ರಾಯ್ಘಡ್ 28: ಪ್ರವಾಸಿಗರಿದ್ದ ಬಸ್ಸೊಂದು ಮಹಾಬಲೇಶ್ವರದ ಪೋಲಾದ್ಪುರ್ ಘಾಟ್ನಲ್ಲಿ 300 ಅಡಿ ಆಳದ ಪ್ರಪಾತಕ್ಕೆ ಬಿದ್ದು ಕನಿಷ್ಠ 30 ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಶನಿವಾರ ನಡೆದಿದೆ.
ದಾಪೋಲಿ ಕೃಷಿ ವಿವಿಯ ವಿದ್ಯಾಥರ್ಿಗಳು ಮತ್ತು ಸಿಬಂದಿಗಳು ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ದುರಂತಕ್ಕೀಡಾಗಿದೆ ಎಂದು ಪ್ರಾಥಮಿಕ ವರದಿಗಳಿಂದ ಸ್ಪಷ್ಟವಾಗಿದೆ. ಬಸ್ನಲ್ಲಿ ಒಟ್ಟು 43 ಮಂದಿ ಇದ್ದರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪುಣೆಯಿಂದ ಎನ್ಡಿಆರ್ಎಫ್ ತಂಡ, ಪೊಲೀಸರು ದೌಡಾಯಿಸಿದ್ದು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ಹೆಚ್ಚಿನವರು ಗಂಭೀರವಾಗಿ ಗಾಯಗೊಂಡಿರುವ ಸಾಧ್ಯತೆಗಳಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.