ರವಾಂಡಾ: ರವಾಂಡಾಗೆ ಭೇಟಿ ನೀಡಿರುವ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರವಾಂಡಾದ ಸ್ಥಳೀಯ ತಳಿಯ 200 ಹಸುಗಳನ್ನು ಉಡುಗೊರೆಯಾಗಿ ನೀಡಿದರು.
ಇಂದು ದಕ್ಷಿಣ ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ರವಾಂಡಾದ ಮಾದರಿ ಗ್ರಾಮ ರವೆರು ಗ್ರಾಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, 200 ಹಸುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅಲ್ಲಿನ ಸ್ಥಳೀಯ ಸಕರ್ಾರ ಜಾರಿಗೆ ತಂದಿರುವ 'ಗಿರಿಂಕಾ' ಯೋಜನೆಗೆ ತಮ್ಮ ಸಹಾಯಹಸ್ತ ಚಾಚಿದ್ದಾರೆ.
ರವಾಂಡಾ ಅಧ್ಯಕ್ಷರು 2006ರಲ್ಲಿ ಪ್ರತಿಯೊಂದು ಬಡ ಕುಟುಂಬಮೊಂದಕ್ಕೆ ಹಸು ಮೊಂದನ್ನು ಉಡುಗೊರೆ ನೀಡುವ 'ಗಿರಿಂಕಾ' ಯೋಜನೆಯನ್ನು ಜಾರಿಗೆ ತಂದಿದ್ದರು. ಇಲ್ಲಿಯವರೆಗೆ 3.5 ಲಕ್ಷ ಫಲಾನುಭವಿಗಳಿಗೆ ಯೋಜನೆ ಮುಟ್ಟಿದೆ.
ಬಡಕುಟುಂಬ ಮೊಂದಕ್ಕೆ ಒಂದು ಹಸುವನ್ನು ಸರಕಾರ ಉಡುಗೊರೆಯಾಗಿ ನೀಡುತ್ತದೆ. ಆ ಹಸುವಿನಿಂದ ಜನಿಸುವ ಮೊದಲ ಕರು ಹೆಣ್ಣಾಗಿದ್ದರೆ ಆ ಕರುವನ್ನು ಆ ಕುಟುಂಬ ನೆರೆಮನೆಯವರಿಗೆ ಉಡುಗೊರೆಯಾಗಿ ನೀಡುವುದು ಈ ಯೋಜನೆಯ ವಿಶೇಷ. ಇದು ಭಾರತದ ಹಳೆಯ ಸಂಪ್ರಾದಾಯ (ಬಳುವಳಿ ಪದ್ಧತಿ) ಕೂಡಾ ಆಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅದೇ ದೇಶದ 200 ಹಸುಗಳನ್ನು ಉಡುಗೂರೆಯಾಗಿ ನೀಡಿದ್ದಾರೆ.
ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಮೊದಲ ದಿನ ರವಾಂಡಕ್ಕೆ ಭೇಟಿ ನೀಡಿದ್ದು, ಆ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರವಾಂಡ ಭೇಟಿಯ ನಂತರ ಜು. 24, 25ರಂದು ಉಗಾಂಡಕ್ಕೆ ಭೇಟಿ ನೀಡಲಿದ್ದಾರೆ.
ಸುಮಾರು 20 ವರ್ಷಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಉಗಾಂಡಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಇನ್ನು, ಪ್ರವಾಸದ ಕೊನೆಯ ಹಂತದಲ್ಲಿ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದು, 25ರಿಂದ 27ರವರೆಗೆ ಜೊಹಾನ್ಸ್ಬಗರ್್ನಲ್ಲಿ ಆಯೋಜಿಸಲಾಗಿರುವ ಬ್ರಿಕ್ಸ್ ಮಹಾ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ.