ಶರಣ ಹಡಪದ ಅಪ್ಪಣ್ಣನವರ 884ನೇ ಜಯಂತ್ಯೋತ್ಸವ

ಶಿವಶರಣ ಹಡಪದ ಅಪ್ಪಣ್ಣನವರ 884ನೇ ಜಯಂತ್ಯೂತ್ಸವ ಕಾರ್ಯಕ್ರಮದಲ್ಲಿ ಮನಗೂಳಿ ಹಿರೇಮಠದ ಸಂಗನಬಸವ ಮಹಾಸ್ವಾಮೀಜಿ ಭಾವಚಿತ್ರ


ಲೋಕದರ್ಶನ ವರದಿ

ಬಸವನಬಾಗೇವಾಡಿ 01:  ಕಾಯಕದೊಂದಿಗೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ವಚನಸಾಹಿತ್ಯದ ಮುಖಾಂತರ ಪರಿವರ್ತನೆ ಮಾಡಿದ ಕಾಯಕನಿಷ್ಠ ಸಮಾಜದ ಪರಿವರ್ತಕ ಶ್ರೇಷ್ಠ ಶರಣ ಹಡಪದ ಅಪ್ಪಣ್ಣನವರು ಎಂದು ಮನಗೂಳಿ ಹಿರೇಮಠದ ಸಂಗನಬಸವ ಮಹಾಸ್ವಾಮೀಜಿ ಹೇಳಿದರು.

     ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರ 884ನೇ ಜಯಂತ್ಯೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಅವರು ಕಾಯಕನಿಷ್ಠೆಯೊಂದಿಗೆ ಬಸವೇಶ್ವರರ ಆಪ್ತ ಕಾರ್ಯದಶರ್ಿಯಾಗಿ ಅನುಭವ ಮಂಟಪದ ಪ್ರಧಾನ ಕಾರ್ಯದಶರ್ಿಯಾಗಿ ಎಲ್ಲ ಶರಣರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಸವೇಶ್ವರರಿಗೆ ಸಹಾಯ ಮಾಡುತ್ತಾ ಸಮಾಜದ ಪರಿವರ್ತನೆಗೆ ಶ್ರಮಿಸಿದ್ದು ಅವರ ಸಮಾಜಮುಖಿ ಚಿಂತನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

    12ನೇ ಶತಮಾನದ ಬಸವಾದಿ ಶರಣರು ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ವಚನಸಾಹಿತ್ಯದ ಮೂಲಕ ಎಲ್ಲರಿಗೂ ಅರ್ಥವಾಗುವ ನಿಟ್ಟಿನಲ್ಲಿ ಸರಳವಾದ ಭಾಷೆಯಲ್ಲಿ ಜಾಗೃತಿ ಮೂಡಿಸಿದರು, ಅವರ ಚಿಂತನೆಯಲ್ಲಿ ಸಮಾಜದ ಶ್ರೇಯೋಭಿವೃದ್ಧಿ ಅಡಗಿತ್ತು, ಶರಣರ ವಿಚಾರಧಾರೆಯಲ್ಲಿ ಪ್ರತಿಯೊಬ್ಬರು ನಡೆದಾಗ ಕಲ್ಯಾಣ ರಾಜ್ಯವಾಗಿ ನಿಮರ್ಾಣವಾಗುತ್ತದೆ, ಮುಂದಿನ ಪೀಳಿಗೆಗೆ ಶರಣರ ಸಂದೇಶವನ್ನು ತಲುಪಿಸುವ ಜವಾಬ್ದಾರಿಯನ್ನು ಎಲ್ಲರೂ ಹೊತ್ತಕೊಳ್ಳಬೇಕಿದೆ ಎಂದು ಹೇಳಿದರು.

    ಸಮಾಜದ ಮುಖಂಡ ರಮೇಶ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಹಾಂತೇಶ ಹುಲಗಬಾಳ, ಸಿದ್ದು ಹಡಪದ, ಬಸವರಾಜ ಹಡಪದ, ನಾಗಪ್ಪ ಹಡಪದ, ರಮೇಶ ನಾವಿ, ಉಮೇಶ ನಾವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು, ಲಕ್ಷ್ಮಣ ಹಡಪದ ಸ್ವಾಗತಿಸಿದರು, ಹಣಮಂತ ಹತ್ತರಕಿ ನಿರೂಪಿಸಿದರು, ಮುದಕು ಹಡಪದ ವಂದಿಸಿದರು, ಇದೇ ಸಂದರ್ಭದಲ್ಲಿ ಬಸವೇಶ್ವರ ಹಾಗೂ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು ನಂತರ ಸಂಗೀತ ಕಾರ್ಯಕ್ರಮ ನಡೆಯಿತು.