8 ರಿಂದ 10 ನೇ ತರಗತಿ ವಿದ್ಯಾರ್ಥಿಗಳ ಪ್ರವಾಸಕ್ಕೆ ಚಾಲನೆ

8th to 10th class students tour

ರಾಯಬಾಗ 10: ಪಟ್ಟಣದಲ್ಲಿ ಇಂದು  ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಶಾಲಾ ಶಿಕ್ಷಣ ಸಾಕ್ಷರತಾ ಮತ್ತು ಇಲಾಖೆಯ ಯೋಜನೆಯಡಿಯಲ್ಲಿ   2024/25 ನೇ ಸಾಲಿನ  ಚಿಕ್ಕೊಡಿ ಶೈಕ್ಷಣಿಕ ಜಿಲ್ಲೆಯ  ರಾಯಬಾಗ ತಾಲ್ಲೂಕಿನ 8 ರಿಂದ 10 ನೇ ತರಗತಿ  ವಿದ್ಯಾರ್ಥಿಗಳಿಗೆ 149 ಎಸ್ಸಿ ಎಸ್ಟಿ  ವಿದ್ಯಾರ್ಥಿ/  ವಿದ್ಯಾರ್ಥಿನಿಯರಿಗೆ  ಐದು ದಿನಗಳ ಕಾಲ ಪ್ರವಾಸಕ್ಕೆ  ಕುಡಚಿ ಶಾಸಕ ಮಹೆಂದ್ರ ತಮ್ಮನ್ನವರ ಚಾಲನೆ ನೀಡಿದರು.           

ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಪ್ಪ ಆರ್ ,  ಸಮನ್ವಯಧಿಕಾರಿ ಬಸವರಾಜ  ಕಾಂಬಳೆ , ಪ್ರವಾಸೊದ್ಯಮ ಅಧಿಕಾರಿ ಯಶವಂತ ಶಿವಕೆರೆ , ಸರ್ಕಾರಿ ಪ್ರೌಢ ಶಾಲೆಯ ಉಪಪ್ರಾಚಾರ್ಯ  ಬಿ.ಎಮ್‌.ಮಾಳಿ ,ಪಿ.ಎ ಶಾರಬಿದ್ರೆ ,  ಪಿ.ಬಿ ಪಾಲಯ್ಯಾ , ಬಿ.ಆರ್‌.ಕೆರುರೆ , ಎ.ಎಮ್‌.ತಾಂಬೊಳೆ  ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.