ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯ ಪಟ್ಟಣದಲ್ಲಿ ಪ್ರತಿಭಟನೆ

ಕುಷ್ಟಗಿ 06:  5 ತಾಲೂಕನ್ನು ಗಂಗಾವತಿ ಉಪ ವಿಭಾಗಕ್ಕೆ ಸೇರೆ​‍್ಡ ಮಾಡುವುದನ್ನು ವಿರೋಧಿಸಿ ಹೈದರಾಬಾದ್ ಕರ್ನಾಟಕ ಯುವ ಶಕ್ತಿ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಯುಕ್ತ ಆಶ್ರಯ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸಿಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನೆಗೆ ಕುಷ್ಟಗಿ ಮದ್ದಾನೆಶ್ವರ ಮಠದ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿ ಮಾತನಾಡಿ ಕುಷ್ಟಗಿ ಗಂಗಾವತಿ ಉಪ ವಿಭಾಗಕ್ಕೆ ಸೇರೆ​‍್ಡಗೊಂಡರೆ ತಾಲೂಕಿನ ಹನುಮಸಾಗರ ಹಾಗೂ ಹನುಮನಾಳ ಭಾಗದ ಹಳ್ಳಿಗಳಿಗೆ ತೊಂದರೆಯಾಗುತ್ತದೆ. ಆದ ಕಾರಣ ಈ ಪ್ರಸ್ತಾವನೆಯನ್ನು ಇಲ್ಲಿಗೆ ಕೈ ಬಿಡಬೇಕು ಅಥವಾ ಕುಷ್ಟಗಿ ತಾಲೂಕನ್ನು ಉಪ ವಿಭಾಗವನ್ನಾಗಿ ಮಾಡಿದರೆ ಉಳಿದ ತಾಲೂಕಿಗೆ ಅನುಕೂಲವಾಗಲಿದೆ ಎಂದರು ಹೈದರಾಬಾದ್ ಕರ್ನಾಟಕ ಯುವ ಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಗಾಣಿಗೇರ್ ಮಾತನಾಡಿ ಗಂಗಾವತಿಯು ನಮ್ಮ ಕುಷ್ಟಗಿ ತಾಲೂಕಿನ ಕೊನೆಯ ಗ್ರಾಮದಿಂದ ಸುಮಾರು 120ಕ್ಕೂ ಅಧಿಕ ಕಿಲೋಮೀಟರ್ ದೂರವಿದೆ ಗಂಗಾವತಿ ಉಪವಿಭಾಗಕ್ಕೆ ಕುಷ್ಟಗಿ ಸೇರ್ಪಡೆಗೊಂಡರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಲಿದೆ ಗಂಗಾವತಿಯ ಉಪವಿಭಾಗಕ್ಕೆ ಕುಷ್ಟಗಿ ಸೇರೆ​‍್ಡಯ ಪ್ರಸ್ತಾವನೆ ಕೈಬಿಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಶರಣಪ್ಪ ವಕೀಲರು ಪ್ರಮುಖರಾದ ದೊಡ್ಡಬಸನಗೌಡ ಬಯ್ಯಾಪುರ ಎಸ್ ಜಿ ಪಾಟೀಲ್ ಫಕೀರ​‍್ಪ ಚಳಗೇರಿ ಕಲ್ಲೇಶ ತಾಳದ ದೇವೇಂದ್ರ​‍್ಪ ಬಳೂಟಿಗಿ ಟಿ ಬಸವರಾಜ್ ಭೀಮನಗೌಡ ಜಾಲಿಹಾಳ ಹಂಪನಗೌಡ ಬಳುಟಗಿ ಜೆ ಜೆ ಆಚಾರ್ ವಸಂತ ಮೇಲಿನಮನಿ ಸುಖರಾಜ್ ತಾಳ್ಕೆರೆ ನಾಗಪ್ಪ ಸೂಡಿ ಅಮರೇಗೌಡ ಪಾಟೀಲ್ ಆರ್ ಕೆ ದೇಸಾಯಿ ಶಿವಸಂಗಪ್ಪ ಬಿಜಕಲ್ ಮಲ್ಲಿಕಾರ್ಜುನ ಬಂಡೇರ ಟಿ ಕೃಷ್ಣಮೂರ್ತಿ ಹುಸೇನ್ ಕಾಯಿ ಗಡ್ಡಿ ಶಿವಕುಮಾರ್ ಗಂಧದ ಮಠ ಮಹಾಂತಯ್ಯ ಅರಳಲಿ ಮಠ ಇನ್ನು ಅನೇಕರು ಪ್ರತಿಭಟನೆಯಲ್ಲಿ ಎಲ್ಲಾ  ಗಣ್ಯಾತಿಗಣ್ಯರು ಹಾಗೂ ಸಂಘ-ಸಂಸ್ಥೆಗಳು ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು ವರದಿಗಾರರು ಮಂಗಳೂರು ಮಂಗಳೇಶ