ಬಾಗಲಕೋಟೆ: ಬಾಗಲಕೋಟೆಯ ಐಸಿಐಸಿಐ ಬ್ಯಾಂಕ್ ವತಿಯಿಂದ ಪ್ರವಾಹ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ರೂ.20 ಲಕ್ಷ ರೂ.ಗಳ ಚೆಕ್ನ್ನು ಗುರುವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಸಲ್ಲಿಸಿದರು.
ಐ.ಸಿ.ಐ.ಸಿ.ಐ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ರಾಜು ಇಂಡರಗಿ, ಸರಕಾರಿ ವ್ಯವಹಾರಗಳ ವ್ಯವಸ್ಥಾಪಕ ರಾಜೇಶ ಬೆಳವಲ್, ಶಾಖಾ ವ್ಯವಸ್ಥಾಪಕ ಮಲ್ಲಪ್ಪ ಬಡದಾನಿ ಹಾಗೂ ಪ್ರಮೋದ ಕೋಟಿ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಗರಿಮಾ ಪನ್ವಾರ, ಉಪವಿಭಾಗಾಧಿಕಾರಿ ಎಚ್.ಜಯಾ ಇದ್ದರು.