ತೈಲ ಬೆಲೆ ಏರಿಕೆ ಖಂಡಿಸಿ, ಕಂಪ್ಲಿಯಲ್ಲಿ ಬೃಹತ್ ಪ್ರತಿಭಟನೆ

    ಕಂಪ್ಲಿ:ಸೆ.10. ತೈಲ ಬೆಲೆ ಏರಿಕೆ ವಿರೋಧಿಸಿ, ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ಗೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜೆಡಿಎಸ್, ಆಮ್ ಆದ್ಮಿ ಸೇರಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಕಂಪ್ಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಣಕು ಶವ ಸುಟ್ಟು ಸೋಮವಾರ ಪ್ರತಿಭಟನೆ ನಡೆಸಿದರು. 

      ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಮೋದಿಯವರು ಪ್ರಚಾರ ಪ್ರೀಯರಾಗಿದ್ದು, ಇದರಿಂದ ದೇಶದ ಜನರಿಗೆ ಮಂಕುಬೂದಿ ಹಚ್ಚುತ್ತಿದ್ದಾರೆ. ಕಪ್ಪು ಹಣ ತರದೇ ಜನರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುವುದಕ್ಕೆ ಆಗಿಲ್ಲ. ಜಿಎಸ್ಟಿಯಿಂದ ಜನ ಸಾಮಾನ್ಯರ ಬದುಕು ಅತಂತ್ರವಾಗಿದೆ. ನೋಟ್ ಬ್ಯಾನ್ಯಿಂದ ಜನರಿಗೆ ಹಣದ ಕೊರತೆ ಉಂಟಾಗಿದೆ. ದಿನದಿಂದ ದಿನಕ್ಕೆ ತೈಲ ಬೆಲೆ ಸೇರಿ ನಾನಾ ಸಾಮಾಗ್ರಿಗಳು ಗಗನಕ್ಕೇರಿದರಿಂದ ಜನರು ಸಂಕಷ್ಟದ ಜೀವನ ನಡೆಸುತಿದ್ದಾರೆ. ಇದರಿಂದ ದೇಶದ ಜನರು ಬಿಜೆಪಿ ಪಕ್ಷವನ್ನು ದೇಶದಿಂದ ಕಿತ್ತಿ ಹಾಕಬೇಕಾಗಿದೆ ಎಂದರು. 

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಹನುಮಂತ ಮಾತನಾಡಿದರು.  

     ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ತಾಪಂ ಸದಸ್ಯರಾದ ಕೆ.ಷಣ್ಮುಖಪ್ಪ, ಎಚ್.ಈರಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ಹನುಮಂತ, ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಕೆ.ಎಸ್.ಚಾಂದ್ಭಾಷ, ಯುವ ಕಾಂಗ್ರೆಸ್ ಕ್ಷೇತ್ರಧ್ಯಕ್ಷ ಕೆ.ತಿಮ್ಮಪ್ಪ, ಕನರ್ಾಟಕ ಮಾದಿಗರ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಮುಖಂಡರಾದ ಇಟಗಿ ಬಸವರಾಜಗೌಡ, ಹಬೀಬ್ ರೆಹಮಾನ್, ಪಿ.ಮಧು, ನೆಣಕಿ ಗಿರೀಶ್ ಸೇರಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪಾಳ್ಗೊಂಡಿದ್ದರು. 

    ಭಾರತ್ ಬಂದ್ ಇದ್ದರು ಕಂಪ್ಲಿಯಲ್ಲಿ ಕೆಲ ಕಾಲದವರೆಗು ಅಂಗಡಿ ಮುಂಗಟ್ಟುಗಳು ಆರಂಭಗೊಂಡಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಹಣ್ಣು ಮತ್ತು ಹೂವಿನ ವ್ಯಾಪಾರ ಬಲು ಜೋರಾಗಿತ್ತು. ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿರುವುದು ಕಂಡು ಬಂತು.