ರಾಜ್ಯದಲ್ಲಿ 23ನಕಲಿ ಇಂಜಿನೀಯರಿಂಗ ಕಾಲೇಜು


ನವದೆಹಲಿ 31: ಕನರ್ಾಟಕ ಸೇರಿದಂತೆ ದೇಶಾದ್ಯಂತ ಸುಮಾರು 277 ನಕಲಿ ಇಂಜಿನಿಯರಿಂಗ್ ಕಾಲೇಜುಗಳು ನಡೆಯುತ್ತಿದ್ದು, ಇದರಲ್ಲಿ ರಾಜಧಾನಿ ದೆಹಲಿಯೊಂದರಲ್ಲಿಯೇ 66 ಇಂತಹ ನಕಲಿ ಇಂಜಿನಿಯರಿಂಗ್ ಕಾಲೇಜು ಕಾರ್ಯ ನಿರ್ವಹಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ! 

ರಾಜ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಸತ್ಯಪಾಲ್ ಸಿಂಗ್ ಮಂಗಳವಾರ ಲೋಕಸಭೆಗೆ ನೀಡಿದ ಅಂಕಿ ಅಂಶದಲ್ಲಿ ಈ ವಿವರ ದಾಖಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. 

ದೇಶದ ರಾಜಧಾನಿಯಲ್ಲಿ 66 ನಕಲಿ ಇಂಜಿನಿಯರಿಂಗ್ ಕಾಲೇಜು ಇದ್ದರೆ, ತೆಲಂಗಾಣದಲ್ಲಿ 35 ಹಾಗೂ ಪಶ್ಚಿಮ ಬಂಗಾಳದಲ್ಲಿ 27 ನಕಲಿ ಕಾಲೇಜುಗಳು ಇದ್ದಿರುವುದಾಗಿ ವಿವರಿಸಿದೆ. 

ಈ ಪಟ್ಟಿಯಲ್ಲಿ ಕನರ್ಾಟಕ ರಾಜ್ಯ ಕೂಡಾ ಸ್ಥಾನ ಪಡೆದುಕೊಂಡಿದ್ದು, ರಾಜ್ಯದಲ್ಲಿ 23 ನಕಲಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಹೀಗೆಯೇ ಉತ್ತರಪ್ರದೇಶದಲ್ಲಿ 22, ಹಯರ್ಾಣದಲ್ಲಿ 18, ಮಹಾರಾಷ್ಟ್ರದಲ್ಲಿ 16 ಹಾಗೂ ತಮಿಳುನಾಡಿನಲ್ಲಿ 11 ನಕಲಿ ಕಾಲೇಜುಗಳು ಇವೆ ಎಂದು ತಿಳಿಸಿದೆ. 

ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಲ್ ಎಜುಕೇಶನ್ (ಎಐಸಿಟಿಇ)ನ ಅನುಮತಿ ಇಲ್ಲದೆ ಈ ಇಂಜಿನಿಯರಿಂಗ್ ಕಾಲೇಜು ಕಾರ್ಯನಿರ್ವಹಿಸುತ್ತಿದೆ ಎಂದು ಲೋಕಸಭೆಗೆ ಸಿಂಗ್ ಅವರು ಲಿಖಿತ ಉತ್ತರ ನೀಡಿದ್ದಾರೆ. ಈ ನಕಲಿ ಕಾಲೇಜುಗಳು ಎಐಸಿಟಿಇಯ ಅನುಮತಿ ಪಡೆಯುವಂತೆ ನಿದರ್ೆಶನ ನೀಡಲಾಗಿದೆ. ಇಲ್ಲದಿದ್ದರೆ ಕಾಲೇಜನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.