ಸಂತೆಯಲ್ಲಿ ಟೊಮೆಟೊ ತಿಂದ ಕರು ವ್ಯಾಪಾರಸ್ಥನ ಹೊಡೆತದಿಂದ ಸತ್ತ ಕರು

ಸಂತೆಯಲ್ಲಿ ಟೊಮೆಟೊ ತಿಂದ ಕರು  ವ್ಯಾಪಾರಸ್ಥನ ಹೊಡೆತದಿಂದ ಸತ್ತ ಕರು

ಮುಂಡಗೋಡ: ಸಂತೆಯಲ್ಲಿ ಇಟ್ಟಿದ್ದ ಟೊಮೆಟೋ ಹಣ್ಣುಗಳನ್ನು ಕರುವೊಂದು ತಿಂದಿದ್ದಕ್ಕೆ ಸಿಟ್ಟಿಗೆದ್ದ ವ್ಯಾಪಾರಸ್ಥ ಕೋಲಿನಿಂದ ಜಾನುವಾರುಗೆ ಹೊಡೆದಿದ್ದರಿಂದ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಪಟ್ಟಣದಲ್ಲಿ ನಡೆದಿದೆ.

ಸೋಮವಾರದ ಸಂತೆಯಲ್ಲಿ ದನಕರುಗಳು ಓಡಾಡುತ್ತಿರುತ್ತವೆ. ಅದರಂತೆ ಸಾಯಂಕಾದ ವೇಳೆಗೆ ಕರುವೊಂದು ಟೊಮೆಟೊ ಹಣ್ಣು ತಿಂದಿದೆ ಎಂದು ಹೇಳಲಾಗಿದ್ದು ಹಾವೇರಿ ಮೂಲದ ವ್ಯಾಪಾರಸ್ಥ ಮಾಬುಷಾ ಕೋಲಿನಿಂದ ಮನಬಂದತೆಕರುವಿಗೆ ಥಳಿಸಿದ್ದಾನೆ ಇದರಿಂದ ಸ್ಥಳದಲ್ಲೆ ಟೊಮೆಟೊ ತಿಂದ ತಪ್ಪಿಗೆ ಕರು ಅಸುನೀಗಿದೆ.

ಆಕ್ರೋಶಗೊಂಡ ಸಾರ್ವಜನಿಕರು ವ್ಯಾಪಾರಿಯನ್ನು ತರಾಟೆಗೆ ತೆಗೆದುಕೊಂಡರು. ಆರೋಪಿ ಮಾಬುಷಾ ಸ್ಥಳದಲ್ಲಿ ಟೊಮೆಟೊ ಬಿಟ್ಟು ಪರಾರಿಯಾಗಿದ್ದಾನೆ. ಕರುವಿನ ಮಾಲಿಕ ಇಪರ್ಾನ ಶಿಗ್ಗಾವಿ ಹಾಗೂ ಸಾರ್ವಜನಿಕರು ಸೇರಿ ವ್ಯಾಪಾರಿ ಸಾಮಗ್ರಿ ತಂದಿದ್ದ ವಾಹನವನ್ನು ಪೊಲೀಸರಿಗೆ ಒಪ್ಪಿಸಿದರು ಟೊಮೆಟೊತಿಂದಿದ್ದಕ್ಕೆ ಮೂಕ ಪ್ರಾಣೆಯ ಜೀವ ಕಳೆದ ವ್ಯಾಪಾರಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ ಹಾಕುತ್ತಿರುವುದು ಕಂಡುಬಂದಿದೆ.