ಒಡಿಶಾದಲ್ಲಿ ಭಾನುವಾರದಿಂದ ಮೂರು ದಿನಗಳ ರಾಜಪರ್ವ ಉತ್ಸವ; ಕೊರೊನಾ ಬಿಕ್ಕಟ್ಟಿನ ಕಾರಣ ಮನೆಯಲ್ಲಿಯೇ ಆಚರಣೆ

ಭುವನೇಶ್ವರ, ಜೂನ್ 14,ಮುಂಗಾರು ಆಗಮನ ಸಂಭ್ರಮಿಸುವ ಒಡಿಶಾದ ಮೂರು ದಿನ ವಿಶಿಷ್ಟ ಉತ್ಸವ ರಾಜಪರ್ವ ಭಾನುವಾರದಿಂದ ಆರಂಭವಾಗಲಿದೆ.ಭೂಮಿಯ ಫಲವತ್ತತೆಯ ದಿನಗಳನ್ನು ಗುರುತಿಸಿ ಗೌರವಿಸುವುದು ಈ ಆಚರಣೆಯ ಉದ್ದೇಶ. ಈ ಉತ್ಸವದ ಸಂದರ್ಭದಲ್ಲಿ ಮೂರು ದಿನಗಳ ಕಾಲ ಎಲ್ಲ ಬಗೆಯ ಕೃಷಿ ಚಟುವಟಿಕೆಗಳಾದ ಉಳುವುದು, ಬಿತ್ತುವುದು ಮೊದಲಾದವು ಇರುವುದಿಲ್ಲ.ಈ ಬಾರಿ ಕೊರೊನಾ ಸೋಂಕು ಬಿಕ್ಕಟ್ಟಿನ ಕಾರಣ ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಉತ್ಸವ ಆಚರಿಸಲಿದ್ದಾರೆ. 11 ಜಿಲ್ಲೆಗಳಲ್ಲಿ ವಾರಾಂತ್ಯದ ನಿರ್ಬಂಧಗಳಿಂದಾಗಿ ಹಬ್ಬದ ವಾತಾವರಣವೇ ಇಲ್ಲದಂತಾಗಿದೆ. ಜೂನ್ 13 ರಿಂದ 16 ವರೆಗೆ ಜನರು ಗುಂಪು ಸೇರುವಂತಿಲ್ಲ ಎಂದೂ ಸಹ ಸರ್ಕಾರ ಆದೇಶಿಸಿದೆ. ಹೀಗಾಗಿ ಈ ರಾಜಸಂಕ್ರಾಂತಿ ಉತ್ಸವ ಕಳೆಗುಂದಿದೆ.