20ನೇ ದಿನದ ಬಸವಪುರಾಣ ಕಾರ್ಯಕ್ರಮ

ಲೋಕದರ್ಶನ ವರದಿ

ಬೈಲಹೊಂಗಲ: ಡಾ.ಶಿವಬಸವ ಸ್ವಾಮೀಜಿಗಳ ಮಾತು ಮಾಣಿಕ್ಯವಾಗಿತ್ತು. ನಾಗನೂರಿಗೆ ತಂಪೆರೆಯುವ ಯೋಗಿಯಾಗಿ, ಬೆಳಗಾವಿಗೆ ಜ್ಞಾನ ನೀಡುವ ಸುಜ್ಞಾನಿಯಾಗಿ ಭಕ್ತರ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ಅಡಳಟ್ಟಿ ದುರದುಂಡೀಶ್ವರ ಶಾಖಾ ಮಠದ ಪಂಚಾಕ್ಷರಿ  ಸ್ವಾಮೀಜಿ ಹೇಳಿದರು. 

     ತಾಲೂಕಿನ ನಾಗನೂರು ರುದ್ರಾಕ್ಷಿಮಠದಲ್ಲಿ ಡಾ.ಶಿವಬಸವ ಸ್ವಾಮೀಜಿ ಪುಣ್ಯಸ್ಮರಣೆಯ ರಜತಮಹೋತ್ಸವ, ಡಾ.ಸಾವಳಗೀಶ್ವರರ ನಿರಂಜನ ಪಟ್ಟಾಧಿಕಾರ ಮಹೋತ್ಸವದಂಗವಾಗಿ  ನಡೆದ 20 ನೇ ದಿನದ ಬಸವಪುರಾಣ  ಕಾರ್ಯಕ್ರಮದಲ್ಲಿ ಮಾತನಾಡಿ,  ಈ ಪುಟ್ಟ ನಾಗನೂರು ಗ್ರಾಮದಲ್ಲಿ ಶ್ರೀಗಳ ಪಟ್ಟಾಧಿಕಾರ ನಿಮಿತ್ಯ ನಾಡಿನ ವಿವಿಧ ಮಠಾಧೀಶರನ್ನು ಆಹ್ವಾನಿಸಿ ಸಾಧು, ಶರಣರ, ವಿದ್ವಾಂಸರ ಅಮೃತವಾಣಿಗಳನ್ನು ಭಕ್ತರಿಗೆ ಉಣಬಡಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. 

ಶ್ರೀಮಠದ ಪರಂಪರೆಯನ್ನು ಡಾ.ಸಾವಳಗಿ ಶ್ರೀಗಳು ಮುಂದುವರೆಸಿಕೊಂಡು ಭಕ್ತರ ಮನ ಗೆಲ್ಲಬೇಕು ಎಂದರು.

    ನವದೆಹಲಿ ಮಹಾಂತ ದೇವರು ಮಾತನಾಡಿ,ನಾಗನೂರು ಭಕ್ತರ ಮನದಾಳದಲ್ಲಿ ಡಾ.ಶಿವಬಸವ ಸ್ವಾಮೀಜಿ, ಡಾ.ಸಿದ್ದರಾಮ ಸ್ವಾಮೀಜಿ ಅಜರಾಮರಾಮರವಾಗಿ ಉಳಿದಿದ್ದಾರೆ ಎಂದರು.

ಹಂದಿಗುಂದ ಶಿವಾನಂದ ಸ್ವಾಮೀಜಿ ಬಸವ ಪುರಾಣ ಪ್ರವಚನ ನೀಡಿದರು.

     ವೇದಿಕೆ ಮೇಲೆ ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಮಲ್ಲನಕೇರೆ ಚನ್ನಬಸವ ಸ್ವಾಮೀಜಿ, ಶಿರಸಂಗಿ ಸಂಗಮೇಶ್ವರ ಸ್ವಾಮೀಜಿ, ಡಾ.ಸಾವಳಗೀಶ್ವರರು, ಬಟಕುಕರ್ಿ ಬಸವಲಿಂಗ ಸ್ವಾಮೀಜಿ, ಗಣ್ಯರಾದ ಎಸ್.ವಿ.ಗಾವಡಿ, ಜಿ.ಪಂ ಸದಸ್ಯೆ ಲಾವಣ್ಯ ಶಿಲ್ಲೇದಾರ, ಪ್ರಸಾದ ಕೋಟ್ನಿಮಠ, ಸಿದ್ದಯ್ಯ ಹಿರೇಮಠ, ಕುಮಾರಸ್ವಾಮಿ ಕೋಟ್ನಿಮಠ ಮತ್ತಿತರರು ಇದ್ದರು.

      ಈ ಸಂದರ್ಭದಲ್ಲಿ  ಸಹಸ್ರಾರು ಸದ್ಭಕ್ತರು ಪಾಲ್ಗೊಂಡಿದ್ದರು.