ಲೋಕದರ್ಶನ ವರದಿ
ಯಲ್ಲಾಪುರ, 7: ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ದೇವಸ್ಥಾನದಲ್ಲಿ ಕಾತರ್ಿಕೋತ್ಸವವನ್ನು ಗುರುವಾರ ಸಂಜೆ ನಾಯಕನಕೆರೆಯಲ್ಲಿ ದೋಣಿಗೆ ವಿದ್ಯುತ್ ದೀಪಾಲಂಕರಿಸಿ, ಮತ್ತು ಬಾಳೆ ಕಂಬಗಳ ಮೇಲೆ ಜ್ಯೋತಿ ಕೋಲಿಗೆ ದೀಪ ಹಚ್ಚಿ ಕೆರೆಯಲ್ಲಿ ತೆಪ್ಪೋತ್ಸವದ ಮೂಲಕ ಆಚರಿಸಲಾಯಿತು. ಅರ್ಚಕರಾದ ವಿ.ಗೋಪಾಲಕೃಷ್ಣ ಭಟ್ಟ ಮತ್ತು ವೇ.ಮೂ||ಪರಮೇಶ್ವರ ಭಟ್ಟ ಗಂಗಾಮಾತೆಗೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿ, ನಂತರ ತೆಪ್ಪೋತ್ಸವಕ್ಕೆ ಸಹಾಯಕ ಉಪರಣ್ಯ ಸಂರಕ್ಷಣಾಧಿಕಾರಿ ಅಶೋಕ ಭಟ್ಟ ಚಾಲನೆ ನೀಡಿ, ದೀಪೋತ್ಸವದ ಮೂಲಕ ದೇವರಿಗೆ ಪೂಜೆ ಸಲ್ಲಿಸುವುದು ಶ್ರೇಷ್ಟವಾದುದು
ಎಂದರು.
ದೇವಸ್ಥಾನ ವ್ಯವಸ್ಥಾಪಕ ಅಶೋಕ ಶೆಟ್ಟಿ ನೇತ್ರತ್ವದಲ್ಲಿ ಈ ವರ್ಷದ ತೆಪ್ಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಯಕನಕೆರೆಯಲ್ಲಿ ಪ್ರಪ್ರಥಮವಾಗಿ ದೀಪೋತ್ಸವ, ತೆಪ್ಪೋತ್ಸವವನ್ನು ನೂರಾರು ಜನರು ಕಣ್ತುಂಬಿಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ, ಗೌರವ ಕಾರ್ಯದಶರ್ಿ ಶಂಕರ ಭಟ್ಟ ತಾರೀಮಕ್ಕಿ, ಸೀಮಾ ಪರಿಷತ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಗಡೆ, ಉಪಾಧ್ಯಕ್ಷ ಜಗದೀಶ ದೀಕ್ಷಿತ್, ಪ್ರಮುಖರಾದ ಗಣಪತಿ ಬೋಳಗುಡ್ಡೆ, ಕೇಂದ್ರ ಮಾತೃ ಮಂಡಳಿ ಉಪಾಧ್ಯಕ್ಷೆ ಮುಕ್ತಾಶಂಕರ, ಸೀಮಾ ಪರಿಷತ್ ಕಾರ್ಯದಶರ್ಿ ನಾರಾಯಣ ಭಟ್ಟ ಚಾಪೇತೋಟ, ಮಹಾ ಗಣಪತಿ ಯುವಕ ಸಂಘದ ಅಧ್ಯಕ್ಷ ವಿನೋದ ದೇವಾಡಿಗ, ಕಾರ್ಯದಶರ್ಿ ಸುಧೀಂದ್ರ.ಪೈ, ಸಂತೋಷ ಮರಾಠಿ, ದೀಪಕ ಬಾಂದೇಕರ, ಲಕ್ಷ್ಣಣ ಗೌಡ, ದೀಪಕ ನಾಯ್ಕ, ಶ್ರೀನಿವಾಸ ಪಟಗಾರ, ರಾಘು ದೇವಾಡಿಗ, ರಾಘವೇಂದ್ರ.ಪೈ ಮತ್ತಿತರರು ಉಪಸ್ಥಿತರಿದ್ದರು.