ಮಹಿಳೆ ಸುಶಿಕ್ಷಿತಳಾಗಿ, ಸಂಘಟಿತಳಾಗಿ ಸಮರ್ಥಳಾಗಬೇಕು: ಹಿರೇಮಠ

A woman should be well-educated, organized and competent: Hiremath

ದೇವರಹಿಪ್ಪರಗಿ 10: ಮಹಿಳೆಯು ಸುಶಿಕ್ಷಿತಳಾಗಿ ಸಂಘಟಿತಳಾಗಿ ಸಮರ್ಥಳಾಗಬೇಕು. ಮಹಿಳಾ ಸಬಲಿಕರಣಕ್ಕೆ ಸರಕಾರವು ಜಾರಿಗೊಳಿಸಿದ ಯೋಜನೆಗಳನ್ನು ಸದ್ಬಳಿಕೆ ಮಾಡಿಕೊಂಡು ಸಶಕ್ತಳಾಗಬೇಕು ಎಂದು ಎ.ಬಿ.ಸಾಲಕ್ಕಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ವಿಜಯಲಕ್ಷ್ಮಿ ಆರಿ​‍್ಹರೇಮಠ ಹೇಳಿದರು. 

ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಜ್ಯೋತಿಯನ್ನು ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ಪ್ರೊ.ಅಶೋಕ ಹೆಗಡೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗಾಗಿ ಭಾಷಣ, ಮೆಹಂದಿ ವೇಷಭೂಷಣ, ಬೆಂಕಿರಹಿತ ಅಡುಗೆ ಸ್ಪರ್ಧೆ ಗಳನ್ನು ನಡೆಸಲಾಗಿತ್ತು. ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು. 

ಇದೇ ಸಂದರ್ಭದಲ್ಲಿ ಆಯ್‌.ಕ್ಯೂ.ಎ.ಸಿ ಸಂಯೋಜಕ ಪ್ರೊ. ಅಕ್ರಂ ಪಾಷಾ, ಸಾಂಸ್ಕೃತಿಕ ವಿಭಾಗದ ಸಂಯೋಜಕ ಪ್ರೊ.ಪಿ.ಎಮ್ ಪರಗೊಂಡ ಪ್ರೊ. ಎಸ್‌.ಬಿ. ಜಾಲವಾದಿ, ಪ್ರೊ.ಎಮ್‌.ಎಮ್ ಲಕ್ಷ್ಮೀಶ ಪ್ರೊ.ಅವಿನಾಶ ಎಚ್‌.ಹಾಗೂ ಎಲ್ಲ ಅತಿಥಿ ಉಪನ್ಯಾಸಕರು, ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಉಪಸ್ಥಿತಿರಿದ್ದರು. ಈ ಸಂದರ್ಭದಲ್ಲಿ ಕು.ಚೈತ್ರಾ ಭಾಸಗಿ ಮತ್ತು ಸಾವಿತ್ರಿ ಮದಭಾವಿ ಪ್ರಾರ್ಥಿಸಿದರು. ಪ್ರೊ.ಪ್ರೇಮಕುಮಾರಿ ಸ್ವಾಗತಿಸಿದರು. ಪುತ್ಸಾ ಹುಣಶ್ರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ವಿಜಯಲಕ್ಷ್ಮೀ ನಾಟೀಲ ವಂದಿಸಿದರು.