ಕಠ್ಮಂಡು, ಸೆ 27 : ಭಾರತ ಕಿರಿಯರ ಫುಟ್ಬಾಲ್ ತಂಡ ಇಲ್ಲಿ ನಡೆಯುತ್ತಿರುವ 18 ವಯೋಮಿತಿ ಸ್ಯಾಫ್ ಚಾಂಪಿಯನ್ಶಿಪ್ ಟೂನರ್ಿಯಲ್ಲಿ ಫೈನಲ್ಗೆ ಪ್ರವೇಶ ಮಾಡಿದೆ.
ಶುಕ್ರವಾರ ನಡೆದ ಸೆಮಿಫೈನಲ್ ಕಾದಾಟದಲ್ಲಿ ನರೇಂದರ್ ಗೆಹ್ಲೋಟ್ (7ನೇ ನಿ.), ಮನ್ವೀರ್ ಸಿಂಗ್ (79ನೇ ನಿ.) ಹಾಗೂ ನಿಂಥೊಯಿಂಗನ್ಬಾ ಮೀಟೈ (81ನೇ ನಿ.) ಅವರ ಮೂರು ಗೋಲುಗಳು ಮಾಲ್ಡೀವ್ಸ್ ತಂಡದ ಅಹ್ನಾಫ್ ರಶೀಧ್ (45+1) ನೀಡಿದ ಒಂಡು ಗೋಲು ಕೊಡುಗೆಯಿಂದ ಭಾರತ ತಂಡ 4-0 ಅಂತರದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಭಾನುವಾರ ನಡೆಯುವ ಫೈನಲ್ ಹಣಾಹಣಿಯಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
ಪಂದ್ಯದ ಆರಂಭದಿಂದಲೇ ಆಕ್ರಮಣಾಕಾರಿ ಪ್ರದರ್ಶನ ತೋರಿದ ಭಾರತೆಕ್ಕೆ ನರೇಂದ್ರ್ ಗೆಹ್ಲೋಟ್ ಅವರು 7ನೇ ನಿಮಿಷದಲ್ಲೇ ಗೋಲಿನ ಖಾತೆ ತೆರೆದರು. ಗೆಹ್ಲೋಟ್ ಅವರು ಇಂಟರ್ಕಾಂಟಿನೆಂಟಲ್ ಹಿರಿಯ ತಂಡದಲ್ಲಿ ಗಮನ ಸೆಳೆದಿದ್ದರು. ಮೊದಲನೇ ಅವಧಿ ಮುಕ್ತಾಯೆಕ್ಕೆ ಭಾರತ 1-0 ಮುನ್ನಡೆ ಪಡೆಯಿತು. ನಂತರ ಎರಡನೇ ಅವಧಿಯ ಆರಂಭದಲ್ಲೇ ಮಾಲ್ಡೀವ್ಸ್ ತಂಡದ ಅಹ್ನಾಫ್ ರಶೀಧ್ ಭಾರತ ಗೋಲಿನ ಕೊಡುಗೆ ನೀಡಿದರು. ಇದರಿಂದ ಭಾರತ 2-0 ಮುನ್ನಡೆ ಪಡೆಯಿತು.
ಪಂದ್ಯದ ಅಂತಿಮ ಘಟ್ಟದವರೆಗೂ ಎರಡೂ ತಂಡಗಳ ನಡುವೆ ಭಾರಿ ಹೋರಾಟ ನಡೆಯಿತು. ಮನ್ವೀರ್ ಸಿಂಗ್ 79ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಹಾಗೂ 81ನೇ ನಿಮಿಷದಲ್ಲಿ ನಿಂಥೊಯಿಂಗನ್ಬಾ ಮೀಟೈ ಗಳಿಸಿದ ಗೋಲುಗಳ ಸಹಾಯದಿಂದ ಭಾರತ ನಿಗದಿತ ಅವಧಿ ವಾುುಕ್ತಾಯೆಕ್ಕೆ 4-0 ಮುನ್ನಡೆ ಗಳಿಸಿತು. ಗೋಲು ಗಳಿಸಲು ಬಾರಿ ಕಾದಾಟ ನಡೆಸಿದ ಮಾಲ್ಡೀವ್ಸ್ ತಂಡ ಭಾರತದ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ವಿಫಲವಾಯಿತು.