4 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣೆ 30 ವರ್ಷದ ಹೋರಾಟ ಪ್ರತಿಫಲವೇ ನಿವೇಶನ ಭಾಗ್ಯ

ಲೋಕದರ್ಶನ ವರದಿ

ಕಂಪ್ಲಿ:ಜ.07. ಆಶ್ರಯ ಯೋಜನೆಯಡಿಯಲ್ಲಿ ಶಿಬಿರದಿನ್ನಿ ಬಲಭಾಗದ 162 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ನೀಡಿದ್ದು, ಮುಂದಿನ ದಿನದಲ್ಲಿ ಇನ್ನೂಳಿದ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಪುರಸಭೆ ಮುಂಭಾಗದಲ್ಲಿ ಪುರಸಭೆಯಿಂದ ಸೋಮವಾರ ಆಯೋಜಿಸಿದ್ದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 30 ವರ್ಷದ ಹಿಂದೆ ಪುರಸಭೆಗೆ 350 ರೂ.ಕಟ್ಟಿ ರಶೀದಿ ಪಡೆದವರಿಗೆ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಲಾಗಿತ್ತು. ಅಲ್ಲದೆ, ಕನರ್ಾಟಕ ಯುವ ಜಾಗೃತಿ ವೇದಿಕೆ ನೇತೃತ್ವದಲ್ಲಿ ನಿವೇಶನ ಪಟ್ಟಾ ನೀಡುವಂತೆ ಸತತ ಹೋರಾಟ ಹಮ್ಮಿಕೊಂಡು ಬರಲಾಗಿದೆ. ಪುರಸಭೆ ಮುಂಭಾಗದಲ್ಲಿ ಶಿಬಿರದಿನ್ನಿ ಬಲ ಭಾಗದ ನಿವಾಸಿಗಳು ಉಪವಾಸ ಸತ್ಯಗ್ರಹಗಳನ್ನು ಹಮ್ಮಿಕೊಂಡು ಬಂದಿದ್ದಾರೆ. ಹೀಗಾಗಿ ಫಲಾನುಭವಿಗಳ ಕಷ್ಟ ಅರಿತು, 162 ಜನ ಫಲಾನುಭವಿಗಳು ನಿವೇಶನ ಹಕ್ಕು ಪತ್ರ  ನೀಡಲಾಗಿದೆ. ಇನ್ನೂಳಿದ ಫಲಾನುಭವಿಗಳಿಗೆ ಮುಂದಿನ ಹಂತದಲ್ಲಿ ನಿವೇಶನ ಪಟ್ಟಾ ನೀಡಲಾಗುವುದು ಎಂದರು.

ಸೋಮಪ್ಪ ಕೆರೆ ಅಭಿವೃದ್ಧಿ, 100 ಹಾಸಿಗೆಯುಳ್ಳ ಆಸ್ಪತ್ರೆ, ರಸ್ತೆ ಸೇರಿದಂತೆ ನಾನಾ ಅಭಿವೃದ್ದಿ ಕಾರ್ಯಗಳನ್ನು ಮಾಡುವ ಗುರಿ ಹೊಂದಲಾಗಿದೆ. ಕಂಪ್ಲಿ ಪಟ್ಟಣದಲ್ಲಿ ಬಹಳಷ್ಟು ಜನರು ಕಡು ಬಡವರಿದ್ದಾರೆ. ಹಾಗಾಗಿ ಕಂಪ್ಲಿಯಲ್ಲಿ 10 ಎಕರೆ ಖರೀದಿಸಿ, ಜಿ+2 ಎಂಬಂತೆ ಬಡವರಿಗೆ ನಿವೇಶನ ರಹಿತ ಮನೆಗಳ ಹಂಚಿಕೆ ಮಾಡಲಾಗುವುದು. ಮಳೆ, ಚಳಿ, ಬಿಸಿಲು ಲೆಕ್ಕಿಸದೇ ನಿವೇಶನ ಇಲ್ಲದೇ ವಾಸಿಸುವ ಜನತೆಗೆ ನಿವೇಶನ ರಹಿತ ಮನೆ ನೀಡಲಾಗುವುದು. ಗಣಿಬಾಧಿತ ಯೋಜನೆಯಲ್ಲಿ 300 ಕೋಟಿ ಅನುದಾನವನ್ನು ಕಂಪ್ಲಿ ಕ್ಷೇತ್ರಕ್ಕೆ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದು, ಗಣಿಬಾಧಿತ ಅನುದಾನ ಮುಂಜೂರಾದರೆ, ಕಂಪ್ಲಿ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವೆ. ಕಂಪ್ಲಿ ಹಾಗೂ ಕುರುಗೋಡು ತಾಲ್ಲೂಕಿಗಳಿಗೆ ಯುಜಿಡಿ ಅಭಿವೃದ್ಧಿಗೆ ತಲಾ 75 ಕೋಟಿ ಅನುಮೋದನೆ ಮಾಡಲಾಗಿದೆ. 265 ಕೋಟಿಯಲ್ಲಿ ಕಂಪ್ಲಿ ಕ್ಷೇತ್ರದ 8 ಕಡೆಗಳಲ್ಲಿ ಏತನೀರಾವರಿ ಮಾಡಲಾಗುವುದು. ಏತನೀರಾವರಿಯಿಂದ ರೈತರಿಗೆ ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಅನುಕೂಲವಾಗಲಿದೆ ಎಂದರು. ಪುರಸಭೆ ಅಧ್ಯಕ್ಷ ಎಂ.ಸುಧೀರ್ ಅಧ್ಯಕ್ಷತೆವಹಿಸಿ ಮಾತನಾಡಿದರು.  

ಈ ಸಂದರ್ಭದಲ್ಲಿ ಆಶ್ರಯ ಯೋಜನೆಯಡಿ 162 ಜನರಿಗೆ ಹಾಗೂ ಕಂದಾಯ ಇಲಾಖೆಯಿಂದ  ಅಕ್ರಮ ಸಕ್ರಮ ಯೋಜನೆಯಡಿ(94ಸಿಸಿ) 17 ಜನ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಲಾಯಿತು. ನಂತರ ಹೋರಾಟಗಾರರಾದ ಯಾಳ್ಪಿ ವಲಿಬಾಷಾ, ಅಬ್ದುಲ್ ಮುನಾಫ್, ಬಣಗಾರ್ ರೆಹಮಾನ್ ಸಾಬ್, ಬಿ.ಗೌಸ್, ರಾಜರಾವ್ಗೆ ಸನ್ಮಾನಿಸಿ ಗೌರವಿಸಲಾಯಿತು.

ಶಾಸಕರ ಕಛೇರಿ: ಇಲ್ಲಿನ ಪುರಸಭೆಯ ಕೊಠಡಿಯಲ್ಲಿ ಶಾಸಕರ ಸಂಪರ್ಕ ಕಛೇರಿಯನ್ನು ಶಾಸಕ ಜೆ.ಎನ್.ಗಣೇಶ್ ಉದ್ಘಾಟಿಸಿದರು.  ಈ ಕಾರ್ಯಕ್ರಮದಲ್ಲಿ ತಹಶಸೀಲ್ದಾರ್ ಎಂ.ರೇಣುಕಾ, ಮುಖ್ಯಾಧಿಕಾರಿ ಕೆ.ದುರುಗಣ್ಣ, ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್, ಪುರಸಭೆ ಉಪಾಧ್ಯಕ್ಷೆ ಬಾವಿಕಟ್ಟೆ ಮಂಜುಳಾ, ಸದಸ್ಯರಾದ ಸಿ.ಆರ್.ಹನುಮಂತ, ಭಟ್ಟ ಪ್ರಸಾದ್, ಎಂ.ರಾಜೇಶ್, ನಾಗರಾಜ, ರಾಮಂಜಿನೀಯಲು, ವಿ.ರಘುನಾಯಕ, ಸಪ್ಪರದ ರಾಘವೇಂದ್ರ, ರಾಜಸಾಬ್, ಸುರೇಶ್, ಹುಸೇನ್ ಬೀ, ಕೆ.ಲಕ್ಷ್ಮೀದೇವಿ, ಹುಲಿಗೆಮ್ಮ, ಸರಸ್ವತಮ್ಮ,  ಮುಖಂಡರಾದ ಬಿ.ನಾರಾಯಣಪ್ಪ, ಇಟಗಿ ಬಸವರಾಜಗೌಡ, ಯು.ರಾಮದಾಸ್ ಹಾಗೂ ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.