ಮಲ್ಲಿಕಾರ್ಜುನನ ದರ್ಶನಕ್ಕೆ ಹೊರಟ ಭಕ್ತರಿಗೆ ಗ್ರಾಮಸ್ಥರಿಂದ ಬಿಳ್ಕೋಡುಗೆ
ಕಾಗವಾಡ 14: ತಾಲೂಕಿನ ಮೋಳೆ ಗ್ರಾಮದ ಪಾದಯಾತ್ರೆ ದಾಸೋಹ ಸಮಿತಿ ಇವರಿಂದ ಆಂದ್ರ್ರದೇಶದ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಸತತ 7ನೇ ವರ್ಷದ ಪಾದಯಾತ್ರೆಯ ಮುಖಾಂತರ ಗುರುವಾರ ದಿ. 13 ರಂದು ಸಂಜೆ ತೆರಳಿದರು.
ಈ ವೇಳೆ ಪಾದಯಾತ್ರಾ ಕಮೀಟಿ ಅಧ್ಯಕ್ಷ ಶ್ರೀಶೈಲ ಜಂಗಲಗಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಕೂಡ ಹೊಳಿ ಹುಣ್ಣಿಮೆಯ ದಿನದಂದು ಕಾಮಣ್ಣ ದಹನದ ನಂತರ ಮಹಾ ಮಂಗಳಾರತಿ ಮಾಡಿ, ಪಾದಯಾತ್ರೆ ಕೈಗೊಳ್ಳುತಿದ್ದು, ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಿಂದ 7ನೇ ವರ್ಷದ ಪಾದಯಾತ್ರೆ ಪ್ರಾರಂಭಗೊಳ್ಳಲಿದ್ದು, ಪ್ರತಿ ದಿನ ಸುಮಾರು 40 ರಿಂದ 50 ಕೀಮಿ ಕ್ರಮಿಸಿ, ಹದಿಮೂರು ದಿನಗಳ ನಂತರ ಶ್ರೀಶೈಲ ತಲುಪಲಿದ್ದೇವೆ. ಅಲ್ಲಿ ಐದು ದಿನಗಳ ದಾಸೋಹ ಮಾಡುತ್ತವೆ. ಪ್ರತಿವರ್ಷ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು ನೂರರಿಂದ ನೂರಾಐವತ್ತು ಜನರು ಪಾದಯಾತ್ರೆ ಮೂಲಕ ಕಂಬಿ ಹಾಗೂ ನಂದಿ ಕೋಲು ಹೊತ್ತು ತೆರಳುತ್ತೆವೆ ಎಂದು ಮಾಹಿತಿ ನೀಡಿದರು.
ಪಾದಯಾತ್ರೆ ಹೊರಟ ಭಕ್ತರು ಭಜನೆ ಮಾಡುತ್ತಾ ಪ್ರಮುಖ ಬೀದಿಗಳ ಮೂಲಕ ಸಾಗಿ ತಂಗಡಿ ರಸ್ತೆಯ ಬಳಿ ಬೀಳ್ಕೊಡಲಾಯಿತು.
ಈ ವೇಳೆ ಪಾದಯಾತ್ರೆ ಕಮೀಟಿ ಉಪಾಧ್ಯಕ್ಷ ಕುಮಾರ ತುಗಶೆಟ್ಟಿ, ಶ್ರೀಶೈಲ ಹಳ್ಳೋಳ್ಳಿ, ಶಿವಾನಂದ ಸಂಭೋಜಿ, ಮಲ್ಲಪ್ಪ ಬಡಿಗೇರ, ಬಸು ಹಳ್ಳೋಳ್ಳಿ, ಸುಭಾಷ ಪಾಟೀಲ, ಶಿವಾನಂದ ಕಡಕೋಳ, ಶಂಕರ ತೇಲಿ, ಚನ್ನಪ್ಪ ಯಾದವಾಡ, ಸಂಜು ಮಾನೆ, ಸಲಬಯ್ಯ ಹಿರೇಮಠ, ತಾತ್ಯಾಸಾಬ ಸಂಭೋಜಿ, ಕೃಷ್ಣಾ ಕೋಳೆಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.