ಯರಗಟ್ಟಿ 15: ಸಮೀಪದ ಮುರಕಟ್ನಾಳ ಗ್ರಾಮದ ಅಯ್ಯಪ್ಪ ಭಕ್ತವೃಂದಿದ್ದ 7ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯು ಬಸವೇಶ್ವರ ರಂಗ ಮಂದಿರದಲ್ಲಿ ಜರುಗಿತು.
ಸಾಲಹಳ್ಳಿ ರುದ್ರಗೌಡ ಗುರುಸ್ವಾಮಿಗಳು ಬಹು ವಿಜೃಂಭಣೆಯಿಂದ ಪೂಜೆಯ ವಿದಿ ವಿದಾನಗಳನ್ನು ನೇರವೇರಿಸಿದರು.ಈ ವೇಳೆ ಅಯ್ಯಪ್ಪಸ್ವಾಮಿ ಅಭಿಷೇಕ, ಪುಷ್ಪಾರ್ಚನೆ, ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಮಹಾಪ್ರಸಾದ ಜರುಗಿತು.ಈ ಸಂದರ್ಭದಲ್ಲಿ ಕಟಕೋಳ ಈರಣ್ಣಾ ಗುರುಸ್ವಾಮಿಗಳು, ಸತ್ತಿಗೇರಿ ಈರಣ್ಣಾ ಗುರುಸ್ವಾಮಿಗಳು, ಕೆ.ಚಂದರಗಿ ಬಸವರಾಜ ಗುರುಸ್ವಾಮಿಗಳು, ಬನ್ನೂರ ಶಿಂಧೆ ಗುರುಸ್ವಾಮಿಗಳು, ಉದಪುಡಿ ಕೃಷ್ಣಾ ಗುರುಸ್ವಾಮಿಗಳು, ಕೊಡ್ಲಿವಾಡ ರಮೇಶ ಗುರುಸ್ವಾಮಿಗಳು, ಮುರಕಟ್ನಾಳ ಸೋಮು ಗುರುಸ್ವಾಮಿಗಳು ಸೇರಿದಂತೆ ಸುತ್ತಲಿನ ಗ್ರಾಮಗಳ ಗುರುಸ್ವಾಮಿಗಳು ಮತ್ತು ಮಾಲಾದಾರಿಗಳು ಇದ್ದರು.