ಲೋಕದರ್ಶನ ವರದಿ
ಗಂಗಾವತಿ: ಕೇಂದ್ರ ಸರಕಾರದ ನೂತನ ಯೋಜನೆಯಾಗಿರುವ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆ ಜಿಲ್ಲೆಯಲ್ಲಿ 4 ಕಡೆ ಮಂಜೂರಾಗಿವೆ ಎಂದು ಅಂಚೆ ನಿರೀಕ್ಷಕ ಶರಣಪ್ಪ ತಿಳಿಸಿದರು.
ತಾಲೂಕಿನ ಮರಳಿ ಗ್ರಾಮದಲ್ಲಿ ಭಾನುವಾರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ತರ ಯೋಜನೆ ಇದಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಕುರಿತು ಮಾಹಿತಿ ಒದಗಿಸಲು ಮತ್ತು ಅನುಕೂಲ ಮಾಡಲು ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ, ಪ್ರಗತಿನಗರ, ಜಂಗಮರ ಕಲ್ಗುಡಿ ಮತ್ತು ಗಂಗಾವತಿ ಬಜಾರ್ ಅಂಚೆ ಕಚೇರಿಯಲ್ಲಿ ಈ ಯೋಜನೆ ಈಗಾಗಲೇ ಆರಂಭಗೊಂಡಿದೆ ಎಂದು ಹೇಳಿದರು.
ಮನೆ, ಮನೆಗೆ ತಮ್ಮ ಬ್ಯಾಂಕ್ ಎಂಬ ಉದ್ದೇಶದಿಂದ ಮೋದಿಯವರು ಇದನ್ನು ದೇಶದಾದ್ಯಂತ ಅನುಷ್ಠಾನಕ್ಕೆ ತಂದಿದ್ದಾರೆ. ಈ ವ್ಯವಹಾರ ಸಂಪೂರ್ಣವಾಗಿ ಕಾಗದರಹಿತವಾಗಿದೆ. ಖಾತೆ ತೆರೆಯಲು ಅಂಚೆ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ಆಧಾರ ಸಂಖ್ಯೆ ಮತ್ತು ಮೊಬೈಲ್ ಇದ್ದರೆ ಸಾಕು ಇಲಾಖೆ ಸಿಬ್ಬಂದಿ ನಿಮಗೆ ವ್ಯವಹರಿಸಲು ಅನುಕೂಲ ಮಾಡಿಕೊಡುತ್ತಾರೆ ಎಂದು ಹೇಳಿದರು.
ಈ ವ್ಯವಹಾರದಲ್ಲಿ ಉಳಿತಾಯ ಮಾಡಿದರೆ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ಶಿಕ್ಷಣ ಪ್ರೇಮಿ ಚಿನ್ನುಪಾಟಿ ಪ್ರಭಾಕರ ಮಾತನಾಡಿ ತಾವು ಬಾಲ್ಯದ ದಿನಗಳಲ್ಲಿ ಉಳಿತಾಯ ಮಾಡಿರುವ ಕಾರಣದಿಂದ ಅಭಿವೃದ್ದಿ ಹೊಂದಿದ್ದೇವೆ ಎಂದು ಹೇಳಿದರು. ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉಳಿತಾಯ ಮಾಡಲು ಪ್ರೇರಣೆ ನೀಡಬೇಕು ಎಂದು ತಿಳಿಸಿದರು.
ಮರಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶ್ರೀಕಾಂತ ಹಿರೇಮಠ ಮಾತನಾಡಿ ಗ್ರಾಮದಲ್ಲಿ ಅಂಚೆ ಇಲಾಖೆ ಸಿಬ್ಬಂದಿ ರಾತ್ರಿ ಸಹ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗ ಸೂಚಿಸಿದರು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಶೇಷಗಿರಿ ಕುಲಕಣರ್ಿಯವರನ್ನು ಸನ್ಮಾನ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ಹುಲಿಗೆಮ್ಮ, ಸದಸ್ಯರಾದ ರಂಜಾನಸಾಬ, ಸಹಕಾರಿ ಧುರೀಣ ರಮೇಶ ಕುಲಕಣರ್ಿ ಪಾಲ್ಗೊಂಡಿದ್ದರು.