ಮಂಜುನಾಥ ಸೈನಿಕ ತರಬೇತಿ ಕೇಂದ್ರದ 16ನೇ ವಾರ್ಷಿಕೋತ್ಸವ

ಲೋಕದರ್ಶನ ವರದಿ

ಮೂಡಲಗಿ 29: ವಿದ್ಯಾರ್ಥಿಗಳಿಗೆ ಸಂಸ್ಕಾರ ಸಿಗಲಿಲ್ಲವೆಂದರೆ ಉತ್ತಮ ಪ್ರಜೆಯಾಗಲು ಸಾಧ್ಯವಿಲ್ಲ. ಮಕ್ಕಳನ್ನು ಪೋಷಕರು ಚೆನ್ನಗಿ ಬೆಳೆಸಿ ಸಂಸ್ಸೃತಿಯ ಮೌಲ್ಯ ಕಲಿಸಿದರೆ ದೇಶದ ಉನ್ನತ ವ್ಯಕ್ತಿಯಾಗಲು ಸಾಧ್ಯವಿದೆ  ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ ಹೇಳಿದರು. 

ಅವರು ಮಂಜುನಾಥ ಸೈನಿಕ ತರಬೇತಿ ಕೇಂದ್ರ ಮತ್ತು ಎಲ್.ವಾಯ್.ಅಡಿಹುಡಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮಂಜುನಾಥ ಮೋಟಾರ ಡ್ರೈವ್ಹಿಂಗ್ ಸ್ಕೂಲ್ ಇವುಗಳ 16ನೇ ವಾಷರ್ಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ನನ್ನ ದೇಶ ನನ್ನ ಜನವೆಂಬ ಭಾವನೆಯಿಂದಲೇ ನಮಗೆ ನೆಮ್ಮದಿ ಸಿಗುವುದು. 

ದೇಶ ನಮಗೆ ಏನು ಕೊಟ್ಟಿದೆ ಎಂಬ ಭಾವ ತೊರೆದು ದೇಶಕ್ಕಾಗಿ ನಾವೇನೂ ಮಾಡಿದ್ದೇವೆ ಎಂದು ಯೋಚಿಸಬೇಕು.  ಈ ಸಂಸ್ಥೆಗೆ  ಸೈನಿಕ ತರಭೇತಿ ಮತ್ತು ಪೋಲಿಸ್ ಪೂರ್ವಬಾವಿ ತರಬೇತಿ ಪಡೆಯಲು ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯಗಳಿಂದ ಶಿಬಿರಾರ್ಥಿಗಳು ಬರುತ್ತಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಬ್ಬ ವಿದ್ಯಾಥರ್ಿಯ ಭವಿಷ್ಯವೂ ಶಿಕ್ಷಣದಿಂದ ರೂಪಿತವಾಗುತ್ತದೆ ಜೊತೆಗೆ  ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಸರ್ವಾ೦ಗೀಣ ಅಭಿವೃದ್ಧಿಗೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ತೋರಿಸಿಕೊಳ್ಳಲು ಶಾಲಾ ವೇದಿಕೆಗಳು ಅನುಕೂಲವಾಗುತ್ತದೆ ಎಂದರು. ಸಿಪಿಐ ವೆಂಕಟೇಶ್ ಮುರನಾಳ ಮಾತನಾಡಿ, ಈ ಸಂಸ್ಥೆಯ ಸೈನಿಕ ಶಿಬಿರಾರ್ಥಿಗಳು ಇತ್ತಿಚಿಗೆ ಸಂಭವಿಸಿದ ನೆರೆ ಪ್ರವಾಹ ಸಂದರ್ಭದಲ್ಲಿ  ಪೋಲಿಸ್ ಇಲಾಖೆಯ ಜೊತೆ ಕೈಜೋಡಿಸಿ ನೆರೆ ಸಂತ್ರಸ್ಥರಿಗೆ ಆಹಾರ, ಬಟ್ಟೆ, ಹಾಸಿಗೆ ಇನ್ನಿತರ ಅವಶ್ಯಕ ವಸ್ತುಗಳನ್ನು  ಸಾರ್ವಜನಿಕರಿಂದ ಪಡೆದು ಪ್ರತಿಯೊಂದು ಹಳ್ಳಿಗೆ ತೆರಳಿ ನೆರೆ ಸಂತ್ರಸ್ತರಿಗೆ ತಲುಪಿಸುವ ಕಾರ್ಯ ಮಾಡಿರುವುದು ಶ್ಲಾಘನೀಯವಾಗಿದೆ.  

ಗ್ರಂಥಪಾಲಕ ಬಿ.ಪಿ. ಬಂದಿ ಮಾತನಾಡಿ, ಶಿಷ್ಯ ಗುರುವನ್ನು ಮಿರಿಸಬೇಕು ಎಂಬ ನುಡಿಯಂತೆ ಈ ಸಂಸ್ಥೆಯ ಸಂಸ್ಥಾಪಕ  ಲಕ್ಷ್ಮಣ ಅಡಿಹುಡಿ ಮಂಜುನಾಥ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಅದರ ಜೊತಯಲ್ಲಿಯೇ ಗ್ರಾಮೀಣ ಭಾಗದ ಯುವಕರಿಗೆ ಅನುಕೂಲವಾಗಲೆಂದು  ಸೈನಿಕ ತರಭೇತಿ ಕೇಂದ್ರ ಪ್ರಾರಂಭಿಸಿ ಭಾರತೀಯ ಸೇನೆಗೆ  ಸೇರ ಬಯಸುವ ಶಿಬಿರಾರ್ಥಿಗಳಿಗೆ ತರಭೇತಿ ನೀಡಿ ದೇಶ ಸೇವೆಗೆ ಅಣಿಗೊಳಿಸುವುದರ ಜೊತೆಗೆ ತಮ್ಮನ್ನು ತಾವು ಸಮಾಜ ಸೇವೆಯಲ್ಲಿೆ ತೊಡಗಿಸಿಕೊಂಡಿರುವುದು ಸಂತಸದ ವಿಷಯವಾಗಿದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಬಿ.ಬಿ ಹಂದಿಗುಂದ ಯುವ ಜನತೆಗೆ  ವಾಹನ ಚಾಲನೆಯ ತರಬೇತಿ ಹಾಗೂ ರಸ್ತೆ ಸುರಕ್ಷತೆಯ ಮಾಹಿತಿ ಜೆತೆಗೆ ವಾಹನ ಚಾಲನೆಯ ಪರಾವನಿಗೆ ಮಾಡಿ ಕೊಡುವುದರಿಂದ ಸಾವಿರಾರು ಯುವ ಜನತೆಯೂ ತಮ್ಮ ಸ್ವಂತ ಜೀವನ ರೂಪಿಸಿಕೊಳ್ಳುವುದಕ್ಕೆ ಈ ಸಂಸ್ಥೆ ಅನುಕೂಲವಾಗಿದೆ ಎಂದರು.

ಸಾನಿಧ್ಯವಹಿಸಿದ ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶ್ರೀ ಶಿವಾನಂದ ಸ್ವಾಮಿಜೀ ಆಶೀರ್ವಚನ ನೀಡಿ, ಮಂಜುನಾಥ ಶಿಕ್ಷಣ ಸಂಸ್ಥೆಯೂ ಶೈಕ್ಷಣೀಕ, ಸಾಮಾಜಿಕ ಸಂಸ್ಥೆಯ ಜೊತೆಗೆ  ಪರಿಸರ ಪ್ರೇಮಿ ಸಂಸ್ಥೆಯಾಗಿಯೂ ಗುರುತಿಸಿಕೊಂಡಿರುವುದಕ್ಕೆ ಇಲ್ಲಿ ನಡೆದ ಸತ್ಕಾರವೇ ಸಾಕ್ಷಿಯಾಗಿದೆ. ಪ್ರತಿಯೊಬ್ಬ ಗಣ್ಯರಿಗೂ ಗಿಡ ಉಡುಗೊರೆಯಾಗಿ ನೀಡುವ ಮೂಲಕ ಸನ್ಮಾನಿಸಿದ ಪ್ರಥಮ ಸಂಸ್ಥೆ ಇದಾಗಿದೆ. ಪ್ರತಿಯೊಂದು ಸಂಸ್ಥೆಯೂ ಕಾರ್ಯಕ್ರಮಗಳಲ್ಲಿ  ಇಂತಹ  ಬದಲಾವಣೆ  ಕೈಗೊಂಡರೆ ಸಮಾಜದಲ್ಲಿ ಮತ್ತು ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸುಧೀರ ನಾಯರ್, ರಾಮಣ್ಣಾ ಮಂಟೂರ, ಯಲ್ಲಪ್ಪಾ ಕಂಕಣವಾಡಿ ಇವರನ್ನು ಸತ್ಕರಿಸಲಾಯಿತು.

  ವೇದಿಕೆಯಲ್ಲಿ ಕ್ಷೇತ್ರ ಶಿಕ್ಪ್ಷಣಾಧಿಕಾರಿ ಎ.ಸಿ.ಮನ್ನಿಕೇರಿ, ಕೆ.ಪಿ.ಮಗದುಮ್, ಶಿವಪ್ಪಾ ಜೊಡಟ್ಟಿ, ಆಯ್.ಎಮ್.ಹಿರೇಮಠ, ಪಿ.ಎಸ್.ಮಲ್ಲಾಪೂರ, ವಿ.ಕೆ.ಪಾಟೀಲ, ಸುಧಾಕರ ಉಂದ್ರಿ, ಶಿವಾನಂದ ಮುಧೋಳ, ಶಿವಬಸು ಗಾಡವಿ, ಕೆ.ಬಿ.ಗಿರೆನ್ನವರ, ಎ.ಎಚ್.ಹವಲ್ದಾರ್, ಸುಧೀರ ನಾಯರ್, ಸುಭಾಸ್ ಗೊಡ್ಯಾಗೋಳ, ಸತೀಶ ಲಂಕೆಪ್ಪನವರ,  ಭಗವಂತ ಉಪ್ಪಾರ, ಈಶ್ವರ ಡವಳೇಶ್ವರ, ರಾಜಶೇಖರ ಮಗದುಮ್, ಶ್ರೀಕಾಂತ ಮೊರೆ, ಎಚ್.ಎಮ್. ಕಂಕಣವಾಡಿ, ಅಜ್ಜಪ್ಪಾ ಕಂಕಣವಾಡಿ, ಹಾಲಪ್ಪಾ ಅಂತರಗಟ್ಟಿ, ಶಿವಬಸು ಕಂಕಣವಾಡಿ ಉಪಸ್ಥಿತರಿದ್ದರು.

  ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.

ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಸ್ವಾಗತಿಸಿದರು, ಪ್ರಧಾನ ಗುರುಮಾತೆ ಪಲ್ಲವಿ ಭಂಡಾರಿ ವರದಿವಾಚಿಸಿದರು, ಶಿಲ್ಪಾ ಗಡಾದ ನಿರೂಪಿಸಿದರು. ಸಾರಿಕಾ ಮೋಹಿತೆ ವಂದಿಸಿದರು.