಿದೆ.