ಲೋಕದರ್ಶನ ವರದಿ
ಮೂಡಲಗಿ 15: ಸ್ಥಳೀಯ ಕರುನಾಡು ಸೈನಿಕ ತರಬೇತಿ ಕೇಂದ್ರದಿಂದ ಜಮ್ಮುವಿನ ಪುಲ್ವಾಮದಲ್ಲಿ ಕಳೆದ ವರ್ಷ ಫೆ. 14ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಕೇಂದ್ರ ಮೀಸಲು ಪಡೆಯ ವೀರಯೋಧರ ಬಲಿದಾನದ ನೆನಪಿಗಾಗಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಯಿತು. ಹುತಾತ್ಮರಾದ 44 ವೀರಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮೇಣದ ಭತ್ತಿ ಹಚ್ಚಿ ಒಂದು ನಿಮಿಷ ಮೌನಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಅಪರ್ಿಸಲಾಯಿತು.
ಈ ಸಂದರ್ಭದಲ್ಲಿ ಕರುನಾಡು ಸೈನಿಕ ತರಭೇತಿ ಕೇಂದ್ರದ ಸಂಸ್ಥಾಪಕ ಮಾಜಿ ಸೈನಿಕ ಶಂಕರ ತುಕ್ಕನ್ನವರ ಮಾತನಾಡಿ, ಕಳೆದ ವರ್ಷ ಫೆ. 14ರಂದು ನಡೆದ ಜೈಷ್ ಇ ಮೊಹಮದ್ ಭಯೋತ್ಪಾದಕ ಸಂಘಟನೆಯ ಕೃತ್ಯ ದೇಶವೇ ಬೆಚ್ಚಿ ಬೀಳಿಸುವಂತಹದು. ನಮ್ಮ ಭಾರತೀಯ ವೀರ ಯೋಧರನ್ನು ಎದುರಿಸಲೂ ಯೋಗ್ಯತೆ ಇಲ್ಲದ ಉಗ್ರಾಗಾಮಿಗಳು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್ಫಿಎಫ್ ಯೋಧರ ವಾಹನಕ್ಕೆ ಅತ್ಮಾಹುತಿ ಬಾಂಬರ್ ಇದ್ದ ವಾಹನ ಡಿಕ್ಕಿ ಹೊಡೆಸಿ ಸ್ಪೋಟ ನಡೆಸಲಾಯಿತು. ಈ ದಾಳಿಯಿಂದ ಹುತಾತ್ಮರಾದ 44 ವೀರಯೋಧರರಿಗೆ ಗೌರವ ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಯುವಕರು ದೇಶ ಸೇವೆ ಮಾಡುವುದರ ಜೊತೆಗೆ ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡಬೇಕು ಎಂದರು.
ಪ್ರೊ. ಸಂಜಯ ಖೋತ ಮಾತನಾಡಿ, ಸೈನ್ಯದಲ್ಲಿ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದೆ. ದೇಶ ಸೇವೆಯಂತಹ ಪವಿತ್ರ ಕೆಲಸ ಕೆಲವರಿಗೆ ಮಾತ್ರ ಸಿಗುತ್ತದೆ ಎಂದರು. ಮಾಜಿ ಪುರಸಭೆಯ ಮಾಜಿ ಉಪಾಧ್ಯಕ್ಷ ರವೀಂದ್ರ ಸೋನವಾಲ್ಕರ, ಹನುಮಂತ ಸತರಡ್ಡಿ ಸೇರಿದಂತೆ ಕರುನಾಡು ಸೈನಿಕ ತರಬೇತಿ ಕೇಂದ್ರದ ಶಿಬಿರಾಥರ್ಿಗಳು ಪಾಲ್ಗೋಂಡಿದ್ದರು.