ಮೂರು ದಿನಗಳ ಭಾರೀ ಮಳೆಗೆ 58 ಬಲಿ


ಲಕ್ನೋ 28: ಉತ್ತರ ಪ್ರದೇಶದಲ್ಲಿ ಮೊನ್ನೆ ಗುರುವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಿಸಿರುವ ಅವಘಡಗಳಲ್ಲಿ 58 ಜನರು ಮೃತಪಟ್ಟಿದ್ದು ಇತರ 53 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಮೀರತ್ನಲ್ಲಿ 10, ಆಗ್ರಾದಲ್ಲಿ 6, ಮೈನ್ಪುರಿಯಲ್ಲಿ  ನಾಲ್ಕು, ಮುಜಫರನಗರ ಮತ್ತು ಕಸ್ಗಂಜ್ನಲ್ಲಿ ತಲಾ ಮೂರು, ಆನ್ರೋಹಾ, ಬರೇಲಿ, ಬಾಗಪತ್ ಮತ್ತು ಬುಲಂದ್ಶಹರ್ನಲ್ಲಿ ತಲಾ 2, ಮತ್ತು ಕಾನ್ಪುರ ದೇಹಾತ್, ಮಥುರಾ, ಗಾಜಿಯಾಬಾದ್, ಹಾಪುರ್, ರಾಯ್ ಬರೇಲಿ, ಜಲಾನ್, ಜಾನ್ಪುರ, ಪ್ರತಾಪ್ಗ್ಢ, ಬಂಡಾ, ಫಿರೋಜಾಬಾದ್, ಅಮೇಠಿ, ಕಾನ್ಪುರ ಮತ್ತು ಪಿಲಿಭೀತ್ ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.  

ಉತ್ತರ ಪ್ರದೇಶದ ಅನೇಕ ಸ್ಥಳಗಳಲ್ಲಿ ಈಗಿನ್ನು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.