ಬಾಗಲಕೋಟೆ: ಪ್ರಸಕ್ತ ಸಾಲಿನ ಜಿಲ್ಲಾ ಪಂಚಾಯತಿಯ ವಿವಿಧ ಕಾರ್ಯಕ್ರಮಗಳ ಒಟ್ಟು 34472.91 ಲಕ್ಷ ರೂ.ಗಳ ಕ್ರೀಯಾ ಯೋಜನೆಗೆ ಗುರುವಾರ ನಡೆದ ಜಿ.ಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡಿತು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿ.ಪಂ ಅಧ್ಯಕ್ಷರಾದ ಬಾಯಕ್ಕ ಮೇಟಿ ಅವರ ಅಧ್ಯಕ್ಷತೆಯಲ್ಲಿ ನಡೆದ 10ನೇ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯತಿಯ ವಿವಿಧ ಕ್ರೀಯಾ ಯೋಜನೆಗಳಿಗೆ ಅನುಮೋದನೆ ದೊರೆಯಿತು. ಲೋಕೋಪಯೋಗಿ ಕಾಮಗಾರಿಗೆ ರೂ.461.30 ಲಕ್ಷ, ಪ್ರಾಥಮಿಕ ಮತ್ತು ಸೆಕಂಡರಿ ಸಾಮಾನ್ಯ ಶಿಕ್ಷಣಕ್ಕೆ ರೂ.16784.57 ಲಕ್ಷ, ಲೋಕ ಶಿಕ್ಷಣಕ್ಕೆ ರೂ.43.67 ಲಕ್ಷ, ಯುವಜನ ಸೇವೆಗಳು ಮತ್ತು ಕ್ರೀಡೆ ರೂ.175.01 ಲಕ್ಷ, ಕಲೆ ಮತ್ತು ಸಂಸ್ಕೃತಿಗೆ ರೂ.12 ಲಕ್ಷ ಗಳಿಗೆ ಅನುಮೋದಿಸಲಾಯಿತು.
ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳಿಗೆ ರೂ.3947.55 ಲಕ್ಷ ಭಾರತೀಯ ವೈದ್ಯ ಪದ್ದತಿ ರೂ.298.41 ಲಕ್ಷ, ಕುಟುಂಬ ಕಲ್ಯಾಣ ಕಾರ್ಯಕ್ರಮ ರೂ.1696.68 ಲಕ್ಷ, ಸಮಾಜ ಕಲ್ಯಾಣ ರೂ.2835.32 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ರೂ.3787 ಲಕ್ಷ, ಅಲ್ಪ ಸಂಖ್ಯಾತರ ಕಲ್ಯಾಣ ರೂ.464.50 ಲಕ್ಷ, ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ರೂ.110.09 ಲಕ್ಷ, ಕೃಷಿ ಇಲಾಖೆ ರೂ.187.58 ಲಕ್ಷ, ತೋಟಗಾರಿಕೆ ರೂ.461.42 ಲಕ್ಷ, ಭೂಸಾರ ಮತ್ತು ಜಲ ಸಂರಕ್ಷಣೆ ರೂ.95.34 ಲಕ್ಷ, ಪಶು ಸಂಗೋಪನೆ ರೂ.343.70 ಲಕ್ಷ, ಮೀನುಗಾರಿಕೆ ರೂ.74.67 ಲಕ್ಷ, ಅರಣ್ಯ ಮತ್ತು ವನ್ಯ ಜೀವನ ರೂ.821.26 ಲಕ್ಷ, ಸಹಕಾರ ರೂ.6.25 ಲಕ್ಷ ಕ್ರೀಯಾ ಯೋಜನೆಗೆ ಅನುಮೋದಿಸಲಾಯಿತು.
ಇತರೆ ಗ್ರಾಮೀಣ ಅಭಿವೃದ್ದಿ ಕಾರ್ಯಕ್ರಮಗಳು ರೂ.709.27 ಲಕ್ಷ, ಸಣ್ಣ ನೀರಾವರಿ ರೂ.20.82 ಲಕ್ಷ, ರೇಷ್ಮೆ 487.65 ಲಕ್ಷ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳು ರೂ.57 ಲಕ್ಷ, ಕೈಮಗ್ಗ ರೂ.38.60 ಲಕ್ಷ, ಉದ್ಯಮಗಳು ರೂ.2.45 ಲಕ್ಷ, ರಸ್ತೆ ಮತ್ತು ಸೇತುವೆಗಳು ರೂ.475 ಲಕ್ಷ, ವಿಜ್ಞಾನ ಮತ್ತು ಸಂಶೋಧನೆ ರೂ.7 ಲಕ್ಷ, ಸಚಿವಾಲಯ ಆಥರ್ಿಕ ಸೇವೆಗಳು ರೂ.48.80 ಲಕ್ಷ ಹಾಗೂ ಕೃಷಿ ಮಾರುಕಟ್ಟೆ ರೂ.20 ಲಕ್ಷಗಳ ಕ್ರೀಯಾಯೋಜನೆಗಳಿಗೆ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಯಿತು.
ನಂತರ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬಗ್ಗೆ ಚಚರ್ೆ ನಡೆಸಲಾಯಿತು. ಮುಖ್ಯವಾಗಿ ಕುಡಿಯುವ ನೀರು, ಗ್ರಾಮೀಣ ಭಾಗದಲ್ಲಿ ಬಸ್ ಸೌಲಭ್ಯದ ಕೊರತೆ, ಪಶು ವೈದ್ಯಾಧಿಕಾರಿಗಳ ಕೊರತೆ, ಸರಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆ ಆಗದೇ ಇರುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಚಚರ್ೆ ನಡೆಸಲಾಯಿತು. ಜಿಲ್ಲೆಯಲ್ಲಿ ಬರದ ಜೊತೆಗೆ ಪ್ರವಾಹದಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದು, ಜನರಿಗೆ ತುತರ್ಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿ.ಪಂ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯಗಳಲ್ಲಿ ಮೇರಿಟ್ ಇದ್ದ ಮಕ್ಕಳಿಗೆ ಸೀಟುಗಳು ದೊರೆಯುತ್ತಿಲ್ಲವೆಂದು ಜಿ.ಪಂ ಸದಸ್ಯರು ಆರೋಪಿಸಿದ ಹಿನ್ನಲೆಯಲ್ಲಿ ತಾಲೂಕಾ ಮಟ್ಟದಲ್ಲಿ ಆಯ್ಕೆ ಸಮಿತಿ ರಚಿಸಿದ್ದು, ಮೆರಿಟ್ ಆಧಾರ ಮೇಲೆ ವಸತಿ ನಿಲಯಗಳಿಗೆ ಸೀಟುಗಳನ್ನು ಭತರ್ಿ ಮಾಡಿಕೊಳ್ಳಲಾಗುತ್ತಿದೆ. ಸೀಟು ಸಿಗದೇ ಇದ್ದ ಮಕ್ಕಳ ಪಟ್ಟಿಯನ್ನು ನೀಡಿದರೆ ಈ ಕುರಿತು ಚಚರ್ಿಸಿ ಕ್ರಮಕೈಗೊಳ್ಳಲಾಗುವುದೆಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಬಾದಾಮಿ ಹುನಗುಂದ ಹಾಗೂ ಬಾಗಲಕೋಟೆ ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದರು ಕೆಲಸವಾಗುತ್ತಿಲ್ಲವೆಂದು ಜಿ.ಪಂ ಅಧ್ಯಕ್ಷರಲ್ಲಿ ವಿಷಯ ಮುಂದಿಟ್ಟಾಗ ಅಧಿಕಾರಿಗಳಿಗೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ತುತರ್ಾಗಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಕೆಲಸ ಮಾಡಿ ನಂತರ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾಗಿ ಕೈಗೊಂಡಿದ್ದಲ್ಲಿ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಸಿಇಓ ಇಕ್ರಂ ಶರೀಪ್ ಅವರು ಯಾವ ಯಾವ ಗ್ರಾಮದಲ್ಲಿ ನೀರಿನ ಅಭಾವ ವಿರುವ ಬಗ್ಗೆ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಜೊತೆಗೆ ವೈಜ್ಞಾನಿಕವಾಗಿ ತಪಾಸನೆ ಮಾಡಿ ತೊಂದರೆ ಇದ್ದಲ್ಲಿ ಮೊದಲು ಟ್ಯಾಂಕರ್ ಮೂಲಕ ನೀರು ನೀಡಿ ನಂತರ ಬೋರ್ವೆಲ್ ಕೊರೆಯುವ ಹಾಗೂ ಶಾಶ್ವತ ನೀರು ಪೂರೈಸುವ ಯೋಜನೆ ಹಾಕಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಜಿ.ಪಂ ಸಿಇಓ ಇಕ್ರಂ ಶರೀಪ್, ಸೇರಿದಂತೆ ಜಿ.ಪಂ ಸದಸ್ಯರು ಹಾಗೂ ಜಿ.ಪಂ ಉಪಕಾರ್ಯದಶರ್ಿ ಎ.ಜಿ.ತೋಟದ, ಯೋಜನಾ ನಿದರ್ೇಶಕ ವಿ.ಎಸ್.ಹಿರೇಮಠ, ಮುಖ್ಯ ಲೆಕ್ಕಾಧಿಕಾರಿ ಶಾಂತಾ ಕಡಿ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.