ಲೋಕದರ್ಶನ ವರದಿ
ಅಂಕೋಲಾ,22 : ರಾ.ಹೆ.ಯಲ್ಲಿ ರಸ್ತೆ ಕ್ರಾಸ್ ಮಾಡುತ್ತಿರುವ ವೇಳೆ ಶುಕ್ರವಾರ ಸಂಜೆ ಖಾಸಗಿ ಬಸ್ ಬಡಿದು ಬೈಕ್ ಸವಾರ ಮೃತಪಟ್ಟ ಹಿನ್ನಲೆಯಲ್ಲಿ ಸ್ಥಳೀಯರು ಮತ್ತೊಮ್ಮೆ ವಾಹನ ಸಂಚಾರ ತಡೆಹಿಡಿದು, ವೇಗ ನಿಯಂತ್ರಕ (ಹಂಪ್) ಅಳವಡಿಸಲೇಬೇಕೆಂದು ಪಟ್ಟು ಹಿಡಿದು ಶನಿವಾರ ಪಿಕಾಕ್ ಬಾರ್ ಸಮೀಪ ಪ್ರತಿಭಟನೆ ನಡೆಸಿದರು.
ಚಂದ್ರಶೇಖರ ಆಗೇರ (ಪೋಸ್ಟ್ಮೆನ್) ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ವೇಳೆ ಸ್ಥಳದಲ್ಲಿಯೇ ಶುಕ್ರವಾರ ಪ್ರತಿಭಟಿಸಿದ್ದ ಸ್ಥಳೀಯರು ತಾಲೂಕು ಆಡಳಿತಕ್ಕೆ ಮತ್ತು ಎಸ್ಪಿ ವಿನಾಯಕ ಪಾಟೇಲ್ ಅವರಲ್ಲಿ ರಾ.ಹೆ.ಮತ್ತು ಪಟ್ಟಣದ ಪ್ರಮುಖ ರಸ್ತೆಗಳು ಸೇರುವ ಪ್ರದೇಶ ಅಪಾಯಕಾರಿಯಾಗಿದ್ದು, ಅಲ್ಲಿ ವೇಗ ನಿಯಂತ್ರಕ ವ್ಯವಸ್ಥೆ ಮಾಡಿಕೊಡುವಂತೆ ವಿನಂತಿಸಿದ ಹಿನ್ನಲೆಯಲ್ಲಿ ಸಂಬಂಧಿಸಿದ ಆಯ್ಆರ್ಬಿ ಕಂಪನಿಯವರಿಗೆ ಕೂಡಲೇ ಸಾರ್ವಜನಿಕ ಹಿತರಕ್ಷಣೆಯಿಂದ ಕಾರ್ಯನಿರ್ವಹಿಸುವಂತೆ ನಿದರ್ೇಶನ ನೀಡಲಾಗಿತ್ತು.
ಶನಿವಾರ ಮತ್ತೊಮ್ಮೆ ಸ್ಥಳೀಯರು ಸೇರಿ ಪ್ರತಿಭಟನೆ ನಡೆಸಿ, ರಸ್ತೆಯ ಅವ್ಯವಸ್ಥೆ ಕುರಿತು ಖಂಡಿಸಿ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಡಿವೈಎಸ್ಪಿ ಶಂಕರ ಮಾರಿಯಾಳ ದೂರವಾಣಿ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿದರ್ೇಶನ ನೀಡಿದರಲ್ಲದೆ ತಾವೇ ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿ, ಸಾರ್ವಜನಿಕರಿಂದ ಮನವಿ ಸ್ವೀಕರಿಸಿದರು.
ನಂತರ ಅವರು ಅಪಘಾತ ಸ್ಥಳವನ್ನು ಪರಿಶೀಲಿಸಿ, ಪಿಕಾಕ್ ಬಾರ್ ಮುಂಬದಿ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಕೂಡುವಲ್ಲಿ ಏರು-ಪೇರುವಿನಿಂದಾಗಿ ಸಂಚಾರಕ್ಕೆ ತೊಡಕಾಗುತ್ತಿರುವುದನ್ನು ವೀಕ್ಷಿಸಿ ಸುಗಮ ಸಂಚಾ ರಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿಸಿದವರಿಗೆ ತಿಳಿಸಿದರು. ಹೆದ್ದಾರಿ ಗುತ್ತಿಗೆ ಪಡೆದಿರುವ ಆಯ್ಆರ್ಬಿ ಕಂಪನಿಯವರಿಂದ ತಾತ್ಕಲಿಕವಾಗಿ ವೇಗ ನಿಯಂತ್ರಕ (ಹಂಪ್) ಕಾರ್ಯ ಮಾಡಿಸಿ ಪೊಲೀಸ್ ಮತ್ತು ತಾಲೂಕು ಆಡಳಿತ ಸ್ಥಳೀಯರ ಆಶಯದಂತೆ ಕ್ರಮಕೈಗೊಂಡು ಸಾರ್ವಜನಿಕರ ಮನವೊಲಿಸಲು ಯಶಸ್ವಿಯಾದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರಾದ ಬಿ.ಡಿ.ನಾಯ್ಕ, ಪಾಂಡುರಂಗ ನಾಯಕ, ಪ್ರಶಾಂತ ಗಣಪತಿ ನಾಯಕ, ವಿಕಾಸ ನಾಯಕ, ಅಜೇಯ ಆರ್.ನಾಯ್ಕ, ಸುರೇಶ ನಾಯ್ಕ, ಅನಿಲ ನಾಯ್ಕ, ಅಶೋಕ ಎಲ್. ಆಗೇರ, ಗಣಪತಿ ಆಗೇರ, ಯಾದವ ಲಕ್ಷ್ಮೇಶ್ವರ, ಯೋಗೇಶ ಆಗೇರ, ಸಂತೋಷ ಆಗೇರ, ಪ್ರಭಾಕರ ಆರ್. ಆಗೇರ, ಬಾಲಚಂದ್ರ ಆಗೇರ, ಪಿಳ್ಳೆ, ಮಧುಕರ, ರೇಖಾ ಆಗೇರ, ಮಮತಾ ಆಗೇರ, ಮಾದೇವ ನಾಯ್ಕ, ಮೋಹನ ನಾಯ್ಕ, ಮೋಹನದದಾಸ ಕಕರ್ಿಕರ್, ಎಸ್.ಎನ್.ಭಟ್, ಅಶೋಕಕುಮಾರ, ಎನ್.ಎಲ್.ನಾಯಕ, ಪುರಸಭೆ ಸದಸ್ಯರಾದ ಅಶೋಕ ಶೆಡಗೇರಿ, ಮಂಗೇಶ ಆಗೇರ, ಜಯಪ್ರಕಾಶ ನಾಯ್ಕ, ಕಾತರ್ಿಕ ನಾಯ್ಕ, ವಿಶ್ವನಾಥ ನಾಯ್ಕ, ಮಂಜುನಾಥ ಎಸ್.ನಾಯ್ಕ, ಸ್ಥಳೀಯ ಯುವಕ ಮಂಡಳದ ಸದಸ್ಯರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಥಳೀಯರ ದಿಡೀರ್ ಪ್ರತಿಭಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವ ವಾಹನಗಳು ಸರತಿ ಸಾಲಿ ನಲ್ಲಿ ಹೆದ್ದಾರಿ ಎರಡು ಕಡೆ ಬಹುದೂರದ ತನಕ ನಿಂತಿತ್ತು. ಪಿ.ಎಸ್.ಐ. ಶ್ರೀಧರ ಎಸ್.ಆರ್, ಎ.ಎಸ್.ಐ. ಅಶೋಕ ತಳಗಪ್ಪನವರ್, ಹವಲ್ದಾರ ಮೋಹನದಾಸ ಶೇಣ್ವಿ, ರಾಜೇಶ ನಾಯ್ಕ, ರವಿ ಗೌಡ ಸಿಬ್ಬಂದಿಗಳಾದ ಮದರಸಾಬ್ ಚಿಕ್ಕೇರಿ,ಆಶೀಪ್ ಕುಂಕೂರು, ಜಿ.ಬಿ.ರಾಣೆ, ರಾಘವೇಂದ್ರ ನಾಯ್ಕ, ಚಂದ್ರಕಾಂತ ಗೌಡ, ಪದ್ಮಾ ಗಾಂವಕರ ಮರಿಯಾಂಬಿ ಮತ್ತಿತರ ಸಿಬ್ಬಂದಿಗಳು ಹಾಜರಿದ್ದರು.